ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ನೆಲ್ಯಾಡಿ ಲೀಜನ್ ಪದಗ್ರಹಣ

0

ನೆಲ್ಯಾಡಿ: ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ಇದರ ನೆಲ್ಯಾಡಿ ಲೀಜನ್‌ನ 2023-24ನೇ ಸಾಲಿನ ಆಡಳಿತ ಮಂಡಳಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಎ.26ರಂದು ರಾತ್ರಿ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ನ್ಯೂ ಮಿಲೆನಿಯಂ ಹಾಲ್‌ನಲ್ಲಿ ನಡೆಯಿತು.


ಮುಖ್ಯ ಅತಿಥಿಯಾಗಿದ್ದ ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ಇದರ ಪೂರ್ವ ರಾಷ್ಟ್ರೀಯ ಅಧ್ಯಕ್ಷ ಡಾ.ಕೇದಿಗೆ ಅರವಿಂದ ರಾವ್‌ರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾವು ಬೆಳೆದರೆ ಸಾಲದು. ಇತರರನ್ನೂ ಬೆಳೆಸಬೇಕೆಂಬ ಧ್ಯೇಯದೊಂದಿಗೆ 40 ವರ್ಷ ದಾಟಿದ ಜೇಸಿ ಸದಸ್ಯರಿಗಾಗಿ ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ಆರಂಭಗೊಂಡಿದೆ. ಘಟಕ ಇನ್ನಷ್ಟೂ ವಿಸ್ತಾರಗೊಳ್ಳಬೇಕು ಎಂದು ಹೇಳಿದ ಅವರು, ಸೀನಿಯರ್ ಛೇಂಬರ್ ಹುಟ್ಟುಹಾಕಿದ ಪಿ.ಪಿ.ಪ್ರೇಮಾನಂದ ಅವರ ಹೆಸರಿನಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಚ್ಯಾರಿಟಿ ಫಂಡ್ ಆರಂಭಿಸಲಾಗಿದೆ. ಕಳೆದ ವರ್ಷ 33 ವಿದ್ಯಾರ್ಥಿಗಳಿಗೆ 3.30 ಲಕ್ಷ ರೂ., ಆರ್ಥಿಕ ನೆರವು ನೀಡಲಾಗಿದೆ. ಮೂರು ವರ್ಷ ಪೂರೈಸಿರುವ ನೆಲ್ಯಾಡಿ ಲೀಜನ್ ಮುಂದಿನ ದಿನಗಳಲ್ಲಿ ಉತ್ತಮ ಕೆಲಸ ಮಾಡಲಿ. ರಾಷ್ಟ್ರಮಟ್ಟದಲ್ಲಿ ಮಿಂಚಲಿ ಎಂದು ಶುಭಹಾರೈಸಿದರು.

ರಾಷ್ಟ್ರೀಯ ನಿರ್ದೇಶಕ ಚಿತ್ರಕುಮಾರ್‌ರವರು ಮಾತನಾಡಿ, ನೆಲ್ಯಾಡಿ ಘಟಕ ಲೀಜನ್‌ಗೆ ಸೀಮಿತಗೊಳ್ಳದೇ ರಾಷ್ಟ್ರಮಟ್ಟದಲ್ಲಿ ಸೇವೆ ನೀಡಬೇಕು. ಇದಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.

ರಾಷ್ಟ್ರೀಯ ಸಂಯೋಜಕ ಡಾ.ಸದಾನಂದ ಕುಂದರ್‌ರವರು ಮಾತನಾಡಿ, ಜೇಸಿಯಲ್ಲಿ ಕಾರ್ಯನಿರ್ವಹಿಸಿ ಪ್ರಬುದ್ಧರಾದವರೆಲ್ಲರೂ ಸೀನಿಯರ್ ಛೇಂಬರ್ ಸೇರಿಕೊಂಡು ಜೇಸಿಗೆ ಸಹಕಾರ ನೀಡುವುದರೊಂದಿಗೆ ಸಂಘಟನೆ ಬೆಳೆಸಬೇಕೆಂದು ಹೇಳಿದರು.

ಹೊಸ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದ ರಾಷ್ಟ್ರೀಯ ಉಪಾಧ್ಯಕ್ಷ ಜಿ.ಕೆ.ಹರಿಪ್ರಸಾದ್ ರೈಯವರು ಮಾತನಾಡಿ, ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ 1997ರಲ್ಲಿ ಕೇರಳದಲ್ಲಿ ಆರಂಭಗೊಂಡಿದ್ದು ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದೆ. ಈ ಸಂಘಟನೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಕೇದಿಗೆ ಅರವಿಂದ್ ರಾವ್ ಅವರಿಗೆ ಸಲ್ಲಬೇಕು ಎಂದರು.


ಪೂರ್ವಾರ್ಧದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿದ್ದ ವೆಂಕಟ್ರಮಣ ಆರ್. ಮಾತನಾಡಿ, ನೆಲ್ಯಾಡಿ ಲೀಜನ್‌ನ 3ನೇ ಅಧ್ಯಕ್ಷರಾಗಿ 1 ವರ್ಷದ ಅವಧಿಯಲ್ಲಿ ನೇತ್ರಾ ಚಿಕಿತ್ಸಾ ಶಿಬಿರ ಸೇರಿದಂತೆ ವಿವಿಧ ಚಟುವಟಿಕೆ ಮಾಡಲಾಗಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ಸೀನಿಯರ್ ಛೇಂಬರ್‌ನ ಸದಸ್ಯರಿಗೆ ಶಾಲು ಹಾಕಿ ಗೌರವಿಸಿದರು.

ಉತ್ತರಾರ್ಧದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ನೂತನ ಅಧ್ಯಕ್ಷ ನಾರಾಯಣ ಎನ್ ಬಲ್ಯ ಅವರು, ಹಿರಿಯ ಜೇಸಿಗಳ ಸಹಕಾರ, ಮಾರ್ಗದರ್ಶನದೊಂದಿಗೆ ಇನ್ನೊಂದು ವರ್ಷ ಅವಧಿಯಲ್ಲಿ ನನ್ನಿಂದಾಗುವ ನ್ಯಾಯ ಒದಗಿಸಲು ಬದ್ಧನಾಗಿರುವುದಾಗಿ ಹೇಳಿದರು.


ಪದಗ್ರಹಣ:
ನೂತನ ಅಧ್ಯಕ್ಷ ನಾರಾಯಣ ಎನ್.ಬಲ್ಯ ಅವರಿಗೆ ನಿರ್ಗಮನ ಅಧ್ಯಕ್ಷ ವೆಂಕಟ್ರಮಣ ಆರ್.ಅವರು ಪ್ರಮಾಣವಚನ ಬೋಧಿಸಿ ಪಿನ್ ತೊಡಿಸಿ ಅಧಿಕಾರ ಹಸ್ತಾಂತರ ಮಾಡಿದರು. ನಿರ್ಗಮನ ಕಾರ್ಯದರ್ಶಿ ಜೋನ್ ಪಿ.ಎಸ್.ಅವರು ನೂತನ ಕಾರ್ಯದಶಿ ವಿಶ್ವನಾಥ ಶೆಟ್ಟಿ ಕೆ, ಹಾಗೂ ನಿರ್ಗಮನ ಕೋಶಾಧಿಕಾರಿ ಪ್ರಕಾಶ್ ಕೆ.ವೈ.ಅವರು ನೂತನ ಕೋಶಾಧಿಕಾರಿ ಪ್ರಶಾಂತ್ ಸಿ.ಹೆಚ್.ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು. ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ, ಕೋಶಾಧಿಕಾರಿ ಪ್ರಶಾಂತ್ ಸಿ.ಹೆಚ್., ಉಪಾಧ್ಯಕ್ಷರಾದ ಪಿ.ಎಂ.ಉಲಹನ್ನನ್, ಪ್ರಕಾಶ್ ಕೆ.ವೈ., ಜಯಂತಿ ಬಿ.ಎಂ., ಜೊತೆ ಕಾರ್ಯದರ್ಶಿ ಪುರಂದರ ಗೌಡ ಡಿ., ನಿರ್ದೇಶಕರಾದ ರವೀಂದ್ರ ಟಿ., ಚಂದ್ರಶೇಖರ ಬಾಣಜಾಲು, ವಿ.ಆರ್.ಹೆಗ್ಡೆ, ಜಾನ್ ಪಿ.ಎಸ್., ಜಯಾನಂದ ಬಂಟ್ರಿಯಾಲ್, ಮೋಹನ್ ಕುಮಾರ್ ಡಿ.,, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾನಾರಾಯಣ ಬಲ್ಯ, ಕಾರ್ಯದರ್ಶಿ ಸೌಮ್ಯ ವಿಶ್ವನಾಥ ಶೆಟ್ಟಿ ಹಾಗೂ ಖಜಾಂಜಿ ಎಲ್ಸಿ ಪ್ರಕಾಶ್ ಅವರಿಗೆ ಅಧ್ಯಕ್ಷ ನಾರಾಯಣ ಎನ್.ಬಲ್ಯ ಅವರು ಪ್ರಮಾಣ ವಚನ ಬೋಧಿಸಿದರು.


ಸನ್ಮಾನ:
ನೆಲ್ಯಾಡಿ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ 33 ವರ್ಷ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಜನಾರ್ದನ ಟಿ., ಹಾಗೂ ದಿವ್ಯ ದಂಪತಿಗೆ ಶಾಲು,ಸ್ಮರಣಿಕೆ ನೀಡಿ ಸೀನಿಯರ್ ಛೇಂಬರ್ ನೆಲ್ಯಾಡಿ ಲೀಜನ್ ವತಿಯಿಂದ ಸನ್ಮಾನಿಸಲಾಯಿತು. ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ನೆಲ್ಯಾಡಿ ಘಟಕದ ಸ್ಥಾಪಕಾಧ್ಯಕ್ಷ ಅಬ್ರಹಾಂ ವರ್ಗೀಸ್‌ರವರು ಅಭಿನಂದನೆ ಸಲ್ಲಿಸಿದರು. ರಾಷ್ಟ್ರೀಯ ಸಂಯೋಜಕರಾದ ಡಾ.ಸದಾನಂದ ಕುಂದರ್ ಅವರನ್ನೂ ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.


ಕೊಡುಗೆ:
ಅಧ್ಯಕ್ಷ ನಾರಾಯಣ ಎನ್ ಬಲ್ಯ ಅವರು ಚಾರಿಟೇಬಲ್ ಟ್ರಸ್ಟ್‌ಗೆ ದೇಣಿಗೆ ಹಸ್ತಾಂತರಿಸಿದರು. ಅನಾರೋಗ್ಯ ಪೀಡಿತ ಸಾವಿತ್ರಿ ದೋಂತಿಲ ಅವರಿಗೆ ಚಿಕಿತ್ಸೆಗಾಗಿ ದೇಣಿಗೆ ನೀಡಲಾಯಿತು. ಇದೇ ವೇಳೆ ಉಪ್ಪಿನಂಗಡಿ ಸೀನಿಯರ್ ಛೇಂಬರ್‌ನ ಟೈಟಲ್ ಅನ್ನು ನಾರಾಯಣ ಬಲ್ಯ ಅವರು ರಾಷ್ಟ್ರೀಯ ಉಪಾಧ್ಯಕ್ಷ ಹರಿಪ್ರಸಾದ್ ರೈಯವರಿಗೆ ಹಸ್ತಾಂತರಿಸಿದರು.


ಸದಸ್ಯರ ಸೇರ್ಪಡೆ:
ಶೀನಪ್ಪ ನಾಯ್ಕ್, ದಯಾನಂದ ಕೆ.ಆದರ್ಶ ಅವರು ಸೀನಿಯರ್ ಛೇಂಬರ್‌ಗೆ ಸೇರ್ಪಡೆಗೊಂಡರು. ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ನೆಲ್ಯಾಡಿ ಲೀಜನ್ ಸ್ಥಾಪಕಾಧ್ಯಕ್ಷ ಅಬ್ರಹಾಂ ವರ್ಗೀಸ್, ಸೀನಿಯರ್ ಜೇಸಿಗಳಾದ ಪುರಂದರ ಗೌಡ ಡೆಂಜ, ವಿ.ಆರ್.ಹೆಗ್ಡೆ, ಜಯಾನಂದ ಬಂಟ್ರಿಯಾಲ್, ಪುಷ್ಪಾ ನಾರಾಯಣ, ಪ್ರಕಾಶ್ ಕೆ.ವೈ., ದಯಾನಂದ ಕೆ.ಆದರ್ಶ ಅವರು ನೂತನ ಅಧ್ಯಕ್ಷರನ್ನು, ನೂತನ ಸದಸ್ಯರನ್ನು, ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ಇದರ ಮಂಗಳೂರು ಲೀಜನ್ ಅಧ್ಯಕ್ಷ ಅಶೋಕ್ ಕುಮಾರ್ ರೈ, ಕಡಬ ತಾಲೂಕು ಅಧ್ಯಕ್ಷ ವಿಲ್ಸನ್, ನೆಲ್ಯಾಡಿ ಜೆಸಿಐ ಅಧ್ಯಕ್ಷ ದಯಾಕರ ರೈಯವರು ಶುಭಹಾರೈಸಿದರು.


ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ನೆಲ್ಯಾಡಿ ಲೀಜನ್‌ನ ನಿರ್ದೇಶಕ ರವೀಂದ್ರ ಟಿ.,ಅವರು ವೇದಿಕೆಗೆ ಆಹ್ವಾನಿಸಿದರು. ಜಯಂತಿ ಬಿ.ಎಂ. ಅವರು ಸೀನಿಯರ್ ವಾಣಿ ವಾಚಿಸಿದರು. ಪ್ರೊಜೆಕ್ಟ್ ಡೈರೆಕ್ಟರ್ ಮೋಹನ್‌ಕುಮಾರ್ ಸ್ವಾಗತಿಸಿದರು. 2022-23ನೇ ಸಾಲಿನ ಕಾರ್ಯದರ್ಶಿ ಜಾನ್ ಪಿ.ಎಸ್.ವರದಿ ಮಂಡಿಸಿದರು. ಖಜಾಂಜಿ ಪ್ರಶಾಂತ್ ಸಿ.ಹೆಚ್. ಅತಿಥಿಗಳನ್ನು ಗುರುತಿಸಿದರು. ನೂತನ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಬಳಿಕ ಸಹಭೋಜನ ನಡೆಯಿತು.


ಮಂಗಳೂರು ಲೀಜನ್‌ನ ಪೂರ್ವಾಧ್ಯಕ್ಷ ಕಿಶೋರ್ ಫೆರ್ನಾಂಡಿಸ್, ಕಡಬ ಘಟಕದ ಕಾರ್ಯದರ್ಶಿ ಚೆರಿಯನ್ ಪಿ.ಕೆ., ಖಜಾಂಜಿ ಯೋಹನ್ನಾನ್ ಯು., ಪೂರ್ವಾಧ್ಯಕ್ಷ ಚೆರಿಯನ್ ವಿ.ಸಿ., ಪೂರ್ವ ಕಾರ್ಯದರ್ಶಿ ಜೋಕಿಂ ಡಿ.ಸೋಜ, ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯ ಡಾ.ಮುರಳೀಧರ, ಸಂತಜಾರ್ಜ್ ಪ.ಪೂ.ಕಾಲೇಜಿನ ಪ್ರಾಂಶುಪಾಲ ಎಂ.ಕೆ.ಏಲಿಯಾಸ್, ವೆಂಕಪ್ಪ ಗೌಡ ಕೊಲ್ಲಿಮಾರ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here