ಕಾಂಗ್ರೆಸ್ ನಿಂದ ಕನ್ಯಾನದಲ್ಲಿ ಮನೆಭೇಟಿ

0

5000 ಕೋಟಿ ರೂ ಅನುದಾನದಲ್ಲಿ ಬಂಟ್ವಾಳ ಅಭಿವೃದ್ಧಿ ಪಡಿಸಿದ ತೃಪ್ತಿಯಿದೆ : ರಮಾನಾಥ ರೈ

ವಿಟ್ಲ : 2013-18ರ ಅವಧಿಯಲ್ಲಿ ಸಿದ್ದರಾಮಯ್ಯ ಸರಕಾರದಲ್ಲಿ ಸಚಿವನಾಗಿದ್ದಾಗ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಸುಮಾರು ರೂ. 5,000 ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಕಾರ್ಯ ನಿರ್ವಹಿಸಿದ ತೃಪ್ತಿಯಿದೆ ಎಂದು ಬಂಟ್ವಾಳದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ. ರಮಾನಾಥ ರೈ ತಿಳಿಸಿದರು.

ಅವರು ಕನ್ಯಾನದಲ್ಲಿ ಮನೆಭೇಟಿ ಕಾರ್ಯಕ್ರಮದ ವೇಳೆ ಮಾತನಾಡಿದರು. ವಿವಿಧ ಪ್ರಗತಿಪರ ಯೋಜನೆಗಳನ್ನು ತಂದು ಬಂಟ್ವಾಳದ ಸಮಗ್ರ ಅಭಿವೃದ್ಧಿ ಕಾರ್ಯಗಳನ್ನು ನನ್ನ ಅವಧಿಯಲ್ಲಿ ಮಾಡಲಾಗಿತ್ತು. ಆದರೂ, ಕಳೆದ ಬಾರಿ ಅಪಪ್ರಚಾರಗಳ ಮೂಲಕ ನನ್ನನ್ನು ಸೋಲಿಸಲಾಯಿತು. ಆದರೆ ಈ ಬಾರಿ ಬಿಜೆಪಿಯ ಇಂತಹ ಅಪಪ್ರಚಾರಗಳಿಗೆ ಜನತೆ ಕಿವಿಗೊಡುತ್ತಿಲ್ಲ. ಹೀಗಾಗಿ ಬಿಜೆಪಿಗರು ಇನ್ನಷ್ಟು ಅಪಪ್ರಚಾರ, ಸುಳ್ಳು ವದಂತಿಗಳನ್ನು ಹಬ್ಬಿಸಲು ಯತ್ನಿಸುತ್ತಿದ್ದಾರೆ. ಅಂತಹ ಯತ್ನಗಳನ್ನು ವಿಫಲಗೊಳಿಸಲು ನಾವೂ ಸಜ್ಜಾಗಿದ್ದೇವೆ. ಆ ಮೂಲಕ ಚುನಾವಣೆಯಲ್ಲಿ ದಾಖಲೆಯ ಗೆಲುವಿಗೆ ಸಿದ್ಧತೆ ಭರದಿಂದ ನಡೆದಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಜಿ. ಪಂ. ಉಪಾಧ್ಯಕ್ಷ ಎಂ. ಎಸ್. ಮೊಹಮ್ಮದ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಪಂಚಾಯತ್ ರಾಜ್ ಜಿಲ್ಲಾ ಅಧ್ಯಕ್ಷರು ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು,ಕನ್ಯಾನ ವಲಯ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಮಜೀದ್ ಕನ್ಯಾನ, ಪಂಚಾಯತ್ ಅಧ್ಯಕ್ಷ ಅಬ್ದುಲ್ ರಹ್ಮಾನ್, ಸದಸ್ಯ ಕೃಷ್ಣ ನಾಯ್ಕ್, ಪ್ರಮುಖರುಗಳಾದ ಮೊಯಿದಿನ್ ಮಂಡ್ಯೂರು, ಮೊಯಿದಿನ್ ಹಾಜಿ ಬೈರಿಕಟ್ಟೆ, ಗಂಗಾಧರ್ ಕನ್ಯಾನ, ಖಾಸಿಂ ಮಂಡ್ಯೂರು, ಖಾದರ್ ಡಿ.ಕೆ., ವಸಂತ ಬೆಲ್ಚಾಡ ಪಂಜಾಜೆ, ಉಸ್ಮಾನ್ ಸೆಟ್ಟಿಬೆಟ್ಟು, ಇಬ್ರಾಹಿಂ ಕೊಣಾಲೆ, ಅಬೂಬಕ್ಕರ್ ಅಂಗ್ರಿ, ಗಣೇಶ್ ಕುಮಾರ್ ಅರ್ಪಿಣಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here