ಪುತ್ತೂರಿನಲ್ಲಿ ಬಿಜೆಪಿ ಬೇರೆ ಹಿಂದುತ್ವ ಬೇರೆಯಾಗಿದೆ”-ಹೇಮನಾಥ ಶೆಟ್ಟಿ

0

ಸಮಾಜ ಒಡೆಯುವವರಿಗೆ ದೇವರ ಶಾಪತಟ್ಟಿದೆ: ಹೇಮನಾಥ ಶೆಟ್ಟಿ

ಪುತ್ತೂರು: ಹಿಂದುತ್ವ ಅಂದರೆ ಅದು ಬಿಜೆಪಿ ಎಂಬಂತೆ ಬಿಂಬಿಸಿ ಧರ್ಮದ ಹೆಸರಲ್ಲಿ ಸಮಾಜದಲ್ಲಿ ಒಡಕುಮೂಡಿಸಿ ಹಿಂಬಾಗಿಲ ಮೂಲಕ ಅದರ ಲಾಭಪಡೆದು ಅಧಿಕಾರವೇರುತ್ತಿದ್ದ ಬಿಜೆಪಿಗೆ ಈ ಬಾರಿ ಹಿಂದುತ್ವವೇ ಮುಳುವಾಗಿದ್ದು ಸಮಾಜ ಒಡೆಯುವವರಿಗೆ ದೇವರ ಶಾಪತಟ್ಟಿದೆ ಎಂದು ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಹೇಳಿದ್ದಾರೆ.


ಸುಳ್ಯಪದವು ಪೇಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್‌ರೈ ಪರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಹಿಂದುತ್ವ ಬಿಜೆಪಿಯ ಸೊತ್ತಲ್ಲ. ಬಿಜೆಪಿಯಲ್ಲಿರುವ ಹಿಂದೂಗಳು ಮಾತ್ರ ನೈಜ ಹಿಂದೂಗಳು ಎಂಬಂತೆ ಬಿಜೆಪಿ ಬಿಂಬಿಸುತ್ತಿತ್ತು. ಕಾಂಗ್ರೆಸ್‌ನಲ್ಲಿರುವ ಹಿಂದೂಗಳು ಹಿಂದೂಗಳೇ ಅಲ್ಲ ಅವರು ಹಿಂದುತ್ವದ ವಿರೋಧಿಗಳು ಎಂದು ಪ್ರತೀ ಚುನಾವಣೆಯ ಸಂದರ್ಭದಲ್ಲಿ ಅಪಪ್ರಚಾರ ಮಾಡುತ್ತಿದ್ದ ಬಿಜೆಪಿಗೆ ಅದೇ ಹಿಂದುತ್ವ ಇಂದು ರೆಬೆಲ್ ಆಗಿ ಪರಿಣಮಿಸಿದ್ದು ಜನರ ಮತ್ತು ದೇವರ ಶಾಪದಿಂದ ಎಂದು ಹೇಳಿದರು.


ಅನ್ಯಧರ್ಮದವರನ್ನು ದ್ವೇಷಿಸುವ ಹಿಂದುತ್ವ ಬಿಜೆಪಿಯದ್ದು ನಮ್ಮದು ಎಲ್ಲರೊಂದಿಗೂ ಸೌಹಾರ್ಧತೆಯಿಂದ ಬಾಳುವ ಹಿಂದುತ್ವವಾಗಿದೆ. ಸಮಾಜದಲ್ಲಿ ಎಲ್ಲರೂ ಎಲ್ಲರನ್ನೂ ಪರಸ್ಪರ ಗೌರವದಿಂದ ಕಾಣುವ ಗುಣ ನಮ್ಮಲ್ಲಿರಬೇಕಾಗುತ್ತದೆ . ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಬಿಜೆಪಿಗೆ ಸಹಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಪ್ರತೀ ಚುನಾವಣೆಯಲ್ಲೂ ಹಿಂದುತ್ವದ ಹೆಸರಲ್ಲಿ ಗಲಭೆಗಳನ್ನು ಸೃಷ್ಟಿಸುತ್ತಿತ್ತು ಅದೆಲ್ಲವೂ ಇಂದು ಕಣ್ಣೀರಾಗಿ ಅವರನ್ನು ಕಾಡುತ್ತಿದೆ ಎಂದು ಮಾರ್ಮಿಕವಾಗಿ ಹೇಳಿದರು.


ಇಂದು ಬಿಜೆಪಿಯವರಿಗೆ ಚುನಾವಣೆಯಲ್ಲಿ ಮಾತನಾಡಲು ವಿಷಯವೇ ಇಲ್ಲದಂತಾಗಿದೆ. ಅಭಿವೃದ್ದಿ ಮಾಡದ ಕಾರಣ ಆ ವಿಚಾರದಲ್ಲೂ ಸೋತಿದೆ. ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ಶಾಸಕರಾಗಿದ್ದ ವೇಳೆ ಮಾಡಿದ ಅಭಿವೃದ್ದಿ ಕೆಲಸವನ್ನೇ ಬಿಜೆಪಿ ಶಾಸಕರು ತನ್ನದೆಂದು ಹೇಳಿ ಜನರನ್ನು ಮೋಸ ಮಾಡಿದ್ದಾರೆ. ಪುತ್ತೂರು ಅಭಿವೃದ್ದಿಯಾಗಬೇಕಾದರೆ ಕಾಂಗ್ರೆಸ್ ಶಾಸಕರು ಚುನಾಯಿತರಾಗಬೇಕಿದೆ. ಈ ಬರಿ ಪುತ್ತೂರಿನಲ್ಲಿ ಕಾಂಗ್ರೆಸ್ ಸಮರ್ಥ ಅಭ್ಯರ್ಥಿಯನ್ನೇ ಕಣಕ್ಗಕಿಳಿಸಿದ್ದು ಈ ಬಾರಿ ಕಾರ್ಯಕರ್ತರ ಪರಿಶ್ರಮದಿಂದ ಕಾಂಗ್ರೆಸ್ ಗೆಲವು ಸಾಧಿಸಲಿದೆ ಎಂದು ಹೇಳಿದರು. ಕಾಂಗ್ರೆಸ್ ಅಭ್ಯರ್ಥಿಯ ಬಗ್ಗೆ ಬಿಜೆಪಿ ವಿವಿಧ ರೀತಿಯಲ್ಲಿ ಅಪಪ್ರಚಾರ ಮಾಡುತ್ತಿದೆ, ಅಶೋಕ್ ರೈಗಳು ಎಂಥವರೆಂದು ಈ ಕ್ಷೇತ್ರದ ಕಟ್ಟಕಡೇಯ ಬಡವನಿಗೂ ಗೊತ್ತಿದೆ, ಕಾರ್ಯಕರ್ತರಿಗೂ ಗೊತ್ತಿದೆ. ಬಿಜೆಪಿ ಕಾರ್ಯಕರ್ತರು ಈ ಬರಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಲಿದ್ದಾರೆ ಎಂದು ಭವಿಷ್ಯ ನುಡಿದರು.

LEAVE A REPLY

Please enter your comment!
Please enter your name here