ವಿವಾಹಿತೆ ನಾಪತ್ತೆ -ದೂರು

0

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಬಿಳಿಯೂರು ಗ್ರಾಮದ ಕಾನ ಮನೆ ನಿವಾಸಿ ಶ್ವೇತಾ (24) ಎಂಬವರು ನಾಪತ್ತೆಯಾಗಿರುವ ಬಗ್ಗೆ ಆಕೆಯ ತಂದೆ ಅಣ್ಣು ಮೇರ ಎಂಬವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಕಾಣೆಯಾದಾಕೆ ವಿವಾಹಿತೆಯಾಗಿದ್ದು, ಗಂಡನ ಮನೆಯಿಂದ ತವರು ಮನೆಗೆ ಬಂದಿದ್ದ ಅವರು ಎಪ್ರಿಲ್ 24 ರ ಸಂಜೆಯಿಂದ ನಾಪತ್ತೆಯಾಗಿದ್ದರೆಂದು ದೂರಿನಲ್ಲಿ ತಿಳಿಸಲಾಗಿದೆ. ಈಕೆ ಕನ್ನಡ ಹಾಗೂ ತುಳು ಭಾಷೆಯನ್ನು ಮಾತನಾಡುವ, ಸಾಧಾರಣ ಕಪ್ಪು ಮೈ ಬಣ್ಣದವರಾಗಿದ್ದು, ಎಲ್ಲಿಯಾದರೂ ಕಂಡಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here