ಕಾವು: 2013ರ ಚುನಾವಣೆಯಲ್ಲಿ ದ.ಕ ಜಿಲ್ಲೆಯ ಜನ ಮಾಡಿದ ತಪ್ಪಿಗೆ ಸರಿಯಾದ ಶಿಕ್ಷೆ ಅನುಭವಿಸಿದ್ದೇವೆ, ಅವತ್ತಿನ ಚುನಾವಣೆಯಲ್ಲಿ ಜಿಲ್ಲೆಯ 8 ಕ್ಷೇತ್ರಗಳಲ್ಲಿ 7 ಕ್ಷೇತ್ರ ಕಾಂಗ್ರೆಸ್ ಪಾಲಾಗಿ ಮುಂದಿನ ೫ ವರ್ಷದಲ್ಲಿ ನಿರಂತರವಾಗಿ ಕೋಮುಗಲಭೆ, ಹಿಂದೂ ಯುವಕರ ಹತ್ಯೆ, ಸೆಕ್ಷನ್ ಜಾರಿಯಾಗಿ ಜಿಲ್ಲೆಯಲ್ಲಿ ಅಶಾಂತಿ ಉಂಟಾಗಿ ಜನ ಭಯಭೀತಿಯಿಂದ ಬದುಕುವಂತಾಗಿತ್ತು. 2018ರ ಚುನಾವಣೆಯಲ್ಲಿ ಕರಾವಳಿ ಭಾಗದಲ್ಲಿ ಮತ್ತೆ ಬಿಜೆಪಿ ಜಯಭೇರಿ ಬಾರಿಸುವ ಮೂಲಕ 5 ವರ್ಷದಲ್ಲಿ ಯಾವುದೇ ಕೋಮುಗಲಭೆ ನಡೆಯದೆ ಜಿಲ್ಲೆ ಸಾಕಷ್ಟು ಅಭಿವೃದ್ಧಿಯನ್ನು ಕಂಡಿದೆ. ಹಾಗಾಗಿ ಕೋಮುಗಲಭೆ ಮುಕ್ತ, ಶಾಂತಿಯುತ ಸಮಾಜಕ್ಕಾಗಿ ಬಿಜೆಪಿಗೆ ಮತ ನೀಡುವಂತೆ ರಾಜ್ಯ ಬಿಜೆಪಿ ಚುನಾವಣಾ ಸಹಪ್ರಭಾರಿ, ತಮಿಳ್ನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈಯವರು ಹೇಳಿದರು.
ಅವರು ಎ.29ರಂದು ಕಾವು ನನ್ಯ ಜನಮಂಗಲ ಸಭಾಭವನದಲ್ಲಿ ನಡೆದ ಬಿಜೆಪಿ ನೆಟ್ಟಣಿಗೆ ಮುಡ್ನೂರು ಮಹಾಶಕ್ತಿ ಕೇಂದ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಮುಖ್ಯ ಭಾಷಣ ಮಾಡಿ ಮಾತನಾಡಿದರು.
ತಮಿಳರಿಗೆ ಕಾಂಗ್ರೆಸ್‌ನಿಂದ ಸಮಸ್ಯೆ, ಬಿಜೆಪಿಯಿಂದ ಪರಿಹಾರ:
ಕಳೆದ ೨೫೦ ವರ್ಷದಲ್ಲಿ ತಮಿಳರು ೪ ಬಾರಿ ತಮ್ಮ ಕುಟುಂಬ ಸ್ಥಳಾಂತರ ಮಾಡಿದ್ದಾರೆ, ಇದಕ್ಕೆಲ್ಲಾ ಈ ಹಿಂದಿನ ಕಾಂಗ್ರೆಸ್ ನೀತಿಯೇ ಕಾರಣವಾಗಿದೆ, ಆದರೆ ಇದೀಗ ಬಿಜೆಪಿ ಸರ್ಕಾರದ ಮೂಲಕ ಈ ಸಮಸ್ಯೆಗೆ ಪರಿಹಾರವನ್ನು ಕಾಣಲಾಗಿದೆ, ಪುತ್ತೂರು-ಸುಳ್ಯ ಭಾಗದ ತಮಿಳರ ಸಮಸ್ಯೆ ಪರಿಹಾರಕ್ಕೂ ಬಿಜೆಪಿ ಸರ್ಕಾರ ಬದ್ಧವಾಗಿದೆ ಎಂದು ಅಣ್ಣಾಮಲೈ ಹೇಳಿದರು.
ಪುತ್ತೂರಿನಂತಹ ಸಂಘಟನೆ ಬೇರೆಲ್ಲೂ ಇಲ್ಲ:
ಪುತ್ತೂರು ಸಂಘಟನಾ ಆಧಾರಿತ ಕ್ಷೇತ್ರವಾಗಿದ್ದು, ಇಂತಹ ಸಂಘಟನೆ ಕರ್ನಾಟಕದ ಎಲ್ಲೂ ಕಾಣಲು ಸಾಧ್ಯವಿಲ್ಲ, ಪುತ್ತೂರಿನಲ್ಲಿ ವ್ಯಕ್ತಿಯಿಂದ ಗೆಲುವು ಸಾಧ್ಯವಿಲ್ಲ, ಸಂಘಟನಾ ಶಕ್ತಿಯ ಕಾರ್ಯಕರ್ತರು ಪಕ್ಷವನ್ನು ಗೆಲ್ಲಿಸಿಕೊಡುತ್ತಾರೆ ಎಂದು ಅಣ್ಣಾಮಲೈಯವರು ಹೇಳಿದರು.
ನೈತಿಕತೆ ಮತ್ತು ಅಭಿವೃದ್ಧಿ ಆಧಾರದಲ್ಲಿ ಮತಯಾಚನೆ-ಮಠಂದೂರು:
ಶಾಸಕ ಸಂಜೀವ ಮಠಂದೂರುರವರು ಮಾತನಾಡಿ ಕಳೆದ ೫ ವರ್ಷದ ಅವಽಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ೧೫೦೦ಕೋಟಿಗೂ ಮಿಕ್ಕಿ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿದೆ, ಕೋಮುಗಲಭೆಯನ್ನು ಹತ್ತಿಕ್ಕಿ ಶಾಂತಿಯುತ ಸಮಾಜ ನಿರ್ಮಾಣ ಮಾಡುವಲ್ಲಿ ಬಿಜೆಪಿ ಆಡಳಿತ ಸರ್ಕಾರ ಯಶಸ್ವಿಯಾಗಿದೆ. ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ನಮ್ಮ ಸರ್ಕಾರ ಕೈಕಟ್ಟಿ ಕುಳಿತುಕೊಳ್ಳದೇ ಎನ್‌ಐಎಯ ಮೂಲಕ ಮತೀಯ ಸಂಘಟನೆಗಳನ್ನು ಹತ್ತಿಕ್ಕುವ ಕೆಲಸ ಆಗಿದೆ. ಇದು ಡಬಲ್ ಇಂಜಿನ್ ಸರ್ಕಾರದಿಂದ ಸಾಧ್ಯವಾಗಿದೆ, ಹಾಗಾಗಿ ಈ ಬಾರಿಯೂ ಜನ ಹಿಂದೂಪರ ಬಿಜೆಪಿ ಸರ್ಕಾರವನ್ನೇ ಬಯಸಿದ್ದು, ನೈತಿಕತೆ ಮತ್ತು ಅಭಿವೃದ್ಧಿ ಆಧಾರದಲ್ಲಿ ನಮ್ಮ ಮತಯಾಚನೆ ನಡೆಯಲಿದೆ ಎಂದು ಹೇಳಿದರು.
ಅಽಕಾರದ ಆಸೆಗಾಗಿ ಕಾಂಗ್ರೆಸ್‌ನಿಂದ ಗ್ಯಾರಂಟಿ ಕಾರ್ಡ್-ರಾಜೇಶ್ ಕಾವೇರಿ:
ಜಿಲ್ಲಾ ಬಿಜೆಪಿ ಚುನಾವಣಾ ಸಹಪ್ರಭಾರಿ ರಾಜೇಶ್ ಕಾವೇರಿಯವರು ಮಾತನಾಡಿ ಕೋವಿಡ್‌ನಂತಹ ಕಷ್ಟಕಾಲದಲ್ಲಿ ನಮ್ಮ ಕಾರ್ಯಕರ್ತರು ಜೀವದ ಹಂಗು ತೊರೆದು, ಬೀದಿಗಿಳಿದು ಜನರ ಪ್ರಾಣ ರಕ್ಷಣೆ ಮಾಡಿ ಜೀವಕ್ಕೆ ಗ್ಯಾರಂಟಿ ನೀಡಿದ್ದಾರೆ. ಅಂತಹ ಸಮಯದಲ್ಲಿ ಕಾಂಗ್ರೆಸ್‌ನವರು ಜನರ ಜೀವರಕ್ಷಣೆಗೆ ಬಾರದೇ ಇವತ್ತು ಗ್ಯಾರಂಟಿ ಕಾರ್ಡ್ ಮೂಲಕ ಜನರಿಗೆ ಮೋಸ ಮಾಡುತ್ತಿದ್ದಾರೆ. ಕಾಂಗ್ರೆಸ್‌ಗೇ ಗ್ಯಾರಂಟಿ ಇಲ್ಲ, ಹಾಗಾಗಿ ಅಽಕಾರದ ಆಸೆಗಾಗಿ ನೀಡಿರುವ ಗ್ಯಾರಂಟಿ ಕಾರ್ಡ್‌ಗೆ ಯಾವುದೇ ಗ್ಯಾರಂಟಿ ಇಲ್ಲ, ಹಾಗಾಗಿ ಜನರು ಮತ್ತೊಮ್ಮೆ ಅಭಿವೃದ್ಧಿಪರ ಬಿಜೆಪಿ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದು ಹೇಳಿದರು.
ಎ.೩೦ರ ಮಹಾಅಭಿಯಾನ ಯಶಸ್ವಿಗೊಳಿಸಿ-ಸಾಜ ರಾಧಾಕೃಷ್ಣ ಆಳ್ವ:
ಸಭಾಧ್ಯಕ್ಷತೆ ವಹಿಸಿದ್ದ ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವರವರು ಮಾತನಾಡಿ ಬಿಜೆಪಿ ಚುನಾವಣಾ ಪ್ರಚಾರದ ಅಂಗವಾಗಿ ಎ.೩೦ರಂದು ಮನೆ ಮನೆ ಭೇಟಿಯ ಮಹಾ ಅಭಿಯಾನವು ಎಲ್ಲಾ ಬೂತ್‌ಗಳಲ್ಲಿ ನಡೆಯಲಿದ್ದು ಕಾರ್ಯಕರ್ತರು ಈ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಮತ್ತು ಮೇ.೧೦ರವರೆಗೆ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಹೆಚ್ಚು ಸಮಯ ಕೊಟ್ಟು ಸಕ್ರಿಯವಾಗಿ ಕೆಲಸ ಮಾಡುವಂತೆ ಕರೆ ನೀಡಿದರು.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಬಿಂದು ಸುರೇಶ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಪುತ್ತೂರು ಬಿಜೆಪಿ ಕ್ಷೇತ್ರ ಸಮಿತಿಯ ಮಾಜಿ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ, ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಬಿಜೆಪಿ ಓಬಿಸಿ ಮೋರ್ಛಾದ ಜಿಲ್ಲಾಧ್ಯಕ್ಷ ಆರ್.ಸಿ ನಾರಾಯಣ, ಬಿಜೆಪಿ ಜಿಲ್ಲಾ ಯುವಮೋರ್ಛಾದ ಉಪಾಧ್ಯಕ್ಷ ಸಹಜ್ ರೈ ಬಳಜ್ಜ, ತಮಿಳು ಸೇವಾ ಸಮಿತಿಯ ಸ್ಥಾಪಕಾಧ್ಯಕ್ಷ ತಿರುಮಾಳ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ವಂದೇ ಮಾತರಂ ಹಾಡಲಾಯಿತು. ಬಿಜೆಪಿ ನೆಟ್ಟಣಿಗೆ ಮುಡ್ನೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿಜಯ ಕುಮಾರ್ ಕೋರಂಗ ಸ್ವಾಗತಿಸಿ, ಮಾಡ್ನೂರು ಬಿಜೆಪಿ ಶಕ್ತಿ ಕೇಂದ್ರದ ಸಂಚಾಲಕ ಲೋಕೇಶ್ ಚಾಕೋಟೆ ವಂದಿಸಿದರು. ತಿಲಕ್ ರೈ ಕುತ್ಯಾಡಿ ಕಾರ್ಯಕ್ರಮ ನಿರ್ವಹಿಸಿದರು.
ವ್ಯಕ್ತಿ ಬೇಡ, ಪಕ್ಷಕ್ಕೆ ಮತ ನೀಡಿ
ರಾಜ್ಯದಲ್ಲಿ 130+ ಸ್ಥಾನವನ್ನು ಗೆಲ್ಲುವುದರ ಮೂಲಕ ಮತ್ತೊಮ್ಮೆ ಡಬಲ್ ಇಂಜಿನ್ ಸರ್ಕಾರ ಆಡಳಿತಕ್ಕೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ, ಹಾಗಾಗಿ ಪುತ್ತೂರಿನ 1 ಕ್ಷೇತ್ರವೂ ಅತೀ ಅಗತ್ಯವಾಗಿದೆ, ಅದಕ್ಕಾಗಿ ವ್ಯಕ್ತಿಯನ್ನು ನೋಡದೇ ಪಕ್ಷವನ್ನು ಬೆಂಬಲಿಸಿ.
-ಅಣ್ಣಾಮಲೈ, ರಾಜ್ಯ ಬಿಜೆಪಿ ಚುನಾವಣಾ ಸಹಪ್ರಭಾರಿ