ಪುತ್ತೂರು: ಕುಂಬ್ರ ಅರಿಯಡ್ಕ ಗ್ರಾಮ ವ್ಯಾಪ್ತಿಯ ಕೊಂಬರಡ್ಕ ಕರ್ಕೇರ ಕುಟುಂಬ ತರವಾಡು ದೈವಸ್ಥಾನದಲ್ಲಿ ಮೇ.2 ರಿಂದ 4 ತನಕ ಧರ್ಮ ದೈವ ವರ್ಣರ ಪಂಜುರ್ಲಿ ಹಾಗೂ ಪರಿವಾರ ದೈವಗಳಿಗೆ ನೇಮೋತ್ಸವವವು ನಡೆಯಲಿದೆ.
ಮೇ2ರಂದು ಬೆಳಗ್ಗೆ ಗಣಹೋಮ, ನಾಗಬ್ರಹ್ಮ ತಂಬಿಲ ಸೇವೆ, ಮುಡಿಪು ಪೂಜೆ, ಹರಿಸೇವೆ, ಮಧ್ಯಾಹ್ನ ಮಹಾಕಾಳಿ ದೈವದ ತಂಬಿಲ ಸೇವೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆದು, ಬಳಿಕ ದೈವಗಳಿಗೆ ಕಾಲಾಧಿ ತಂಬಿಲ, ಸಂಜೆ ಭಂಡಾರ ತೆಗೆದು, ಎಣ್ಣೆ ವೀಲ್ಯ ಸಮರ್ಪಣೆ, ಅನ್ನಸಂತರ್ಪಣೆ ಬಳಿಕ ಮಹಾಕಾಳಿ, ಸತ್ಯದೇವತೆ ಮತ್ತು ವರ್ಣರ ಪಂಜುರ್ಲಿ ದೈವಗಳ ನೇಮೋತ್ಸವ ನಡೆಯಲಿದೆ.
ಮೇ.3 ರಂದು ದೈವಗಳಿಗೆ ತಂಬಿಲ, ಭಂಡಾರ ತೆಗೆದು ಎಣ್ಣೆ ವೀಲ್ಯ ಸಮರ್ಪಣೆ ಆ ಬಳಿಕ ಅನ್ನಸಂತರ್ಪಣೆ ನಂತರ ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ, ಮಂತ್ರದೇವತೆ ಹಾಗೂ ಗುಳಿಗ ದೈವಗಳಿಗೆ ನೇಮ ನಡೆಯಲಿದೆ.
ಕೊನೆಯ ದಿನವಾದ ಮೇ 4 ರಂದು ಕುರಿ ತಂಬಿಲ ಸೇವೆ, ರಾಹುವಿಗೆ ಅಗೇಲು ಸೇವೆ ಹಾಗೂ ಹಿರಿಯರಿಗೆ ಅಗೇಲು ಸೇವೆ ನಡೆಯಲಿದೆಯೆಂದು ಆಡಳಿತ ಮುಖ್ಯಸ್ಥರಾದ ಕೋಚಣ್ಣ ಪೂಜಾರಿ ಎಂಡೆಸಾಗು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.