ಬುಳೇರಿಕಟ್ಟೆಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

0

ಬಿಜೆಪಿಗರು ಯಾವ ಮುಖ ಹೊತ್ತು ವೋಟು ಕೇಳುತ್ತಿದ್ದಾರೆ: ರಾಜರಾಂ ಕೆ ಬಿ

ಪುತ್ತೂರು: ಬೆಲೆ ಏರಿಕೆಯ ಮೂಲಕ ಬಡವರ ಬದುಕನ್ನು ಮೂರಾಬಟ್ಟೆ ಮಾಡಿದ ಬಿಜೆಪಿ ಸರಕಾರ ಈ ಪಕ್ಷದ ಕಾರ್ಯಕರ್ತರು ,ಮುಖಂಡರು ಬಡವರ ಮನೆಗೆ ಯಾವ ಮುಖ ಹೊತ್ತು ವೋಟು ಕೇಳಲು ಹೋಗುತ್ತಾರೆ ಎಂದು ವಿಟ್ಲ -ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ರಾಜಾರಾಂ ಕೆ ಬಿ ಹೇಳಿದರು.


ಬುಳೇರಿಕಟ್ಟೆಯಲ್ಲಿ ನಡೆದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಇದೆ. ದೇಶದಲ್ಲಿ‌ ಅಚ್ಚೇದಿನ್ ಕೊಡುವುದಾಗಿ ಹೇಳಿದವರು ಬಡವರ ಅನ್ನಕ್ಕೂ ಕಲ್ಲು ಹಾಕುವ ಕೆಲಸವನ್ನು ಮಾಡಿದರು. ಅಗತ್ಯ ವಸ್ತುಗಳ ಬೆಲೆ ಏರಿಕೆ,ಇಂಧನ, ಅಡುಗೆ ಅನಿಲ ಬೆಲೆ ಏರಿಕೆ ಇವೆಲ್ಲವೂ ಜನರನ್ನು ಕಂಗೆಡಿಸಿದೆ. ಬೆಲೆ ಏರಿಕೆಯಿಂದ ನಾಳೆ ಏನಾಗುತ್ತದೋ ಎಂಬ ಭಯ ಜನರಲ್ಲಿ ನಿತ್ಯವೂ ಇದೆ ಎಂದು ಹೇಳಿದರು.


ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದರೆ ಎಲ್ಲಾ‌ಸಮಸ್ಯೆಗಳಿಗೆ ಪರಿಹಾರವಾಗಲಿದೆ. ಬಡವರು ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಕಾಂಗ್ರೆಸ್ ಜನ ಸ್ನೇಹಿ ಪ್ರಣಾಳಿಕೆಯನ್ನು ಜಾರಿ‌ಮಾಡಿದೆ. ಪುತ್ತೂರಿನಲ್ಲಿ ಅಶೋಕ್ ರೈ ಯವರನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ‌ಮುಂದೆ ಬರುವ ಕಾಂಗ್ರೆಸ್ ಸರಕಾರಕ್ಕೆ ಬಲ‌ಕೊಡುವ ಕೆಲಸವನ್ನು ಮಾಡಬೇಕು. ಪ್ರತೀ ಬೂತ್ ನಲ್ಲೂ ಟಾರ್ಗೆಟ್ ವೋಟು ಎಂಬ ಆಲೋಚನೆಯನ್ನು ಇಟ್ಟುಕೊಂಡು ಹೆಚ್ಚಿನ‌ಮತಗಳು ಈ ಭಾಗದಿಂದ ಕಾಂಗ್ರೆಸ್ ಗೆ ಬೀಳುವಂತೆ ನಾವು ಕಾರ್ಯಪೃವೃತ್ತರಾಗಬೇಕು ಎಂದು‌ ಹೇಳಿದರು.

ಸೈಲೆಂಟ್ ವೋಟು ಕಾಂಗ್ರೆಸ್ ಪಾಲಾಗುವಂತೆ ಪ್ರತೀಯೊಬ್ಬ ಕಾರ್ಯಕರ್ತರು ಒಟ್ಟುಗೂಡಿ ಕೆಲಸ ಮಾಡಬೇಕು. ಬಿಜೆಪಿ ಕಾರ್ಯಕರ್ತರನ್ನು ಪಕ್ಷಕ್ಕೆ ಸೆಳೆಯಬೇಕು ಎಂದು ಅಭ್ಯರ್ಥಿ ಅಶೋಕ್ ರೈ ಹೇಳಿದರು.

ಅಕ್ರನಸಕ್ರಮದಲ್ಲಿ ಪುತ್ತೂರಿನ ಶಾಸಕರು ಭೃಷ್ಟಾಚಾರ ಮಾಡಿದ್ದು ಅದು ಅವರ ದೊಡ್ಡ ಸಾಧನೆಯಾಗಿದೆ. ಯಾರು ಲಕ್ಷಾಂತರ ರೂ ಕೊಟ್ಟಿದ್ದಾರೋ ಅವರಿಗೆಲ್ಲಾ ಅಕ್ರಮ ಸಕ್ರಮ ಮಾಡಿಕೊಡಲಾಗಿದೆ. ನಾನು ಶಾಸಕನಾದರೆ ರಾಜಧರ್ಮ ಪಾಲನೆ ಮಾಡಲಿದ್ದೇನೆ. ಬಿಜೆಪಿಯವರು ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡು ಪಕ್ಷಕ್ಕೆ ಬಲ ಕೊಡುವ ಕೆಲಸವನ್ನು ಮಾಡುವಂತೆ ಮನವಿ ಮಾಡಿದರು. ಯಾವುದೇ ತಾರತಮ್ಯ ಮಾಡದೆ ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸವನ್ನು‌ ಮಾಡಿತೋರಿಸುತ್ತೇನೆ ಎಂದು ಹೇಳಿದರು. ಅಭಿವೃದ್ದಿಯಾಗಬೇಕಾದರೆ ಶಾಂತಿ,ಸೌಹಾರ್ಧತೆ ಮುಖ್ಯ. ಪುತ್ತೂರಿನಲ್ಲಿ ಎಲ್ಲಾ ಧರ್ಮದ ಜನರೂ ಒಂದೇ ತಾಯಿ‌ಮಕ್ಕಳಂತೆ ಬದುಕುವ ವಾತಾವರಣ ಸೃಷ್ಟಿಯಾಗಬೇಕು ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ, ಪ್ರವೀಣ್ ಚಂದ್ರ ಆಳ್ವ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here