ಇಚ್ಲಂಪಾಡಿ ಸೈಂಟ್ ಜೋರ್ಜ್ ಓರ್ಥಡೋಕ್ಸ್ ಸಿರಿಯನ್ ಚರ್ಚ್‌ನ ವಾರ್ಷಿಕ ಹಬ್ಬದ ಧ್ವಜಾರೋಹಣ

0

ನೆಲ್ಯಾಡಿ: ಸಂತ ಜೋರ್ಜರ ನಾಮದಲ್ಲಿ ಪ್ರಸಿದ್ಧಿ ಹೊಂದಿರುವ ಕರ್ನಾಟಕದ ಪ್ರಥಮ ಜೋರ್ಜಿಯನ್ ತೀರ್ಥಾಟನಾ ಕೇಂದ್ರವಾದ ಕಡಬ ತಾಲೂಕಿನ ಇಚ್ಲಂಪಾಡಿ ಸೈಂಟ್ ಜೋರ್ಜ್ ಓರ್ಥಡೋಕ್ಸ್ ಸಿರಿಯನ್ ಚರ್ಚ್‌ನ ವಾರ್ಷಿಕ ಹಬ್ಬದ ಧ್ವಜಾರೋಹಣ ಮೇ 1ರಂದು ಬೆಳಿಗ್ಗೆ ನಡೆಯಿತು.


ಮೇ 1 ರಿಂದ 7ರ ತನಕ ವಾರ್ಷಿಕ ಹಬ್ಬವು ಬ್ರಹ್ಮಾವರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಯಾಕೋಬ್ ಮಾರ್ ಏಲಿಯಾಸ್ ಮೆತ್ರಾಪೋಲಿತ್ತಾ ಹಾಗೂ ಇಡುಕ್ಕಿ ಭದ್ರಾಸನ ಮೆತ್ರಾಪೋಲಿತ್ತಾ ಅತೀ ವಂದನೀಯ ಸಖರಿಯಾ ಮಾರ್ ಸೇವೇರಿಯೋಸ್ ಮೆತ್ರಾಪ್ಪೋಲಿತ್ತಾರವರ ನೇತೃತ್ವದಲ್ಲಿ ಹಾಗೂ ಅನೇಕ ಧರ್ಮಗುರುಗಳ ಸಹಕಾರದೊಂದಿಗೆ ನಡೆಯಲಿದೆ.

ಮೇ 1ರಂದು ಬೆಳಿಗ್ಗೆ ಪ್ರಭಾತ ಪ್ರಾರ್ಥನೆ, ಬ್ರಹ್ಮಾವರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಯಾಕೋಬ್ ಮಾರ್ ಏಲಿಯಾಸ್ ಮೆತ್ರಾಪೋಲಿತ್ತಾರವರ ನೇತೃತ್ವದಲ್ಲಿ ದಿವ್ಯ ಬಲಿಪೂಜೆ, ಸಂತ ಜೋರ್ಜರೊಂದಿಗಿನ ಮಧ್ಯಸ್ಥ ಪ್ರಾರ್ಥನೆ ನಡೆದು ಹಬ್ಬದ ಧ್ವಜಾರೋಹಣ ನಡೆಯಿತು.


ಇಚ್ಲಂಪಾಡಿ ಸೈಂಟ್ ಜೋರ್ಜ್ ಓರ್ಥಡೋಕ್ಸ್ ಸಿರಿಯನ್ ಚರ್ಚ್‌ನ ಧರ್ಮಗುರು ರೆ.ಫಾ.ಪೌಲ್ ಜೇಕಬ್, ವಿವಿಧ ಚರ್ಚ್‌ನ ಧರ್ಮಗುರುಗಳಾದ ರೆ.ಫಾ.ವಿ.ಸಿ.ಮರ್ಕೋಸ್ ಕೋರ್ ಎಪಿಸ್ಕೋಪಾ, ರೆ.ಫಾ.ವಿ.ಸಿ.ಜೋಸ್ ಚೆಮ್ಮನಂ, ರೆ.ಫಾ.ಸ್ಟಾನ್‌ಲಿ ಟಿ.ಫ್ರಾನ್ಸಿಸ್, ರೆ.ಫಾ.ಕುರಿಯಾಕೋಸ್ ಪಿ.ತೋಮಸ್, ರೆ.ಫಾ.ವರ್ಗೀಸ್ ತೋಮಸ್, ರೆ.ಫಾ.ಸಿಜಿನ್ ಮ್ಯಾಥ್ಯು, ರೆ.ಫಾ.ಪಿಲಿಪ್ ತೋಮಸ್‌ರವರು ಸಹಕರಿಸಿದರು. ಚರ್ಚ್‌ನ ಆಡಳಿತ ಸಮಿತಿ ಕಾರ್ಯದರ್ಶಿ ವಿ.ಎನ್.ಚಾಕೋ, ಟ್ರಸ್ಟಿ ಜೋನ್ ಅಬ್ರಹಾಂ ಚೀರಮಟ್ಟಂ, ಸದಸ್ಯರುಗಳಾದ ಜೋನ್ ಜೋಸೆಫ್, ಟಿ.ಕೆ.ಕುರಿಯಾಕೋಸ್, ಪಿ.ಸಿ.ಪೌಲೋಸ್, ಅಬ್ರಹಾಂ ಟಿ.ಯಂ., ಸಿ.ಕೆ.ಜಾನ್ಸನ್, ಪಿ.ಜಿ.ರೋಯಿ, ಮೇಹಿ ಜಾರ್ಜ್, ಪಿ.ಟಿ.ತೋಮಸ್, ಶಾಲಿನಿ ಪೌಲೋಸ್, ಲೆಕ್ಕ ಪರಿಶೋಧಕರಾದ ಉಲಹನ್ನನ್ ಪಿ.ಯಂ., ಸಿ.ಕೆ.ತೋಮಸ್ ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.

(ಫೋಠೋ ಇದೆ-ಇಚ್ಲಂಪಾಡಿ ೧, ಇಚ್ಲಂಪಾಡಿ ೨)

LEAVE A REPLY

Please enter your comment!
Please enter your name here