ವಾಗ್ದೇವಿ ಸಂಗೀತ ಶಾಲೆಯಿಂದ ನಾದ ಸುರಭಿ

0

ಪುತ್ತೂರು: ಪುತ್ತೂರು ವಾಗ್ದೇವಿ ಸಂಗೀತ ಶಾಲೆಯ ತಿಂಗಳ ಕಾರ್ಯಕ್ರಮ “ನಾದ ಸುರಭಿ” ವಿಧ್ಯಾರ್ಥಿಗಳ ಶಾಸ್ತ್ರೀಯ ಸಂಗೀತ ಕಛೇರಿ, ಮೇ1 ರಂದು, ಪುರಂದರ್ ಪಡೀಲ್‌ರವರ ನೇತೃತ್ವದಲ್ಲಿ, ಪಡೀಲ್ ಚೈತನ್ಯ ಮಿತ್ರವೃಂದದ ಕಟ್ಟಡದಲ್ಲಿ ಜರುಗಿತು.

ಸಂಗೀತ ಶಾಲಾ ಶಿಕ್ಷಕಿ ವಿದೂಷಿ ಸವಿತಾ ಪುತ್ತೂರುರವರು ದೀಪ ಬೆಳಗಿಸಿ ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಅರ್ಜುನ್ ಶಭರಾಯ, ಜೀವಿತಾ ಬನ್ನೂರು, ಶಿವಾನಿ ಪಿ ಹಾಗೂ ಸಮರ್ಥ್ ಪಿ.ರವರಿಂದ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. ಹಿಮ್ಮೇಳದಲ್ಲಿ ವಾಯಲಿನ್‌ನಲ್ಲಿ ರಮೇಶ್ ರಾವ್ ಹಾಗೂ ಮ್ರದಂಗದಲ್ಲಿ ವಿಶ್ವ ಮಿಹೀರ ಸಹಕರಿಸಿದರು. ವಿಷ್ಣು ಪ್ರಸಾದ್ ಶಭರಾಯ, ರಾಧಾಕೃಷ್ಣ ಬನ್ನೂರು, ಶಾಂತಾರಾಮ್ ಪಿ, ಗಣೇಶ್ ಎನ್., ನವೀನ್ ಎಸ್., ಸೌಮ್ಯ ಪುರಂದರ್, ಸುಮಿತ್ರಾ ಶಾಂತಾರಾಮ್, ಕುಮಾರಿ ವೈಷ್ಣವಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಚೈತನ್ಯ ಮಿತ್ರವೃಂದದ ಸದಸ್ಯರುಗಳಾದ, ಸಂಪತ್ ಕುಮಾರ್ ಜೈನ್, ರವೀಂದ್ರ ಪೈ, ಅರುಣ್ ಪಡೀಲ್, ಸುಂದರ ಎಚ್, ಗಣೇಶ್ ಬದಿನಾರ್, ಶಿವರಾಮ್ ಗೌಡ ಮತ್ತಿತರರು ಸಹಕರಿಸಿದರು.

ಸಂಗೀತ ಶಿಕ್ಷಕಿಗೆ ಸನ್ಮಾನ
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ, ವಾಗ್ದೇವಿ ಸಂಗೀತ ಶಾಲಾ ಶಿಕ್ಷಕಿ ವಿದೂಷಿ ಸವಿತಾ ಪುತ್ತೂರುರವರನ್ನು ಸನ್ಮಾನಿಸಲಾಯಿತು. ಚೈತನ್ಯ ಮಿತ್ರವೃಂದದ ಸಂಚಾಲಕ ಸಂಪತ್ ಕುಮಾರ್ ಜೈನ್ ಶಾಲು ಹೊದಿಸಿ, ಹಾರ ಫಲಪುಷ್ಪ, ಉಡುಗೊರೆ ನೀಡಿ ಗೌರವಿಸಿದರು.

LEAVE A REPLY

Please enter your comment!
Please enter your name here