ಮೇ 6ರಿಂದ ವರ್ಣಕುಟೀರ ಮಕ್ಕಳ ಬೇಸಿಗೆ ಶಿಬಿರ 2ನೇ ಬ್ಯಾಚ್ ಆರಂಭ

0

ಪುತ್ತೂರು: ಮಕ್ಕಳಲ್ಲಿ ಎಳವೆಯಲ್ಲೇ ವಿವಿಧ ಕಲೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಹಲವು ಆಯಾಮಗಳ ಮೂಲಕ ತರಬೇತಿ ನೀಡುತ್ತಿರುವ ಕಲ್ಲಾರೆ ಕಾವೇರಿ ಕಾಂಪ್ಲೆಕ್ಸ್‌ನಲ್ಲಿರುವ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯಿಂದ ನಡೆಯುವ ಮಕ್ಕಳ ಬೇಸಿಗೆ ಶಿಬಿರದ 2ನೇ ಬ್ಯಾಚ್ ಮೇ 6ರಿಂದ 7ದಿನಗಳು ನಡೆಯಲಿದೆ.

ಈಗಾಗಲೇ ಪ್ರಥಮ ಹಂತದ ಮಕ್ಕಳ ಬೇಸಿಗೆ ಶಿಬಿರ ಮುಗಿದ್ದಿದ್ದು, 2ನೇ ಹಂತದಲ್ಲಿ ಕ್ರಿಯೇಟಿವ್ ಆರ್ಟ್, ಕ್ಲೇ ಮಾಡೆಲಿಂಗ್, ಪೇಪರ್ ಕ್ರಾಫ್ಟ್, ಮನೋವಿಕಾಸನ ಆಟಗಳು, ಟೀ ಶರ್ಟ್ ಮೇಲೆ ರೇಖಾ ಚಿತ್ರ ವಿನ್ಯಾಸ, ನಟನೆಯ ತರಬೇತಿ, ಕ್ರಿಯಾತ್ಮಕ ಗೊಂಬೆಗಳ ತಯಾರಿ ಕಲಿಸಿಕೊಡಲಾಗುವುದು. ಶಿಬಿರದಲ್ಲಿ ಭಾಗವಹಿಸುವವರು ಮೊಬೈಲ್ ಸಂಖ್ಯೆ 9741502869, 7349349839 ಅನ್ನು ಸಂಪರ್ಕಿಸುವಂತೆ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here