ಸವಣೂರು: ಕರ್ನಾಟಕ ಸಾವರ್ತಿಕ ವಿಧಾನಸಭಾ ಚುನಾವಣೆಗೆ ಬೆರಳೆಣಿಕೆಯಷ್ಟು ದಿನಗಳು ಮಾತ್ರ ಬಾಕಿ ಉಳಿದಿದ್ದು,ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಎಸ್ಡಿಪಿಐ ಚುನಾವಣೆಯಲ್ಲಿ ಸ್ಫರ್ದಿಸದೇ ಇರುವ ಕಾರಣದಿಂದ ಪಕ್ಷದ ಬೆಂಬಲ ಯಾರಿಗೆ ಅಥವಾ ಯಾವ ಪಕ್ಷಕ್ಕೆ ನೀಡುವುದು ಎಂಬುದರ ಬಗ್ಗೆ ಚರ್ಚಿಸಲು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ಉಪಸ್ಥಿತಿಯಲ್ಲಿ ಎಸ್ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಅಬ್ದುಲ್ ಕಲಾಂ ರವರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಯಿತು.
ಸಭೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಕ್ಕೆ ಸಾವಿರಾರು ಕಾರ್ಯಕರ್ತರಿದ್ದಾರೆ,ಎಸ್ಡಿಪಿಐ ಬೆಂಬಲಿತ ಏಳು ಪಂಚಾಯತ್ ಸದಸ್ಯರು ಇದ್ದಾರೆ, ಹಾಗಾಗಿ ಕಾರ್ಯಕರ್ತರು ಹಾಗೂ ಹಿತೈಷಿಗಳು ಅಭಿಮಾನಿಗಳು ಪಕ್ಷದ ನಿಲುವಿನ ಬಗ್ಗೆ ಕಾತರದಿಂದ ಇದ್ದಾರೆ, ಹಾಗಾಗಿ ಪಕ್ಷದ ಬೆಂಬಲ ಯಾರಿಗೆ ಎಂಬ ಬಗ್ಗೆ ಮಹತ್ವದ ಚರ್ಚೆ ನಡೆಯಿತು.
ಸಭೆಯ ತೀರ್ಮಾನವನ್ನು ಕಾರ್ಯಕರ್ತರಿಗೆ ಮತ್ತು ಹಿತೈಷಿಗಳಿಗೆ ನೀಡಲಾಗುವುದು ಎಂದು ನಿರ್ಧರಿಸಲಾಯಿತು.
ಸಭೆಯಲ್ಲಿ ಜಿಲ್ಲಾ ನಾಯಕರಾದ ಅಬೂಬಕ್ಕರ್ ಮದ್ದ, ಎಸ್ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷ ಬಾಬು ಎನ್ ಸವಣೂರು, ಸವಣೂರು
ಗ್ರಾ ಪಂ ಸದಸ್ಯರಾದ ರಝಾಕ್ ಕೆನರ, ಶ್ರೀಮತಿ ಚೆನ್ನು, ಶ್ರೀಮತಿ ಶಬೀನಾ ಹಾಗೂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸವಣೂರು,ಬೆಳ್ಳಾರೆ,ಸುಳ್ಯದ ವಿವಿಧ ಸ್ತರದ ನಾಯಕರು ಉಪಸ್ಥಿತರಿದ್ದರು
ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಎಂ ಎ ರಫೀಕ್ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿ ವಂದಿಸಿದರು