ಪುತ್ತೂರು: ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ಪುತ್ತೂರಿನ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ 98.31 ಶೇಕಡಾ ಫಲಿತಾಂಶ ಪಡೆದಿದೆ.
ಶಾಲೆಯಿಂದ 237 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 118 ವಿಶಿಷ್ಟ ಶ್ರೇಣಿ, 102 ಪ್ರಥಮ ಶ್ರೇಣಿ, 13 ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 623 ಅಂಕಗಳನ್ನು ಪಡೆದಿರುವ ಹಿಮಾನಿ ಎ.ಸಿ. ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. 620 ಅಂಕ ಪಡೆದಿರುವ ವಿವಾನ್ ಸಂಜಯ್ ಮುಗೇರ್ ಮತ್ತು ಧಾತ್ರಿ ಸಿ.ಎಚ್. ರವರು ದ್ವಿತೀಯ ಸ್ಥಾನಿಗಳಾಗಿದ್ದಾರೆ ಎಂದು ಶಾಲಾ ಮುಖ್ಯಗುರು ಸತೀಶ್ ಕುಮಾರ್ ರೈ ತಿಳಿಸಿದ್ದಾರೆ.