ವಿಟ್ಲ: ಗಾಳಿ ಮಳೆಗೆ ಹಾನಿಗೊಳಗಾಗಿದ್ದ ಮನೆಗೆ ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಭೇಟಿ – ದುರಸ್ತಿಗೆ ನೆರವಿನ ಭರವಸೆ

0

ವಿಟ್ಲ: ವಿಟ್ಲ ಕಸಬಾ ಗ್ರಾಮದ ನೆತ್ರಕೆರೆ ಎಂಬಲ್ಲಿ ಭಾರೀ ಮಳೆಗಾಳಿಗೆ ಮರ ಬಿದ್ದು ಹಾನಿಗೊಳಗಾಗಿದ್ದ ಮನೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಭೇಟಿ ನೀಡಿದರು.

ವಿಟ್ಲ ಕಸಬಾ ಗ್ರಾಮದ ನೆತ್ರಕೆರೆ ನಿವಾಸಿ ರವಿ ರೋಡ್ರಿಗಸ್ ರವರ ಮನೆ ಮೇಲೆ ಮರ ಬಿದ್ದ ಭಾಗಶಃ ಹಾನಿಯಾಗಿತ್ತು.‌ ಅಶೋಕ್ ಕುಮಾರ್ ರೈ ಮನೆಗೆ ಭೇಟಿ ನೀಡಿ, ಟ್ರಸ್ಟ್ ಮೂಲಕ ದುರಸ್ತಿ ಕಾರ್ಯಕ್ಕೆ ನೆರವು ನೀಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ವಕ್ತಾರ ರಮಾನಾಥ ವಿಟ್ಲ, ನಗರ ಕಾಂಗ್ರೆಸ್ ಅಧ್ಯಕ್ಷ ವಿಟ್ಲ ಶ್ರೀನಿವಾಸ ಶೆಟ್ಟಿ ಕೊಲ್ಯ,ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ವಿಕೆಎಂ ಅಶ್ರಪ್, ಹಸೈನಾರ್ ನೆಲ್ಲಿಗುಡ್ಡೆ, ಮನೋಹರ ಲ್ಯಾನ್ಸಿ, ಸುಶಾಂತ್ ಶೆಟ್ಟಿ, ಸುಮಿತ್ ಶೆಟ್ಟಿ, ಹನೀಫ್ ಗಮಿ, ಜೋಕಿಂ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here