ಪುತ್ತೂರು ಪೋಲೀಸ್ ದೌರ್ಜನ್ಯ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ದಾಳಿ – ಸಿಐಟಿಯು

0

ಪುತ್ತೂರು: ಬ್ಯಾನರ್ ಹಾಕಿದ್ದರ ವಿರುದ್ದ ಬಂದ ದೂರಿನನ್ವಯ ಪೊಲೀಸ್ ಅವರನ್ನು ಬಂದಿಸಿ ನಡೆದುಕೊಂಡ ಅಮಾನವೀಯ ನಡೆ ಖಂಡನೀಯ ಎಂದು ಪುತ್ತೂರು ಕಾರ್ಮಿಕ ನಾಯಕ ಪಿ.ಕೆ ಸತೀಶನ್, ಹಾಗೂ ಸಿಐಟಿಯು ರಾಜ್ಯಸಮಿತಿ ಸದಸ್ಯರಾದ ಬಿ.ಎಂ.ಭಟ್ ಅವರು ಹೇಳಿದ್ದಾರೆ.


ಬಲ ಪ್ರಯೋಗ ಮೂಲಕ ಸಮಾಜವನ್ನು ನಿರ್ಬಂಧಿಸುವ ಪೋಲೀಸರ ಧೋರಣೆ ಪ್ರಜಾಪ್ರಭುತ್ವಕ್ಕೆ ಕಳಂಕ ತರುವುದಾಗಿದೆ. ಕೊಲೆ ಅತ್ಯಾಚಾರ ಮಾಡಿದವರ ಮುಟ್ಟಲೂ ಹೆದರುವ ಈ ಪೋಲೀಸರು ಅಮಾಯಕರ ಮೇಲೆ ಇಂತಹ ದೌರ್ಜನ್ಯ ಎಸಗಿ ತಮ್ಮ ಹೇಯತನವನ್ನು ಬಹಿರಂಗ ಪಡಿಸಿದ್ದಾರೆ, ಬಂಧಿಸಲ್ಪಟ್ಟ ಕಾರ್ಯಕರ್ತರು ಯಾವುದೇ ಪಕ್ಷಕ್ಕೆ ಸೇರಿರಲಿ ಅವರನ್ನು ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ್ದು ಮಾನವ ಹಕ್ಕಿನ ಉಲ್ಲಂಘನೆ ಮಾತ್ರವಲ್ಲ ಸಂವಿಧಾನ ವಿರೋಧಿ ನಡೆ ಅಂತಹ ಅಧಿಕಾರಿಗಳನ್ನು ತಕ್ಷಣದಿಂದ ಅಧಿಕಾರದಿಂದ ಉಚ್ಚಾಟಿಸಿ ನ್ಯಾಯವನ್ನು ಎತ್ತಿ ಹಿಡಿಯುವ ಕೆಲಸ ಸರಕಾರ ಮಾಡಬೇಕು ಎಂದವರು ಸರಕಾರವನ್ನು ಒತ್ತಾಯಿಸಿದ್ದಾರೆ.

ದುಪಕ್ಷದೊಳಗಿನ ಅಸಮದಾನವನ್ನು ಬಿಕ್ಕಟ್ಟನ್ನು ಪ್ರಜಾಪ್ರಭುತ್ವ ರೀತಿಯಲ್ಲಿ ಇತ್ಯರ್ಥ ಪಡಿಸಬೇಕೇ ವಿನಃ ಪೋಲೀಸರ ಮೂಲಕ ಇತ್ಯರ್ಥ ಪಡಿಸುವುದು ಅವರ ಹತಾಶ ಭಾವನೆಯ ಪ್ರತೀಕವಾಗಿದೆ ಎಂದರು. ಪ್ರಜಾಪ್ರಭುತ್ವಕ್ಕೆ ಧಕ್ಕೆತರುವಂತಹ ಇಂತಹ ಘಟನೆಯ ವಿರುದ್ದ ತಾಲೂಕಿನ ಪ್ರಜ್ಙಾವಂತ ನಾಗರೀಕರು ಒಗ್ಗಟ್ಟಾಗಿ ಪ್ರತಿಭಟಿಸಲು ಸಿದ್ದರಾಗಬೇಕಾದ ಕಾಲ ನಮಗೆ ಇಂದು ಎದುರಾಗಿದೆ ಎಂದು ಅವರು ನಾಗರೀಕರಿಗೆ ಕರೆ ನೀಡಿದ್ದಾರೆ.

LEAVE A REPLY

Please enter your comment!
Please enter your name here