ಮಂಗಳೂರು:ಕೇಂದ್ರ ಸರ್ಕಾರದ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಸೂಚನೆಯಂತೆ ಸ್ವಚ್ಛ ಸಮುದ್ರ ತೀರ ಮತ್ತು ಮಾಲಿನ್ಯ ಮುಕ್ತ ಸಾಗರಗಳ ಪ್ರಾಮುಖ್ಯತೆಯ ಬಗ್ಗೆ ಸ್ಥಳೀಯ ಸಮುದಾಯಗಳನ್ನು ಸಂವೇದನಾ ಶೀಲಗೊಳಿಸಲು ಮೇ 21ರ ಬೆಳಿಗ್ಗೆ 7 ಗಂಟೆಯಿಂದ ನಗರದ ತಣ್ಣೀರು ಬಾವಿ ಬೀಚ್‌ನಲ್ಲಿ “ಸಾಮೂಹಿಕ ಬೀಚ್ ಕ್ಲೀನಿಂಗ್ ಡ್ರೈವ್” ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಕಡಲ ಕಿನಾರೆಗಳ ಸ್ವಚ್ಛತೆ, ಗಾಳಿಪಟ ಹಾರಿಸುವುದು, ಸರ್ಫಿಂಗ್ ಹಾಗೂ ಜಲಕ್ರೀಡೆಗಳನ್ನು ಆಯೋಜಿಸಲಾಗಿದೆ. ವಿವಿಧ ಇಲಾಖೆಗಳು ಹಾಗೂ ಶಿಕ್ಷಣ ಸಂಸ್ಥೆಗಳು ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಪ್ರಾದೇಶಿಕ ನಿರ್ದೇಶಕರು(ಪರಿಸರ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.