ಪುತ್ತೂರು: ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸುರಕ್ಷಾ ಅಧಿಕಾರಿ ಎ.ಎಂ.ಅಕ್ಕಮ್ಮರವರು ಮೇ.31 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ. ಎ.ಎಂ. ಅಕ್ಕಮ್ಮರವರು1985ರಲ್ಲಿ ಹಿರಿಯೂರು ಪ್ರಾಥಮಿಕ ಕೇಂದ್ರ ಕೊಣ್ನೂರು, ಮುದ್ದೇಬಿಹಾಳದಲ್ಲಿ ಕರ್ತವ್ಯಕ್ಕೆ ಸೇರ್ಪಡೆಯಾಗಿ 3 ವರ್ಷ ಕರ್ತವ್ಯ ನಿರ್ವಹಿಸಿ, 1988 ರಂದು ಮೈಸೂರು ಜಿಲ್ಲೆಯ ಕೆ.ಆರ್.ನಗರದ ತಿಪ್ಟೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆಗೊಂಡು 18 ವರ್ಷಗಳ ಕಾಲ ಸುದೀರ್ಘ ಸೇವೆ ನೀಡಿರುತ್ತಾರೆ. ಬಳಿಕ 2006ರಲ್ಲಿ ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ನಿಡ್ಪಳ್ಳಿ ಉಪ ಕೇಂದ್ರದಲ್ಲಿ 10 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ, 2016 ರಿಂದ ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಸುರಕ್ಷಾ ಅಧಿಕಾರಿಯಾಗಿ ಕರ್ತವು ನಿರ್ವಹಿಸಿದ್ದಾರೆ. ಎ.ಎಂ.ಅಕ್ಕಮ್ಮರವರು ಸುದೀರ್ಘ38 ವರ್ಷ 1 ತಿಂಗಳು ಕಾಲ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದು ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ನಮಿತಾ ನಾಯಕ್ ತಿಳಿಸಿದ್ದಾರೆ.
ಎ.ಎಂ.ಅಕ್ಕಮ್ಮರವರ ಪತಿ ಸುಳ್ಯ ತಾಲೂಕಿನ ಸೊರೆಂಜ ನಿವಾಸಿ ಸುಭಾಸ್ಚಂದ್ರರವರು ಇಂಡಿಯನ್ ಆರ್ಮಿಯಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದು, ಪುತ್ರ ಲಿಖಿತ್ ಎಸ್ರವರು ಬಿಸಿಎ ಶಿಕ್ಷಣವನ್ನು ಪಡೆಯುತ್ತಿದ್ದಾರೆ.