ರಾಮಕುಂಜ: ಆಟೋ ರಿಕ್ಷಾ ಹಾಗೂ ಓಮ್ನಿ ನಡುವೆ ಡಿಕ್ಕಿ ಸಂಭವಿಸಿ ರಿಕ್ಷಾದಲ್ಲಿದ್ದ ಮಹಿಳೆಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮೇ 28ರಂದು ಸಂಜೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ರಾಮಕುಂಜ ಗ್ರಾಮದ ಆತೂರಿನಲ್ಲಿ ನಡೆದಿದೆ.
ಕುಂತೂರು ಗ್ರಾಮದ ಏನಾಜೆ ಎಂಬಲ್ಲಿಂದ ಉಪ್ಪಿನಂಗಡಿ ಇಳಂತಿಲಕ್ಕೆ ಹೋಗುತ್ತಿದ್ದ ರಿಕ್ಷಾ(ಕೆಎ21 ಸಿ 4938)ಹಾಗೂ ಉಪ್ಪಿನಂಗಡಿ ಕಡೆಯಿಂದ ಬರುತ್ತಿದ್ದ ಒಮ್ನಿ(ಕೆಎ 21 ಪಿ 5374)ನಡುವೆ ಆತೂರಿನಲ್ಲಿ ಡಿಕ್ಕಿ ಸಂಭವಿಸಿದೆ.
ಘಟನೆಯಲ್ಲಿ ರಿಕ್ಷಾದ ಹಿಂಬದಿ ಸೀಟಿನ ಬಲಬದಿ ಕುಳಿತಿದ್ದ ಗಿರಿಜ(63ವ.)ಎಂಬವರು ಗಾಯಗೊಂಡಿದ್ದಾರೆ. ಗಾಯಾಳು ಗಿರಿಜರನ್ನು ಆಂಬುಲೆನ್ಸ್‌ನಲ್ಲಿ ಪುತ್ತೂರು ಮಹಾವೀರ ಆಸ್ಪತ್ರೆಗೆ ಕರೆದುಕೊಂಡು ಬಂದು ಅಲ್ಲಿನ ವೈದ್ಯರು ಪರೀಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆ.ಎಂ.ಸಿ.ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯಲ್ಲಿ ಆಟೋ ರಿಕ್ಷಾದ ಬಲಬದಿಯ ಹಿಂಬದಿ ಟಯರಿನ ಮೇಲ್ಭಾಗ ಜಖಂಗೊಂಡಿದೆ. ಓಮ್ನಿ ಚಾಲಕನಿಗೆ ಯಾವುದೇ ಗಾಯವಾಗಿರುವುದಿಲ್ಲ. ಓಮ್ನಿ ಚಾಲಕ ತನ್ನ ಓಮ್ನಿಯನ್ನು ತೀರಾ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಬದಿಗೆ ಬಂದು ಆಟೋ ರಿಕ್ಷಾಗೆ ಎದುರಿನಿಂದ ಡಿಕ್ಕಿ ಹೊಡೆದಿರುವುದಾಗಿದೆ ಎಂದು ರಿಕ್ಷಾ ಚಾಲಕ ಯತೀಶ್‌ರವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಕಲಂ:279,337ಐಪಿಸಿಯಂತೆ ಪ್ರಕರಣ ದಾಖಲಾಗಿದೆ.