ಪುತ್ತೂರು : ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ 2023-24 ನೇ ಶೈಕ್ಷಣಿಕ ವರ್ಷದ ನೂತನ ವಿದ್ಯಾರ್ಥಿಗಳಿಗೆ ದೀಕ್ಷಾ ಸಮಾರಂಭ ಹಾಗೂ ಶಾಲಾ ಪ್ರಾರಂಭೋತ್ಸವವು ಮೇ.29ರಂದು ಜರುಗಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಭಾರತೀಯ ರಾಷ್ಟ್ರೀಯ ಪಕ್ಷದ ಮುಖಂಡ ಯತೀಶ್ ಅಳ್ವಾ ನಾವು ಶಾಲೆಯಲ್ಲಿ ದಿನಂಪ್ರತಿ ಸಂಭೋದಿಸುವ ಶ್ಲೋಕಕ್ಕೆ ಪೂರಕವಾದ ಕೆಲಸವನ್ನು ಮಾಡಿ ಶೈಕ್ಷಣಿಕ ವರ್ಷಕ್ಕೆ ಶುಭಾಶಯ ಕೋರಿದರು.
ಸಂಚಾಲಕರಾದ ಭಾಸ್ಕರ ಆಚಾರ್ ಹಿಂದಾರು ಮಾತನಾಡಿ ನಾವು ಆಯ್ಕೆ ಮಾಡಿಕೊಂಡ ಯಾವುದೇ ಕ್ಷೇತ್ರವಿರಲಿ ಭವಿಷ್ಯತ್ತಿನಲ್ಲಿ ಯಾರಿಗೂ ತೊಂದರೆ ಕೊಡದಂತಹ ವ್ಯಕ್ತಿಗಳಾಗಿ ಮುಂದಿನ ದಿನಗಳಲ್ಲಿ ಒಳ್ಳೆಯ ಪ್ರಜೆಗಳಾಗಿ ಇನ್ನೊಬ್ಬರಿಗೆ ಸಹಾಯಹಸ್ತರಾಗಿ ಬಾಳಿ ಎಂದು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರ ಮಾತನಾಡಿ ರಾಮ- ಕೃಷ್ಣರ ಹಾಗೆ ಶ್ರಮ ಪಟ್ಟು ಉತ್ತಮ ಸಾಧನೆ ಮಾಡಿ ಉತ್ತಮ ಅಂಕಗಳನ್ನು ಪಡೆದು ಸುಸಂಸ್ಕೃತ ಮಕ್ಕಳಾಗಿ ಬಾಳಿ ಎಂದು ಆಶೀರ್ವದಿಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಜಯಮಾಲ ವಿ ಎನ್ ಪ್ರಾಸ್ತಾವಿಕ ಮಾತುಗಳೊಂದಿಗೆ ಹೊಸದಾಗಿ ಸೇರಿದ ವಿದ್ಯಾರ್ಥಿಗಳಿಗೆ ದೀಕ್ಷೆ ನೀಡಿದರು. ನಂತರ ಆರತಿ ಬೆಳಗಿ ತಿಲಕವಿಡುವ ಮೂಲಕ ಹೊಸ ವಿದ್ಯಾರ್ಥಿಗಳನ್ನು ಸ್ವಾಗತ ಮಾಡಲಾಯಿತು.
ಈ ಸಂದರ್ಭ ದಲ್ಲಿ 2022-23 ನೇ ಸಾಲಿನ 10ನೇ ತರಗತಿಯಲ್ಲಿ ರಾಜ್ಯಕ್ಕೆ ತೃತೀಯ ಮತ್ತು ಜಿಲ್ಲೆಗೆ ಪ್ರಥಮ ಸ್ಥಾನವನ್ನು ಗಳಿಸಿದ ಶಾಲಾ ವಿದ್ಯಾರ್ಥಿ ತೇಜಸ್ ಎಸ್ ಆರ್ ನ್ನು ಗೌರವಿಸಲಾಯಿತು.
ಕಾರ್ಯದರ್ಶಿ ಕೃಷ್ಣಪ್ರಸಾದ್ ಕೆದಿಲಾಯ, ಆಡಳಿತ ಮಂಡಳಿಯ ಸದಸ್ಯರಾದ ಹರೀಶ್ ಪುತ್ತೂರಾಯ ಹಾಗೂ ಎಸ್.ಜಿ .ಕೃಷ್ಣ ಹಾಗೂ ಶಿಕ್ಷಕ ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರಮೀಳಾ ಸ್ವಾಗತಿಸಿ, ಸುಕನ್ಯಾ ವಂದಿಸಿ, ನೀತು ನಿರೂಪಿಸಿದರು.