ನಿಡ್ಪಳ್ಳಿ:ಮನೆಯಂಗಳದಿಂದಲೇ ಅಡಿಕೆ ಕಳವು; ಪೊಲೀಸರ ಬದಲು ದೈವ ದೇವರ ಮೊರೆ ಹೋಗುತ್ತಿರುವ ಕೃಷಿಕರು

0

ಪುತ್ತೂರು:ಕೃಷಿಕರ ಮನೆಯಂಗಳದಿಂದ ಅಡಿಕೆ ಕಳವಾಗುತ್ತಿರುವ ಪ್ರಕರಣ ನಿಡ್ಪಳ್ಳಿ ಗ್ರಾಮದಲ್ಲಿ ಬೆಳಕಿಗೆ ಬರುತ್ತಿದ್ದರೂ ಘಟನೆ ಕುರಿತು ಅಡಿಕೆ ಕಳಕೊಂಡ ಕೃಷಿಕರು ಪೊಲೀಸರಿಗೆ ದೂರು ನೀಡದೆ ದೈವದೇವರುಗಳ ಮೊರೆ ಹೋಗಿರುವ ಘಟನೆ ಕುರಿತು ಮಾಹಿತಿ ಲಭಿಸಿದೆ.

ಕಳೆದ ಕೆಲವು ತಿಂಗಳಿನಿಂದ ನಿಡ್ಪಳ್ಳಿ ಗ್ರಾಮದ ಕೆಲವು ಕಡೆ ಕೃಷಿಕರ ಮನೆಯಂಗಳದಿಂದಲೇ ಒಣಗಿದ ಮತ್ತು ಸುಳಿದ ಅಡಿಕೆಗಳು ಕಳವಾಗಿದೆ. ಈ ಕುರಿತು ಅಡಿಕೆ ಕಳಕೊಂಡವರು ನಾನಾ ಕಾರಣಕ್ಕಾಗಿ ಪೊಲೀಸರಿಗೆ ದೂರು ನೀಡದೆ ತಾವು ನಂಬಿದ ದೈವ ದೇವರು ನೋಡಿಕೊಳ್ಳುತ್ತಾರೆ ಎಂದು ಹರಕೆ ಹೊತ್ತಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಒಂದು ತಿಂಗಳ ಹಿಂದೆ ನಿಡ್ಪಳ್ಳಿ ಗ್ರಾಮದ ನಾಕುಡೇಲು ಪರಿಸರದಲ್ಲಿ ಅಂಗಳದಲ್ಲಿ ಒಣಹಾಕಿದ ಅಡಿಕೆಗಳನ್ನು ಕಳವು ಮಾಡಲಾಗಿತ್ತು. ಗುರಿಪಾಂಡ್ಯ ಎಂಬಲ್ಲಿ ಒಂದು ಗೋಣಿ ಒಣ ಅಡಿಕೆ ಕಳವಾಗಿತ್ತು. ಪಳಂಬೆ ವಠಾರದಲ್ಲಿ 15 ದಿನದ ಹಿಂದೆಯಷ್ಟೆ 30ಕೆ.ಜಿ ಸುಳಿದ ಅಡಿಕೆ ಕಳವಾಗಿದೆ. ಆದರೆ ಈ ಕುರಿತು ಯಾರು ಕೂಡಾ ಪೊಲೀಸರಿಗೆ ದೂರು ನೀಡಿಲ್ಲ. ಅವರೆಲ್ಲ ದೈವದೇವರ ಮೊರೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here