ಪುತ್ತೂರು: ಭಾರತ ಸ್ವಾತಂತ್ರ್ಯೋತ್ಸವದ ಅಮೃತವರ್ಷದ ನಿಮಿತ್ತವಾಗಿ ಮಂಗಳೂರು ಆಕಾಶವಾಣಿಯಿಂದ ಸಾಧನಾಪಥ ಸರಣಿ ಭಾಷಣ ಕಾರ್ಯಕ್ರಮವು ಪ್ರಸಾರವಾಗುತ್ತಿದ್ದು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣದ ಕುರಿತಂತೆ ಶಿಕ್ಷಕ ಪ್ರಶಾಂತ್ ಅನಂತಾಡಿಯವರಿಂದ ಭಾಷಣ ಸರಣಿಯು ಜೂ. 3ರಿಂದ ಪ್ರಸಾರವಾಗಲಿದೆ. ಸ್ವಾತಂತ್ರ್ಯಾನಂತರದ ಭಾರತದ ಶೈಕ್ಷಣಿಕ ಸ್ಥಿತಿಗತಿಗಳು, ವಿವಿಧ ಆಯೋಗಗಳ ವರದಿಗಳು, ಅವುಗಳ ಫಲಶ್ರುತಿಗಳು, ಶಿಕ್ಷಣ ನೀತಿಗಳು ಸೇರಿದಂತೆ ಇನ್ನಿತರ ಹಲವು ಶೈಕ್ಷಣಿಕ ಬೆಳವಣಿಗೆಗಳು ಈ ಸಾಧನಾಪಥದ ಭಾಷಣ ಸರಣಿಯಲ್ಲಿ ಪ್ರಸಾರವಾಗಲಿದೆ.
ಸರಕಾರಿ ಪದವಿಪೂರ್ವ ಕಾಲೇಜು ಕಡಬ ಇಲ್ಲಿನ ಪ್ರೌಢಶಾಲಾ ವಿಭಾಗದಲ್ಲಿ ಆಂಗ್ಲಭಾಷಾ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಶಾಂತ್ ಅನಂತಾಡಿಯವರ ಹಲವು ರೇಡಿಯೋ ಭಾಷಣಗಳು ರಾಜ್ಯವ್ಯಾಪಿ ಪ್ರಸಾರಗೊಂಡಿದ್ದು ಸಾಧನಾಪಥದ ಭಾಷಣ ಸರಣಿಯು ಜೂ. 3, 9, 15, 21, 27ರಂದು ಬೆಳಿಗ್ಗೆ ಗಂಟೆ 6.45 ರಿಂದ ಮಂಗಳೂರು ಆಕಾಶವಾಣಿಯಿಂದ ಪ್ರಸಾರಗೊಳ್ಳಲಿದೆ.