ಉಪ್ಪಿನಂಗಡಿ:ಕುಡಿಯುವ ನೀರಿನ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಕುಮಾರಧಾರ ನದಿಗೆ ನೂತನ ಡ್ಯಾಮ್ ನಿರ್ಮಾಣ- ತಜ್ಞರ ಜೊತೆ ಶಾಸಕ ಅಶೋಕ್‌ ಕುಮಾರ್‌ ರೈ ಮಾತುಕತೆ

0

ಪುತ್ತೂರು: ಪುತ್ತೂರು ನಗರ ಸೇರಿದಂತೆ ವಿವಿಧ ಗ್ರಾಮಗಳಿಗೆ ಕುಡಿಯುವ ನೀರು ಯೋಜನೆ ಕಲ್ಪಿಸುವ ಉದ್ದೇಶದಿಂದ ಕುಮಾರಧಾರ ನದಿಗೆ ನೂತನ ಡ್ಯಾಂ ನಿರ್ಮಾಣ ಮಾಡುವ ಯೋಜನೆಯ ಸಾಧಕ ಹಾಗೂ ಬಾಧಕಗಳ ಬಗ್ಗೆ ತಿಳಿದುಕೊಳ್ಳುವ ಉದ್ದೇಶದಿಂದ ಪುತ್ತೂರು ಶಾಸಕರಾದ ಅಶೋಕ್ ರೈಯವರು ತಜ್ಞರ ಜೊತೆ ಯೋಜನಾ ಸ್ಥಳದಲ್ಲೇ ಮಾತುಕತೆ ನಡೆಸಿದರು.


ಬೆಂಗಳೂರಿನ ಖಾಸಗಿ ಕಂಪನಿ ಪ್ರೋಜೆಕ್ಟ್ ವ್ಯವಸ್ಥಾಪಕರಾದ ಗುರುಮೂರ್ತಿ ಎಂಬವರ ಜೊತೆ ಚರ್ಚೆ ನಡೆಸಿದ್ದಾರೆ.
ಕುಮಾರಧಾರ ನದಿಗೆ ಈಗಾಗಲೇ ಕುಡಿಯುವ ನೀರು ಯೋಜನೆಗೆಂದು ಡ್ಯಾಂ ನಿರ್ಮಾಣ ಮಾಡಲಾಗಿದೆ. ಈ ಡ್ಯಾಂನಿಂದ ಪುತ್ತೂರು ನಗರಸಭೆಗೆ ಕುಡಿಯುವ ನೀರು ಸರಬರಾಜು ಆಗುತ್ತಿದ್ದು ಅಕ್ಕಪಕ್ಕದ ಗ್ರಾಪಂ ವ್ಯಾಪ್ತಿಗೆ ಇದರ ನೀರು ಬಳಕೆಯಾಗುತ್ತಿಲ್ಲ.
ಇದೇ ನದಿಗೆ ಹೊಸ ಡ್ಯಾಂ ನಿರ್ಮಾಣ ಮಾಡುವ ಮೂಲಕ 34 ನೇ ನೆಕ್ಕಿಲಾಡಿ, ಕೋಡಿಂಬಾಡಿ, ಬನ್ನೂರು , ಉಪ್ಪಿನಂಗಡಿ, ಹಿರೆಬಂಡಾಡಿ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ ಹೊಸ ಯೋಜನೆಗೆ ಶಾಸಕರು ಮುಂದಾಗಿದ್ದಾರೆ. ಸರಕಾರಿ ಮಟ್ಟದಲ್ಲಿ ಮಾತುಕತೆ ನಡೆಸುವ ಮೊದಲಾಗಿ ಖಾಸಗಿಯಾಗಿ ತಜ್ಞರ ಜೊತೆ ಈ ಬಗ್ಗೆ ಶಾಸಕರು ಮಾತುಕತೆ ನಡೆಸಿದರು.

ಯೋಜನೆ ಜಾರಿಯಾದರೆ ಗ್ರೇಟ್
ಕುಮಾರಧಾರ ನದಿಯಲ್ಲಿ ಹೊಸದಾಗಿ ಡ್ಯಾಂ ನಿರ್ಮಾಣ ಮಾಡಿದರೆ ಅದು ಉದ್ದೇಶಿತ ಗ್ರಾಮಗಳ ಕುಡಿಯುವ ನೀರು ಯೋಜನೆಗೆ ತುಂಬಾ ಪ್ರಯೋಜನಕಾರಿಯಾಗಲಿದೆ ಮಾತ್ರವಲ್ಲದೆ ಕುಡಿಯುವ ನೀರಿನ ಸಮಸ್ಯೆ ಶಾಶ್ವತ ಪರಿಹಾರವೂ ಕಾಣಲಿದೆ ಎಂದು ತಜ್ಞರಾದ ಗುರುಮೂರ್ತಿ ತಿಳಿಸಿದರು. ಈ ಯೋಜನೆಯನ್ನು ಜಾರಿ ಮಾಡಬೇಕು ಎಂದು ಈ ಹಿಂದೆ ಕೆಲವರು ಆಲೋಚನೆಯನ್ನು ಮಾಡಿದ್ದರು ಆದರೆ ಅದನ್ನು ಜಾರಿ ಮಾಡಲು ಯಾರೂ ಮುಂದೆ ಬರಲಿಲ್ಲ . ಈ ಬಾರಿ ನೀವು ಈ ಯೋಜನೆಯನ್ನು ಜಾರಿ ಮಾಡಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿಯೇ ಇದೊಂದು ದೊಡ್ಡ ಇತಿಹಾಸವನ್ನು ನಿರ್ಮಿಸಲಿದೆ ಮಾತ್ರವಲ್ಲದೆ ರಾಜ್ಯದಲ್ಲಿಯೇ ಮಾದರಿ ಯೋಜನೆಯಾಗಲಿದೆ ಎಂದು ಹೇಳಿದರು.

ನನ್ನ ಕನಸು ಇದೆ ಸಾಕಾರವಾಗಬೇಕು: ಅಶೋಕ್ ರೈ
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂಬ ಕನಸು ನನ್ನದಾಗಿದೆ. ಉಪ್ಪಿನಂಗಡಿಯಲ್ಲಿ ಡ್ಯಾಂ ನಿರ್ಮಿಸಿ ಅಲ್ಲಿಂದ ನದಿ ತಟದ ಅಕ್ಕಪಕ್ಕದ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ವ್ಯವಸ್ಥೆಯನ್ನು ರೂಪಿಸಬೇಕು ಎಂಬುದು ನನ್ನ ಬಹುವರ್ಷದ ಕನಸಾಗಿದೆ. ಈ ಕನಸನ್ನು ಈ ಬಾರಿ ನನಸು ಮಾಡಬೇಕು ಎಂಬ ಉದ್ದೇಶದಿಂದ ಹೆಜ್ಜೆ ಇಟ್ಟಿದ್ದೇನೆ ಎಂದು ಶಾಸಕ ಅಶೋಕ್ ರೈ ಈಸಂದರ್ಭದಲ್ಲಿ ತಿಳಿಸಿದರು. ಈಗ ಇರುವ ಡ್ಯಾಂ ನ್ನು ಎತ್ತರಿಸಲು ಸಾಧ್ಯವಿಲ್ಲ ಅದರ ಸಾಮರ್ಥ್ಯ ಈಗ ಇರುವಷ್ಟೆ ಎತ್ತರಕ್ಕೆ ಇದ್ದು ಅದನ್ನು ಎತ್ತರಿಸಿ ಕಟ್ಟುವ ಹಾಗಿಲ್ಲ. ಈ ಕಾರಣಕ್ಕೆ ಹೊಸದಾಗ ಡ್ಯಾಂ ನಿರ್ಮಾಣ ಮಾಡಿ ಕುಡಿಯುವ ನೀರಿನ ಯೋಜನೆಯನ್ನು ಸಾಕಾರಗೊಳಿಸಬೇಕಿದೆ ಎಂದು ಹೇಳಿದರು.


ಸಂದರ್ಭದಲ್ಲಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ. ರಾಜಾರಾಂ ಕೆ ಬಿ, ಗ್ರಾಪಂ ಸದಸ್ಯ ಯು ಟಿ ತೌಸೀಫ್, ಶಬ್ಬೀರ್ ಕೆಂಪಿ , ನೆಕ್ಕಿಲಾಡಿ ವಲಯಕಾಂಗ್ರೆಸ್ ಅಧ್ಯಕ್ಷೆ ಅನಿಮಿನೇಜಸ್ ಸೇರಿದಂತೆ ಹಲವುಮಂದಿ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here