ಪುತ್ತೂರು: ಪುತ್ತೂರು ಮೆಡಿಕಲ್ ಕಾಲೇಜು ಪ್ರಸ್ತಾವನೆ ಇಲ್ಲಿಂದ ಹೋಗಿಯೇ ಇರಲಿಲ್ಲ. ನಾನು ವಿಚಾರಿಸಿದಾಗ ಅದು ತಾಲೂಕು ಕಚೇರಿಯಲ್ಲೇ ಇತ್ತು. ಅದನ್ನು ಈಗ ಸಹಾಯಕ ಕಮೀಷನರ್ ಮೂಲಕ ರೆಕಮಂಡೇಷನ್ ಮಾಡಿ ಆರೋಗ್ಯ ಇಲಾಖೆ ಕಾರ್ಯದರ್ಶಿಯವರಿಗೆ ಕಳುಹಿಸಿದ್ದು, ಅಲ್ಲಿ ಒಂದು ವಾರದೊಳಗೆ ಎಲ್ಲಾ ಕೆಲಸ ಮುಗಿಸಲಾಗಿದೆ. ಅಲ್ಲಿಂದ ಮುಂದೆ ಬಜೆಟ್ನಲ್ಲಿ ಸೇರಿಸಲು ಪ್ರಯತ್ನ ಮಾಡುತ್ತೇನೆ. ಇಲ್ಲಂತಾದರೂ ಕ್ಯಾಬಿನೇಟ್ನಲ್ಲಾದರೂ ಅನುಮೋದನೆ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಆಶೋಕ್ ಕುಮಾರ್ ರೈ ಹೇಳಿದ್ದಾರೆ.
ಪುತ್ತೂರು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಬಳಿಕ ಆಸ್ಪತ್ರೆಯ ವೈದ್ಯರ ಮತ್ತು ತಾಲೂಕು ಸಮಯದಾಯ ಆರೋಗ್ಯ ಕೇಂದ್ರದ ವೈದ್ಯರೊಂದಿಗಿನ ಸಭೆಯ ಮುಂದೆ ಮಾದ್ಯಮದವರೊಂದಿಗೆ ಅವರು ಮಾತನಾಡಿದರು. ಮೆಡಿಕಲ್ ಕಾಲೇಜು ಪ್ರಸ್ತಾವನೆ ಕುರಿತು ನಾನು ಶಾಸಕನಾದ ಬಳಿಕ ವಿಚಾರಿಸಿದಾಗ ಪ್ರಸ್ತಾನೆ ಹೋಗದಿರುವುದು ಗಮನಕ್ಕೆ ಬಂದಿತ್ತು. 5 ವರ್ಷದಲ್ಲಿ ಸರಕಾರ ಅದಕ್ಕೆ ಫುಲ್ಪ್ಲಜ್ಡ್ ಟೀಮ್ ಮಾಡಲಾಗಿದೆ. ಕರ್ನಾಟಕದಲ್ಲಿ 6 ಜಿಲ್ಲೆಗಳಲ್ಲಿ ಈಗಾಗಲೇ ಸರಕಾರಿ ಮೆಡಿಕಲ್ ಕಾಲೇಜಿಗೆ ಅನುಮೋದನೆ ಸಿಕ್ಕಿದೆ. ಅಲ್ಲಿ ಕಟ್ಟಡ ಮತ್ತು ಕಾಲೇಜು ಮಾಡಲು ಪ್ರತ್ಯೇಕ ಸೆಟ್ಅಪ್ ಇದೆ. ರೂ. 4600 ಕೋಟಿ ಯೋಜನೆ ಇದಾಗಿದೆ. ಅದರಲ್ಲಿ 2600 ಕೋಟಿ ಕಟ್ಟಡ ಮತ್ತು ಉಳಿದ ರೂ. 2 ಸಾವಿರ ಕೋಟಿ ಮೂಲಸೌಕರ್ಯ ಅಭಿವೃದ್ಧಿಗೆ. ಅದಕ್ಕೆ ಪ್ರಸ್ತಾವನೆ ಸರಕಾರದಿಂದ ಇದೆ. ಕಟ್ಟಡ ಆದ ತಕ್ಷಣ ಎರಡು ವರ್ಷ ಆಸ್ಪತ್ರೆ ಕಾರ್ಯ ನಡೆಸುತ್ತದೆ. ಆಮೇಲೆ ಮೆಡಿಕಲ್ ಕಾಲೇಜಿಗೆ ಅನುಮತಿ ಸಿಗುತ್ತದೆ. 5 ವರ್ಷದೊಳಗೆ ಯೋಜನೆ ಪೂರ್ಣಗೊಳ್ಳುತ್ತದೆ ಎಂದವರು ಹೇಳಿದರು.