ಪುತ್ತೂರು: ರಾಜ್ಯ ಸರಕಾರದ ರೈತರಿಗೆ ನೀಡುತ್ತಿದ್ದ ಹಾಲಿನ ಪ್ರೋತ್ಸಾಹ ಧನವನ್ನು 2ರೂ 85 ಪೈಸೆಯಿಂದ 1ರೂ 50 ಪೈಸೆಗೆ ಇಳಿಸಿದೆ.
ಬೇಸಿಗೆ ಕಾಲದಲ್ಲಿ ಹಸಿರು ಮೇವಿನ ಕೊರತೆಯಿಂದಾಗಿ ಹಾಲು ಉತ್ಪಾದನೆ ಕಡಿಮೆಯಾಗಿತ್ತು. ಹಾಗಾಗಿ ರೈತರಿಗೆ 2ರೂ 85 ಪೈಸೆ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿತ್ತು. ಈಗ ಮಳೆಗಾಲ ಆರಂಭವಾಗಿದ್ದು ಹಸಿರು ಮೇವಿನ ಕೊರತೆಯ ಪ್ರಮೇಯ ಬರುವುದಿಲ್ಲ. ಹಾಲಿನ ಉತ್ಪಾದನೆಯಲ್ಲಿಯೂ ಕೊರತೆ ಆಗುವುದಿಲ್ಲಿ ಎಂದು ಬೆಂಗಳೂರು ಮಿಲ್ಕ್ ಯೂನಿಯನ್ ಲಿಮಿಟೆಡ್ ಹೇಳಿದೆ. ಆದರೆ ಪ್ರೋತ್ಸಾಹ ಧನ ಕಡಿಮೆಯಾಗಿದ್ದು ರೈತರಲ್ಲಿ ನಿರಾಸೆ ಮೂಡಿಸಿದೆ.