ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದಿಂದ ಸರಣಿ ಯಕ್ಷಗಾನ ತಾಳಮದ್ದಳೆ ಮೇ 5ರಂದು ದೇವಳದ ರಾಜಗೋಪುರದಲ್ಲಿ ನಡೆಯಿತು.


‘ಮಾಯಾಮೃಗ ” ತಾಳಮದ್ದಳೆಯ ಹಿಮ್ಮೇಳದಲ್ಲಿ ಆನಂದ ಸವಣೂರು, ನಿತೀಶ್ ಎಂಕಣ್ಣಮೂಲೆ, ಪ್ರೊ. ದಂಬೆ ಈಶ್ವರ ಶಾಸ್ತ್ರೀ, ಮುರಳೀಧರ ಕಲ್ಲೂರಾಯ, ಅಚ್ಯುತ ಪಾಂಗಣ್ಣಾಯ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀರಾಮ ( ಭಾಸ್ಕರ್ ಬಾರ್ಯ ), ಸೀತೆ ( ಕು೦ಬ್ಳೆ ಶ್ರೀಧರ್ ರಾವ್ ), ರಾವಣ (ಪೂಕಳ ಲಕ್ಷ್ಮೀನಾರಾಯಣ ಭಟ್ ), ಮಾರೀಚ ( ಭಾಸ್ಕರ್ ಶೆಟ್ಟಿ ಸಾಲ್ಮರ ), ಸನ್ಯಾಸಿ ರಾವಣ ( ಪಕಳಕುಂಜ ಶ್ಯಾಮ್ ಭಟ್ ), ಲಕ್ಷ್ಮಣ ( ದುಗ್ಗಪ್ಪ ಯನ್ ) ಸಹಕರಿಸಿದರು. ಇತ್ತೀಚೆಗೆ ನಿಧನರಾದ ಯಕ್ಷಗಾನ ಕಲಾವಿದ ಸಂಘಟಕ ಯಸ್ ಯನ್ ಪಂಜಜೆಯವರಿಗೆ ತಾಳಮದ್ದಳೆಯ ಕೊನೆಯಲ್ಲಿ ನುಡಿನಮನ ಸಲ್ಲಿಸಿದರು. ಸಂಘದ ಅಧ್ಯಕ್ಷ ಭಾಸ್ಕರ್ ಬಾರ್ಯ ನುಡಿನಮನ ಸಲ್ಲಿಸಿದರು. ಟಿ ರಂಗನಾಥ ರಾವ್ ಸ್ವಾಗತಿಸಿ ಶ್ರೀಮತಿ ಶುಭಾ ಜೆ ಸಿ ಅಡಿಗ ವಂದಿಸಿದರು.

LEAVE A REPLY

Please enter your comment!
Please enter your name here