ಕಾಣಿಯೂರು: ಎಸ್. ಎಸ್. ಎಲ್ ಸಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಆಂಗ್ಲ ಮಾಧ್ಯಮ ವಿಭಾಗದ ಉತ್ತಮ್ ಜಿ ಅವರು 624 ಅಂಕಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡು ವಿಶೇಷ ಸಾಧನೆ ಮಾಡಿದ್ದಾರೆ ಎಂದು ಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ ಅವರು ತಿಳಿಸಿದ್ದಾರೆ.
ಉತ್ತಮ್ ಅವರು ಸಮಾಜ ವಿಜ್ಞಾನದಲ್ಲಿ ಈ ಹಿಂದೆ 98 ಅಂಕ ಬಂದಿದ್ದು ಇದೀಗ ಮರು ಮೌಲ್ಯ ಮಾಪನದಲ್ಲಿ 99 ಅಂಕಗಳೊಂದಿಗೆ 625 ರಲ್ಲಿ 624 ಅಂಕಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆಯುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ. ಇವರು ಕಾಣಿಯೂರು ಗ್ರಾಮದ ಗುಂಡಿಗದ್ದೆ ಪದ್ಮನಾಭ ಜಿ ಮತ್ತು ಹೇಮಾವತಿ ದಂಪತಿಗಳ ಪುತ್ರ. ಅಲ್ಲದೆ ಸಂಸ್ಥೆಯ ವಿದ್ಯಾರ್ಥಿನಿ ಶ್ರಾವ್ಯ ಕೆ.ಎಚ್ ಈ ಹಿಂದೆ 608ಅಂಕ ಪಡೆದುಕೊಂಡಿದ್ದು, ಮರು ಮೌಲ್ಯ ಮಾಪನದಲ್ಲಿ 7 ಅಂಕ ಹೆಚ್ಚುವರಿ ಪಡೆಯುವ ಮೂಲಕ 615 ಅಂಕ ಪಡೆದುಕೊಂಡು ಸಂಸ್ಥೆಗೆ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಇವರು ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಹುದೇರಿ ಕುಶಾಲಪ್ಪ ಗೌಡ ಮತ್ತು ಸುಜಿತ ಕೆ ದಂಪತಿಗಳ ಪುತ್ರಿ.