ಪುತ್ತೂರು: 2023-24ನೇ ಶೈಕ್ಷಣಿಕ ವರ್ಷದ ದ. ಕ. ಜಿ. ಪಂ.ಉನ್ನತಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ LKG&UKG ಪ್ರಸಕ್ತ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವು ಜರುಗಿತು.ವಿದ್ಯಾರ್ಥಿಗಳನ್ನು ಶಾಲಾ ಬ್ಯಾಂಡು ವಾದ್ಯಗಳಲ್ಲಿ ಕರೆತಂದು ಶಿಕ್ಷಕಿಯರು ಮಕ್ಕಳಿಗೆ ಆರತಿ ಬೆಳಗಿ ಹೂಚೆಲ್ಲಿ ಸಿಹಿತಿಂಡಿ ಹಂಚಿ ತರಗತಿಗೆ ಬರಮಾಡಿಕೊಂಡರು.
ಕಾವು ಸರಕಾರಿ ಶಾಲೆಯನ್ನು ದತ್ತು ಸ್ವೀಕರಿಸಿದ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ್ ಶೆಟ್ಟಿ ಮಾತನಾಡಿ LKG &UKG ಯಲ್ಲಿ 70ವಿದ್ಯಾರ್ಥಿಗಳಿದ್ದು ಈ ಮಕ್ಕಳಿಗಾಗಿ ಖಾಸಗಿ ಶಾಲೆಗೆ ಸರಿ ಸಮಾನವಾಗಿ ಪೋಷಕರ ಸಹಕಾರದೊಂದಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಲಾಗುವುದು ಎಂದರು.
ಸಭೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ದಿವ್ಯಾನಾಥ್ ಶೆಟ್ಟಿ ಕಾವು, ಅಬ್ದುಲ್ ರಹಿಮಾನ್ ಕಾವು, ಸುರೇಖಾ ಡಿ ಶೆಟ್ಟಿ, ಶಾಲಾ ಹಳೇ ವಿದ್ಯಾರ್ಥಿ ಸಂಘ ದ ಅಧ್ಯಕ್ಷ ಹರೀಶ್ ಕುಂಜತ್ತಾಯ, ಶಾಲಾ ಮುಖ್ಯೋಪಾದ್ಯಾಯಿನಿ ಸವಿತಾ ಕುಮಾರಿ, LKG&UKG ಶಿಕ್ಷಕಿಯರಾದ ವಂದಿತಾ ರೈ, ಅರ್ಚನಾ, ಭಾಸ್ಕರ ಗೌಡ, ಪ್ರತಿಮಾ, ಮಲ್ಲಿಕಾ, ಶಮೀಮಾ, ಮತ್ತು LKG&UKG ಯ ಸಹಾಯಕಿ ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದರು.