ಜೂ.9:ರೋಟರಿ ಯುವ, ರೋಟರಿ ಇಲೈಟ್, ರೋಟರಿ ನ್ಯೂ ಟಾಂಪಾ ನೂನ್ ರವರಿಂದ ಡಯಾಲಿಸಿಸ್ ಮೆಷಿನ್‌ಗಳು, ಆರ್.ಓ ಪ್ಲಾಂಟ್ ಲೋಕಾರ್ಪಣೆ

0

ರೂ.52.50 ಲಕ್ಷ ವೆಚ್ಚ | ಹೊಸ 6 ಡಯಾಲಿಸಿಸ್ ಮೆಷಿನ್‌ಗಳು | 24*7 ಕಾರ್ಯ ನಿರ್ವಹಣೆ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವ ಮತ್ತು ರೋಟರಿ ಕ್ಲಬ್ ಪುತ್ತೂರು ಇಲೈಟ್ ಇವರು, ಅಮೇರಿಕಾದ ಫ್ಲೋರಿಡಾದಲ್ಲಿರುವ ರೋಟರಿ ಕ್ಲಬ್ ನ್ಯೂ ಟಾಂಪಾನೂನ್ ಇವರ ಜಂಟಿ ಸಹಯೋಗದಲ್ಲಿ ಪುತ್ತೂರಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಕೊಡಮಾಡಿದ 6 ಹೊಸ ಡಯಾಲಿಸಿಸ್ ಮೆಷಿನ್‌ಗಳ ಮತ್ತು ಆರ್.ಓ ಪ್ಲಾಂಟ್ ಇದರ ಹಸ್ತಾಂತರ ಕಾರ್ಯಕ್ರಮವು ಜೂ.9 ರಂದು ಬೆಳಿಗ್ಗೆ ಪುತ್ತೂರಿನ ಸರಕಾರಿ ಆಸ್ಪತ್ರೆಯ ವಠಾರದಲ್ಲಿ ನಡೆಯಲಿದೆ ಎಂದು ರೋಟರಿ ಕ್ಲಬ್ ಪುತ್ತೂರು ಇಲೈಟ್ ಅಧ್ಯಕ್ಷ ಡಾ|ಪೀಟರ್ ವಿಲ್ಸನ್ ಪ್ರಭಾಕರ್ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.


ರೂ.52.50 ಲಕ್ಷ ವೆಚ್ಚ:
ರೋಟರಿ ಜಿಲ್ಲೆ 3181ರ ವಲಯ ಐದರ ವ್ಯಾಪ್ತಿಯಲ್ಲಿ ಬರುವ ರೋಟರಿ ಕ್ಲಬ್ ಪುತ್ತೂರು ಯುವ ಮತ್ತು ರೋಟರಿ ಕ್ಲಬ್ ಪುತ್ತೂರು ಇಲೈಟ್ ಇವರು ಸಮುದಾಯ ಅಭಿವೃದ್ಧಿ ಯೋಜನೆಯನ್ವಯ ಕಾರ್ಯಗತಗೊಳಿಸುವ ಈ ಯೋಜನೆಯು ಅಂತರ್ರಾಷ್ಟ್ರೀಯ ರೋಟರಿ ಫೌಂಡೇಶನ್‌ನ ಗ್ಲೋಬಲ್ ಗ್ರ್ಯಾಂಟ್ (ನಂಬ್ರ. ಜಿ.ಜಿ 2346882) ನೊಂದಿಗೆ ಅನುಷ್ಠಾನಗೊಂಡಿದೆ. ಈ ಮಹತ್ತರ ಸಮಾಜಮುಖಿ ಕಾರ್ಯದಲ್ಲಿ ಅಮೇರಿಕಾದ ಫ್ಲೋರಿಡಾದಲ್ಲಿರುವ ರೋಟರಿ ಕ್ಲಬ್ ನ್ಯೂ ಟಾಂಪಾನೂನ್, ರೋಟರಿ ಜಿಲ್ಲೆ 6890 ಮತ್ತು ರೋಟರಿ ಜಿಲ್ಲೆ 3181ರ ಸಹಯೋಗದೊಂದಿಗೆ ಈ ಯೋಜನೆಯನ್ವಯ ಒಟ್ಟು 63,500 ಡಾಲರ್ ಅಂದರೆ ರೂ. 52.50 ಲಕ್ಷ ವೆಚ್ಚದಲ್ಲಿ ಒಟ್ಟು 6 ಹೊಸ ಡಯಾಲಿಸಿಸ್ ಮೆಷಿನ್‌ಗಳನ್ನು ಮತ್ತು ಅದಕ್ಕೆ ಅಗತ್ಯವಿರುವ ಆರ್.ಓ ಪ್ಲಾಂಟ್‌ನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ಕೊಡುಗೆಯಾಗಿ ನೀಡಲಾಗುವುದು ಎಂದರು.


24*7 ಸೇವೆ:
ಪ್ರಸ್ತುತ ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ 6 ಡಯಾಲಿಸಿಸ್ ಮೆಷಿನ್‌ಗಳಿದ್ದು ಸುಮಾರು 53 ಡಯಾಲಿಸಿಸ್ ರೋಗಿಗಳಿಗೆ ಸೇವೆ ನೀಡುತ್ತಿದೆ. ಪ್ರಸ್ತುತ ಡಯಾಲಿಸಿಸ್ ಅಗತ್ಯವಿರುವ ಇನ್ನೂ 90 ಜನರು ಕಾಯ್ದಿರಿಸಿದ ಪಟ್ಟಿಯಲ್ಲಿದ್ದಾರೆ. ಅವರೆಲ್ಲರ ಬೇಡಿಕೆಯನ್ನು ಪೂರೈಸುವುದಕ್ಕಾಗಿ 6 ಹೊಸ ಡಯಾಲಿಸಿಸ್ ಮೆಷಿನ್‌ಗಳು 24*7 ಅವಧಿ ಕಾರ್ಯ ನಿರ್ವಹಿಸಲಿದೆ ಎಂದು ಡಯಾಲಿಸಿಸ್ ಸೆಂಟರ್ ಯೋಜನೆಯ ಕನ್ವೀನರ್ ಆಸ್ಕರ್ ಆನಂದ್ ರವರು ಮಾಹಿತಿ ನೀಡಿದರು.


ಲೋಕಾರ್ಪಣೆ:
ಪುತ್ತೂರಿನ ಶಾಸಕರಾದ ಅಶೋಕ್ ಕುಮಾರ್ ರೈಯವರು ಡಯಾಲಿಸಿಸ್ ಮೆಷಿನ್ ಗಳ ಕೊಡುಗೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ರೋಟರಿ ಜಿಲ್ಲೆ 3181ರ ಜಿಲ್ಲಾ
ಗವರ್ನರ್ ಎನ್. ಪ್ರಕಾಶ್ ಕಾರಂತ್, ಪಿಡಿಜಿ. ಕೆ ಕೃಷ್ಣ ಶೆಟ್ಟಿ, ಪುತ್ತೂರಿನ ಸಹಾಯಕ ಆಯುಕ್ತ ಗಿರೀಶ್ ನಂದನ್ ಎಂ, ರೋಟರಿ ಜಿಲ್ಲೆ ಡಿ.ಆರ್.ಎಫ್.ಸಿ ಡಾ| ಸೂರ್ಯನಾರಾಯಣ ಕೆ., ಮಾಜಿ ಶಾಸಕರಾದ ಸಂಜೀವ ಮಠಂದೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕಿಶೋರ್ ಕುಮಾರ್ ಎಂ.,ರೋಟರಿ ಜಿಲ್ಲೆ 3181 ಇದರ ನಿಯೋಜಿತ ಜಿಲ್ಲಾ ಗವರ್ನರ್ ಹೆಚ್.ಆರ್ ಕೇಶವ, ರೋಟರಿ ಜಿಲ್ಲೆ 3181 ಇದರ ಜಿಲ್ಲಾ ಗವರ್ನರ್ ನಾಮಿನಿ ವಿಕ್ರಮದತ್ತ, ರೋಟರಿ ಜಿಲ್ಲೆ 3181 ಇದರ ಜಿಲ್ಲಾ ಗವರ್ನರ್ ನಾಮಿನಿ ಡೆಸಿಗ್ನೇಟ್ ಪಿ.ಕೆ ರಾಮಕೃಷ್ಣ, ತಾಲೂಕು ಆರೋಗ್ಯ ಅಧಿಕಾರಿ ಡಾ.ದೀಪಕ್ ರೈ, ಸರಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಆಶಾಜ್ಯೋತಿ ಕೆ. ಜಿಲ್ಲಾ ರೋಟರಿ ಕಾರ್ಯದರ್ಶಿಗಳಾದ ನಾರಾಯಣ ಹೆಗ್ಡೆ ಮತ್ತು ಕೆ.ವಿಶ್ವಾಸ್ ಶೆಣೈ, ರೋಟರಿ ಜಿಲ್ಲೆ ಡಿಸ್ಟ್ರಿಕ್ಟ್ ಸೆಕ್ರೆಟರಿ ಪ್ರಾಜೆಕ್ಟ್ ಇದರ ರಾಜೇಂದ್ರ ಕಲ್ಬಾವಿ, ಅಸಿಸ್ಟೆಂಟ್ ಗವರ್ನರ್‌ಗಳಾದ ಎ.ಜೆ. ರೈ ಮತ್ತು ಶಿವರಾಮ ಏನೆಕಲ್ಲು, ನಗರ ಸಭೆಯ ಸ್ಥಳೀಯ ಸದಸ್ಯರಾದ ಶ್ರೀಮತಿ ಯಶೋಧ ಹರೀಶ್, ರೋಟರಿ ವಲಯ ಸೇನಾನಿಗಳಾದ ಹರ್ಷಕುಮಾರ್ ರೈ ಮತ್ತು ಸೆನೊರೀಟಾ ಆನಂದ್ ರವರು ಅತಿಥಿಗಳಾಗಿ ಉಪಸ್ಥಿತರಿರುತ್ತಾರೆ ಎಂದು ಗ್ಲೋಬಲ್ ಗ್ರ್ಯಾಂಟ್ ಪ್ರಾಜೆಕ್ಟ್ ನ ಪ್ರೈಮರಿ ಕಾಂಟ್ಯಾಕ್ಟ್ ರತ್ನಾಕರ್ ರೈ ಹೇಳಿದರು.


ಪತ್ರಿಕಾಗೋಷ್ಟಿಯಲ್ಲಿ ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷೆ ರಾಜೇಶ್ವರಿ ಜಿ. ಆಚಾರ್, ರೋಟರಿ ಕ್ಲಬ್ ಪುತ್ತೂರು ಯುವದ ನಿಯೋಜಿತ ಅಧ್ಯಕ್ಷ ಪಶುಪತಿ ಶರ್ಮ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here