ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಸಂಘ , ಗ್ರಾಮ ಸಮಿತಿ ಇದರ ಮಹಾಸಭೆ -ಪುಸ್ತಕ ವಿತರಣೆ

0

ಪುತ್ತೂರು : ಬ್ರಹ್ಮ ಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಸಂಘ (ರಿ) ಪುತ್ತೂರು , ಬಿಲ್ಲವ ಗ್ರಾಮ ಸಮಿತಿ ಕೆದಂಬಾಡಿ ಇದರ ವತಿಯಿಂದ ,ಪ್ರತಿಭಾ ಪುರಸ್ಕಾರ,ಪುಸ್ತಕ ವಿತರಣೆ ಕಾರ್ಯಕ್ರಮ ಜೂ.11 ರಂದು ಕೆದಂಬಾಡಿ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ರಾದ ಬಾಳಪ್ಪ ಪೂಜಾರಿ ಬಾಲಯರವರ ಅಧ್ಯಕ್ಷತೆಯಲ್ಲಿ , ಕೋಚಣ್ಣ ಪೂಜಾರಿಯವರ ಅದಿತಿ ನಿವಾಸ ಎಂಡೆಸಾಗುವಿನಲ್ಲಿ ನಡೆಯಿತು.

ಪುತ್ತೂರು ತಾಲೂಕು ಮಹಿಳಾವೇದಿಕೆ ಅಧ್ಯಕ್ಷೆ ಹಾಗು ಬಿಲ್ಲವ ಸಂಘದ ಉಪಾಧ್ಯಕ್ಷೆ ಚಂದ್ರಕಲಾ ಮುಕ್ವೆಯವರು ಕಾರ್ಯಕ್ರಮ ಉದ್ಘಾಟಿಸಿ, ಶುಭ ಹಾರೈಸಿದರು. ಪುತ್ತೂರು ತಾಲೂಕು ಬಿಲ್ಲವ ಸಂಘದ ಜತೆ ಕಾರ್ಯದರ್ಶಿ ಚಿದಾನಂದ ಸುವರ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಕೆದಂಬಾಡಿ ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆ ಪುಷ್ಪಾ ಬೋಲೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಿಲ್ಲವ ಗ್ರಾಮ ಸಮಿತಿ ಮುಖoಡರು ಹಾಗೂ ಮಾಜಿ ಕುಂಬ್ರ ವಲಯ ಸಂಚಾಲಕ ಕೋಚಣ್ಣ ಪೂಜಾರಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳು ಕಾರಣಿಕ ಪುರುಷರಾದ ಕೋಟಿ ಚೆನ್ನಯರ ಆದರ್ಶಗಳನ್ನು ಬೆಳೆಸುತ್ತಾ ಸತ್ಯ,ಧರ್ಮ,ನ್ಯಾಯ,ನೀತಿಯಿಂದ ಬದುಕಬೇಕು.ಬ್ರಹ್ಮಶ್ರೀ ನಾರಾಯಣ ಗುರುಗಳ ವಿದ್ಯೆಯಿಂದ ಸ್ವತಂತ್ರರಾಗಿ , ಸಂಘಟನೆಯಿಂದ ಬಲಯುತರಾಗಿ ಎಂಬ ಸಂದೇಶವನ್ನು ಪಾಲಿಸಬೇಕು. ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯ ಗಳನ್ನು ಮೈಗೂಡಿಸಿಕೊಂಡು ಅದರ್ಶಪ್ರಾಯರಾಗಿ ಬದುಕಬೇಕು.ಹೆತ್ತವರನ್ನು ಗೌರವದಿಂದ ಕಾಣಬೇಕು ಎಂದು ಹೇಳಿ ಶುಭ ಕೋರಿದರು.


ಯುವವಾಹಿನಿ ಕೇಂದ್ರ ಸಮಿತಿ ಕ್ರೀಡಾ ನಿರ್ದೇಶಕ ಹಾಗೂ ಪುತ್ತೂರು ತಾಲೂಕು ಯುವವಾಹಿನಿ ಅಧ್ಯಕ್ಷ ಬಾಬು ಇದ್ಪಾಡಿ.ಯುವವಾಹಿನಿ ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ ಕುರಿ ಕ್ಕಾರ,ನಾರಾಯಣ ಪೂಜಾರಿ ನಂಜೆ, ಸತೀಶ್ ಯಚ್ ಕೆ. ಸುರೇಶ್ ಸುಶ ತಿಂಗಳಾಡಿ, ಗಂಗಾಧರ ಬಾಲಯ,ಮಂಜುನಾಥ ಇದ್ಪಾಡಿ,ಪುತ್ತೂರು ತಾಲೂಕು ಮಹಿಳಾವೇದಿಕೆ ಕೋಶಾಧಿಕಾರಿ ಹಾಗೂ ಆರಿಯಡ್ಕ ಮಹಿಳಾವೇದಿಕೆ ಅಧ್ಯಕ್ಷೆ ಯಶೋಧ ಮಜ್ಜಾರು,ಜಯಲತ ಬಾರಿಕೆ,ಪ್ರಮುಖರಾದ ಬೇಬಿ ಬಾರಿಕೆ,ಮಾಲತಿ ಎಂಡೆಸಾಗು,ಪೂರ್ಣಿಮ ಇದ್ಪಾಡಿ,ಸಭೆಯಲ್ಲಿ ಉಪಸ್ಥಿತರಿದ್ದರು.

ಎಸ್ ಎಸ್ ಎಲ್ ಸಿ ಮತ್ತು ಪಿ ಯುಸಿ ಯಲ್ಲಿ ಹೆಚ್ಚು ಅಂಕ ಗಳಿಸಿ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ಮಾಡಿ ಗೌರವಿಸಲಾಯಿತು. ಸತೀಶ್ ಯಚ್ ಕೆ ಮತ್ತು ಕುಮಾರಿ ಅದೀಕ್ಷ ಯಚ್ ಕೆ ಯವರು ಪ್ರತಿಭಾ ಪುರಸ್ಕಾರ ಪಡೆದವರನ್ನು ಪರಿಚಯಿಸಿದರು.


ಕೆದಂಬಾಡಿ ಗ್ರಾಮ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಕುಂಬ್ರ ಕಾರ್ಯಕ್ರಮ ನಿರೂಪಿಸಿ , ನಿರ್ವಹಿಸಿದರು.
ಸುರೇಶ್ ಸುಶ ತಿಂಗಳಾಡಿ ಇಬ್ಬರು ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದ ಪುಸ್ತಕ ಮತ್ತು ಎರಡು ಜತೆ ಯುನಿಪಾರ್ಮ್ ನೀಡಿದರು. ಕುಮಾರಿ ಅನುಷಾ ಕೊಡಿಯಡ್ಕ ಪ್ರಾರ್ಥಿಸಿದರು. ಸುಮಾರು 24 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಮಾಡಲಾಯಿತು.

LEAVE A REPLY

Please enter your comment!
Please enter your name here