ಕುಂಬ್ರದಲ್ಲಿ ಕಾರ್ಣಿಕದ ಕಲ್ಲುರ್ಟಿ ಯಕ್ಷಗಾನ ಬಯಲಾಟ, ಸಾಧಕರಿಗೆ ಸನ್ಮಾನ

0

ಪುತ್ತೂರು: ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಕುಂಬ್ರದ ಶ್ರೀ ರಾಮ ಭಜನಾ ಮಂದಿರದ ಸಭಾಭವನದಲ್ಲಿ ಕಾರ್ಣಿಕದ ಕಲ್ಲುರ್ಟಿ ಎಂಬ ತುಳು ಯಕ್ಷಗಾನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಯಕ್ಷಕಲಾ ಪೋಷಕ ಕುಂಬ್ರ ಬಾಲಕೃಷ್ಣ ರೈ ವೇದಿಕೆಯಲ್ಲಿ ಜೂ.11 ರಂದು ನಡೆಯಿತು. ಯಕ್ಷಗಾನ ಬಯಲಾಟದ ಮೊದಲು ನಡೆದ ಸಭಾ ಕಾರ್ಯಕ್ರಮದಲ್ಲಿ ಉದ್ಯಮಿ ಬೂಡಿಯಾರ್ ರಾಧಾಕೃಷ್ಣ ರೈ, ಪ್ರಗತಿಪರ ಕೃಷಿಕ ಬಾರಿಕೆ ನಾರಾಯಣ ರೈ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ, ಉದ್ಯಮಿ ಕುಂಬ್ರ ಮೋಹನದಾಸ ರೈ, ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಕುಂಬ್ರ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಇದ್ಯಪೆ ಶಿವರಾಮ ಗೌಡ, ಉದ್ಯಮಿ ಬಾಬು ಪೂಜಾರಿ ಬಡಕ್ಕೋಡಿ, ರಂಗಭೂಮಿ ಕಲಾವಿದ ಸುಂದರ ರೈ ಮಂದಾರ ಉಪಸ್ಥಿತರಿದ್ದರು.

ಸಾಧಕರಿಗೆ ಸನ್ಮಾನ/ ಗೌರವಾರ್ಪಣೆ:
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಸಾಧಕರಾದ ಡಾ.ಸತ್ಯವತಿ ಆಳ್ವ ಮುಗೇರು, ಮನಮೋಹನ ರೈ ಕುಂಬ್ರ ಹಾಗೂ ರವಿಚಂದ್ರ ರೈ ಮುಂಡೂರು ರವರುಗಳನ್ನು ಶಾಲು, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಇದಲ್ಲದೆ ಹಲವು ಮಂದಿಯನ್ನು ಗೌರವಿಸಲಾಯಿತು. ವಿಶೇಷವಾಗಿ ಯಕ್ಷಗಾನ ಕಲಾಪೋಷಕ ಕುಂಬ್ರ ಬಾಲಕೃಷ್ಣ ರೈಯವರ ಪುತ್ರ ಸಂತೋಷ್ ಕುಮಾರ್ ರೈ ಮೇಗಿನಗುತ್ತು ಕುಂಬ್ರ, ಶಮಿತ್ ರೈ ಕುಂಬ್ರ, ಕೆದಂಬಾಡಿ ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರ, ಒಳಮೊಗ್ರು ಗ್ರಾಪಂ ಸದಸ್ಯ ವಿನೋದ್ ಶೆಟ್ಟಿ ಮುಡಾಲ, ಅನಿಲ್ ರೈ ಬಾರಿಕೆ, ರಾಧಾಕೃಷ್ಣ ರೈ ಅಲಂಗೂರು, ವೈಭವ್ ಕುಂಬ್ರ, ಶಿವಪ್ರಸಾದ್ ರೈ ಕುರಿಕ್ಕಾರರವರುಗಳನ್ನು ಗೌರವಿಸಲಾಯಿತು. ಯಕ್ಷಗಾನ ಸಂಯೋಜಕ ಕಡಬ ಶ್ರೀನಿವಾಸ ರೈ ಸ್ವಾಗತಿಸಿ, ವಂದಿಸಿದರು. ಹರೀಶ್ ರೈ ಮುಗೇರು ಕಾರ್ಯಕ್ರಮ ನಿರೂಪಿಸಿದರು.

ಮನರಂಜಿಸಿದ ಯಕ್ಷಗಾನ ಬಯಲಾಟ:
ಕಾರ್ಣಿಕದ ಕಲ್ಲುರ್ಟಿ ಯಕ್ಷಗಾನ ಬಯಲಾಟದಲ್ಲಿ ಹಿಮ್ಮೆಳದಲ್ಲಿ ಭಾಗವತರಾಗಿ ಗಿರೀಶ್ ರೈ ಕಕ್ಕೆಪದವು, ಚೆಂಡೆ ಪ್ರಕಾಶ್ ವಿಟ್ಲ, ಮದ್ದಲೆ ಶ್ರೀಧರ ವಿಟ್ಲ, ಹಾಸ್ಯ ದಿನೇಶ ಕೊಡಪದವು, ಸ್ತ್ರೀ ವೇಷದಲ್ಲಿ ಕಡಬ ಶ್ರೀನಿವಾಸ ರೈ, ಸಂತೋಷ್ ಕುಲಶೇಖರ, ಲೋಹಿತ್ ಸುಳ್ಯ, ಪಾತ್ರಧಾರಿಗಳಾಗಿ ಸರಪಾಡಿ ಅಶೋಕ ಶೆಟ್ಟಿ, ಜಯಾನಂದ ಸಂಪಾಜೆ, ತಿಲಕ್ ಹೆಗ್ಡೆ, ಲಕ್ಷ್ಮಣ ಆಚಾರ್ಯ ಎಡಮಂಗಲ, ಸುಬ್ಬು ಸಂಟ್ಯಾರ್ ಮತ್ತು ಪ್ರಕಾಶ್ ಪಂಜ ಕಾಣಿಸಿಕೊಂಡಿದ್ದರು. ಕಡಬ ಶ್ರೀನಿವಾಸ ರೈ ಯಕ್ಷಗಾನ ಸಂಯೋಜನೆ ಮಾಡಿದ್ದರು. ಕಾರ್ಯಕ್ರಮಕ್ಕೆ ಯಕ್ಷ ಮಿತ್ರರು ಕುಂಬ್ರ ಸಂಪೂರ್ಣ ಸಹಕಾರ ನೀಡಿದ್ದರು.

LEAVE A REPLY

Please enter your comment!
Please enter your name here