ಪಾಣಾಜೆ ಸುಬೋಧ ಪ್ರೌಢಶಾಲೆಯಲ್ಲಿ 1975-1976ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ನೆನಪಿನಂಗಳ ಕಾರ್ಯಕ್ರಮ

0

ನಿಡ್ಪಳ್ಳಿ: ಪಾಣಾಜೆ ಸುಬೋಧ ಪ್ರೌಢಶಾಲೆಯ 1975-1976 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪುನರ್ಮಿಲನ  ನೆನಪಿನಂಗಳ ಕಾರ್ಯಕ್ರಮ ಪಾಣಾಜೆ ವಿದ್ಯಾವರ್ಧಕ  ಸಂಘದ ಅಧ್ಯಕ್ಷರಾದ ಉಪೇಂದ್ರ ಬಲ್ಯಾಯ ದೇವಸ್ಯ ಅವರ ಅಧ್ಯಕ್ಷತೆಯಲ್ಲಿ  ಸುಬೋಧ ಪ್ರೌಢ ಶಾಲೆಯಲ್ಲಿ  ನಡೆಯಿತು. ಶಾಲೆಯ ಸ್ಥಾಪಕ ಮುಖ್ಯ ಶಿಕ್ಷಕರಾದ ಪಿಲಿಂಗಲ್ಲು ಕೃಷ್ಣ ಭಟ್ಟರು  ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲೆಯಲ್ಲಿ ಸಂಸ್ಕೃತ ಮತ್ತು ಕನ್ನಡ ಅಧ್ಯಾಪಕರಾಗಿದ್ದ ಕಾಕೆಕೊಚ್ಚಿ ಪರಮೇಶ್ವರ ಭಟ್ ಹಾಗೂ ಅಗಲಿದ ಸಹಪಾಠಿಗಳಿಗೆ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಆ ಬ್ಯಾಚಿನ ಶಿಕ್ಷಕರಾದ ಪಿಲಿಂಗಲ್ಲು ಕೃಷ್ಣ ಭಟ್, ಮೊಳಕ್ಕಾಲು ಶ್ರೀ ಕೃಷ್ಣ ಭಟ್, ಕೊಂದಲಕಾನ ವೆಂಕಟ್ರಮಣ ಭಟ್, ಸಿ.ಸುಬ್ರಹ್ಮಣ್ಯ ಶಾಸ್ತ್ರಿ, ಚಂದ್ರಶೇಖರ ದೈತೋಟ, ಪುರಂದರ ಎಂ ಜಿ, ಗುಮಾಸ್ತರಾಗಿದ್ದ ಲಕ್ಷ್ಮೀಶ ಹಾಗೂ ಜವಾನರಾಗಿದ್ದ ಚನಿಯ ನಾಯ್ಕ ಅವರನ್ನು ಶಾಲುಹೊದೆಸಿ ಸ್ಮರಣಿಕೆ ನೀಡಿ ಹಿರಿಯ ವಿದ್ಯಾರ್ಥಿಗಳು ಗೌರವಿಸಿದರು.

ಎಲ್ಲಾ ಹಿರಿಯ ವಿದ್ಯಾರ್ಥಿಗಳು ತಮ್ಮ  ಪರಿಚಯ ಮಾಡಿಕೊಂಡರು. ಹಲವು ವಿದ್ಯಾರ್ಥಿಗಳು  ಕುಟುಂಬ ಸಮೇತರಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಕಳೆ ನೀಡಿದರು. ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗದಲ್ಲಿರುವ ಹಾಗೂ ನಿವೃತ್ತರಾಗಿರುವ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡದ್ದು ವಿಶೇಷವಾಗಿತ್ತು.

ಎಲ್ಲಾ ಶಿಕ್ಷಕರು ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರವೀಂದ್ರ ಭಂಡಾರಿ ಹಾಗೂ  ಮುಖ್ಯ ಶಿಕ್ಷಕರಾದ  ಶ್ರೀಪತಿ ಭಟ್ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಅಭಿನಂದಿಸಿದರು. ಶಾಲಾ ಸಂಚಾಲಕರಾದ ಗಿಳಿಯಾಲು ಮಹಾಬಲೇಶ್ವರ ಭಟ್ಟ್ ಶಾಲೆಯ ಸ್ಥಿತಿಗತಿಗಳನ್ನು ಹಿರಿಯ ವಿದ್ಯಾರ್ಥಿಗಳಿಗೆ ತಿಳಿಸಿ  ಅಭಿನಂದಿಸಿದರು.

ಶಾಲೆಗೆ ರೂ 37 ಸಾವಿರ ದೇಣಿಗೆ ಹಸ್ತಾಂತರ:

ಆ ಸಾಲಿನ ಹಿರಿಯ ವಿದ್ಯಾರ್ಥಿಗಳು ಒಟ್ಟು  ರೂ 37 ಸಾವಿರವನ್ನು ಶಾಲೆಯ ಅಭಿವೃದ್ಧಿ ಕಾರ್ಯಗಳಿಗಾಗಿ ದೇಣಿಗೆಯಾಗಿ ಸಂಚಾಲಕರು,  ಅಧ್ಯಕ್ಷರು ಹಾಗೂ ಮುಖ್ಯ ಶಿಕ್ಷಕರಿಗೆ  ಹಸ್ತಾಂತರಿಸಿದರು.

ಸಮಾರಂಭದ ಅಧ್ಯಕ್ಷರು, ಸಂಚಾಲಕರು, ಹಿರಿಯ ವಿದ್ಯಾರ್ಥಿ ಸಂಘದ  ಅಧ್ಯಕ್ಷರು ಹಾಗೂ ಪ್ರಕೃತ ಶಾಲೆಯ ಮುಖ್ಯ ಶಿಕ್ಷಕರಾಗಿರುವ ಶ್ರೀಪತಿ ಭಟ್, ಸಹ ಶಿಕ್ಷಕರಾದ  ನಿರ್ಮಲಾ ಕೆ, ವಿನುತಾ, ಶಾರದಾ, ಕವಿತಾ, ರಕ್ಷಿತಾ, ಶಿಕ್ಷಕೇತರ ಸಿಬ್ಬಂದಿ ಎ .ಎನ್. ಕೊಳಂಬೆ ಹಾಗೂ ಎಲ್ಲಾ ಹಿರಿಯ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಪದ್ಮಿನಿ ಹೆಬ್ಬಾರ್ ಮತ್ತು ನಳಿನಿ ರವಿ ಶಂಕರ್ ಪ್ರಾರ್ಥಿಸಿ, ಶಿವ ಶರ್ಮ ಕೆ ಸ್ವಾಗತಿಸಿದರು. ನೆನಪಿನಂಗಳ ಕಾರ್ಯಕ್ರಮದ ರೂವಾರಿ ನಿವೃತ್ತ ಯೋಧ ಬಾಳೆಮೂಲೆ ನರಸಿಂಹ ಭಟ್ ವಂದಿಸಿದರು. ಪ್ರಭಾಕರ ಶೆಟ್ಟಿ ಹಾಗೂ ವಿನೋಭಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಯವರು ಸಹಕರಿಸಿದರು.

LEAVE A REPLY

Please enter your comment!
Please enter your name here