ಪ್ರತಿ ಮಗೂವೂ ಕಟ್ಟ ಕಡೆಯ ಸ್ವಾಭಿಮಾನ, ಸ್ವಾವಲಂಬಿಯಾಗಿ ದೇಶದ ಪ್ರಜೆಯಾಗಬೇಕು ಅಶೋಕ್ ಕುಮಾರ್ ರೈ
ಕೆಯ್ಯೂರು: ಸರಕಾರವು ವಿದ್ಯಾ ಕ್ಷೇತ್ರಕ್ಕೆ ಸಾಕಷ್ಟು ಪ್ರಾಮುಖ್ಯತೆ ಮತ್ತು ಹಣವನ್ನು ನೀಡುತ್ತದೆ ಈ ನಿಟ್ಟಿನಲ್ಲಿ ವ್ಯಕ್ತಿ ಯಾವಾಗ ಸಮಾಜಮುಖಿಯಾಗಿ ತನ್ನ ಬಗ್ಗೆ ಯೋಚನೆ ಮಾಡುದಕ್ಕಿಂತ ಸಮಾಜದ ಕುರಿತಾಗಿ ಯೋಚಿಸುತ್ತಾರೆಯೋ ಅವರೇ ಶ್ರೇಷ್ಠರು. ಒಂದೇ ಸೂರಿನಡಿಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ದೊರೆಯಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಎರಡು ಕೋಟಿ ರೂಪಾಯಿ ಅನುದಾನದಲ್ಲಿ ನಿರ್ಮಾಣಗೊಂಡಿರುವ ನೂತನ ಶಾಲಾ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವು ಜೂ 12 ರಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ರಿಬ್ಬನ್ ತುಂಡರಿಸುವ ಮೂಲಕ ಉದ್ಘಾಟನೆ ಮಾಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕೆಯ್ಯೂರು ಗ್ರಾಮ ಪಂ.ಅಧ್ಯಕ್ಷೆ ಜಯಂತಿ ಎಸ್ ಭಂಡಾರಿ ಮಾತನಾಡಿ ಸರಕಾರಿ ಶಾಲೆಯಲ್ಲಿ ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣ ದೊರೆಯಲಿ, ಎಂದು ಶುಭ ಹಾರೈಸಿದರು.
.ಈ ವರ್ಷದ ಎಸ್ ಎಸ್ ಎಲ್ ಸಿ ಯಲ್ಲಿ ಕೆಪಿಎಸ್ ಕೆಯ್ಯೂರು 90% ಫಲಿತಾಂಶ ದಾಖಲಿಸಿದ ವಿಶಿಷ್ಟ ಶ್ರೇಣಿ ಪಡೆದ15 ವಿದ್ಯಾರ್ಥಿಗಳನ್ನು ಮತ್ತು ಕಾಲೇಜು ವಿಭಾಗದಲ್ಲಿ 95% ಫಲಿತಾಂಶ ದಾಖಾಲಿಸಿದ ವಿಶಿಷ್ಟ ಶ್ರೇಣಿ ಪಡೆದ 15 ವಿದ್ಯಾರ್ಥಿಗಳಿಗೆ ಶಾಸಕ ಅಶೋಕ್ ಕುಮಾರ್ ರೈ ಹೂ,ಶಾಲು, ಸ್ಮರಣಿಕೆ ನೀಡಿ ಗೌರವಿಸಿದರು.
2ಕೋಟಿ ರೂ ವೆಚ್ಚದ ನೂತನ ಶಾಲಾ ಕಟ್ಟಡ ನಿರ್ಮಾಣ ಮಾಡಿದ ಗುತ್ತಿಗೆದಾರ ಸೂರಜ್ ನಾಯರ್ ಮತ್ತು ಪುತ್ತೂರು ಪಿ ಡ ಬ್ಯು ಲ್ ಇಂಜಿನಿಯರ್ ಲಿಂಡ್ಸೆ ಕಾಲಿನ್ ಸಿಕ್ವೇರಾ ವರರಿಗೆ ಸ್ಮರಣಿಕೆ, ಶಾಲು ನೀಡಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪುತ್ತೂರು ಲೋಕೇಶ್ ಸಿ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕ ಸುಂದರ ಗೌಡ , ಕೆಪಿಎಸ್ ಕೆಯ್ಯೂರು ಉಪ ಪ್ರಾಂಶುಪಾಲ ವಿನೋದ್ ಕುಮಾರ್ ಕೆ.ಎಸ್, ಕೆಪಿಎಸ್ ಕೆಯ್ಯೂರು ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಚರಣ್ ಕುಮಾರ್ ಸಣಂಗಲ, ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ನಾಡಗೀತೆಯೊಂದಿಗೆ, ಕೆಪಿಎಸ್ ಕೆಯ್ಯೂರು ಪ್ರಾಂಶುಪಾಲ ಇಸ್ಮಾಯಿಲ್ ಪ್ರಾಸ್ತಾವಿಕವಾಗಿ ಸ್ವಾಗತಿಸಿ, ಕೆಪಿಎಸ್ ಕೆಯ್ಯೂರು ಪ್ರಾಥಮಿಕ ವಿಭಾಗ ಮುಖ್ಯ ಗುರು ಬಾಬು ಎಂ ವಂದಿಸಿ, ಕೆಪಿಎಸ್ ಕೆಯ್ಯೂರು ಉಪನ್ಯಾಸಕಿ ಉಮಾಶಂಕರಿ ಎಸ್.ಕೆ ಕಾರ್ಯಕ್ರಮ ನಿರೂಪಿಸಿದರು.
ಎಸ್.ಡಿ.ಎಂ.ಸಿ. ಉಪಾದ್ಯಕ್ಷರು ಮತ್ತು ಸರ್ವಸದಸ್ಯರು, ಕೆಪಿಎಸ್ ಕೆಯ್ಯೂರು ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು, ಶಿಕ್ಷಕವೃಂದ, ಶಿಕ್ಷಕೇತರ ಸಿಬ್ಬಂದಿಗಳು, ವಿಧ್ಯಾರ್ಥಿವೃಂದ, ಮಕ್ಕಳ ಪೋಷಕರು, ಕೆಯ್ಯೂರು ಗ್ರಾಮ ಪಂಚಾಯತ್ ಸದಸ್ಯರು, ಸಂಘ ಸಂಸ್ಥೆಗಳ ಪಧಾದಿಕಾರಿಗಳು ಉಪಸ್ಥಿತರಿದ್ದರು.