ಕಾಣಿಯೂರು: ನಾಣಿಲ ಸ.ಹಿ.ಪ್ರಾ.ಶಾಲಾ ಮಂತ್ರಿಮಂಡಲವನ್ನು ರಚಿಸಲಾಯಿತು. ಶಾಲಾ ನಾಯಕನಾಗಿ 7ನೇ ತರಗತಿಯ ಗಗನ್, ಉಪನಾಯಕಿಯಾಗಿ 6ನೇ ತರಗತಿಯ ಅಸ್ಮಿತಾರವನ್ನು ಆಯ್ಕೆ ಮಾಡಲಾಯಿತು. ಸಾಂಸ್ಕೃತಿಕ ಮಂತ್ರಿಯಾಗಿ ಶ್ರೇಯಾ, ಆರೋಗ್ಯ ಮಂತ್ರಿಯಾಗಿ ವಂಶಿಕಾ, ವಾರ್ತಾಮಂತ್ರಿಯಾಗಿ ಪೂರ್ವಿ, ಗೃಹ ಮಂತ್ರಿಯಾಗಿ ಶಿಶಿರ್, ಕ್ರೀಡಾ ಮಂತ್ರಿಯಾಗಿ ಸುಜಿತ್, ಅಕ್ಷರದಾಸೋಹ ಮಂತ್ರಿಯಾಗಿ ಮಾನ್ವಿ, ನೀರಾವರಿ ಮಂತ್ರಿಯಾಗಿ ಅಕ್ಷಯ್, ಸ್ವಚ್ಚತ್ತಾ ಮಂತ್ರಿಯಾಗಿ ಲಿಖಿತ, ವಿರೋಧ ಪಕ್ಷದ ನಾಯಕಿಯಾಗಿ ಸೌಮ್ಯ, ಸದಸ್ಯರಾಗಿ ನವ್ಯ, ಜಯಲಕ್ಷ್ಮೀ, ಸಾನ್ವಿ, ಅನನ್ಯ, ಬೃಂದಾ, ಅಕ್ಷಯ್ ಆಯ್ಕೆಯಾದರು. ಮತದಾನ ಅಧಿಕಾರಿಗಳಾಗಿ ಸಹ ಶಿಕ್ಷಕಿ ಲೀನಾ ಲಸ್ರಾದೋ, ಅತಿಥಿ ಶಿಕ್ಷಕಿಯರಾದ ಚೇತನಾ, ಸವಿತಾ, ಗೌರವ ಶಿಕ್ಷಕಿ ಶ್ವೇತಾ ಕರ್ತವ್ಯ ನಿರ್ವಹಿಸಿದರು. ಶಾಲಾ ಮುಖ್ಯಗುರು ಪದ್ಮಯ್ಯ ಗೌಡ ಮಂತ್ರಿ ಮಂಡಲದ ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು.