ಜಾಗತಿಕ ರಕ್ತದಾನಿಗಳ ದಿನ-ಬ್ಲಡ್ ಹೆಲ್ಪ್‌ಲೈನ್‌ನಿಂದ ರಕ್ತದಾನ ಶಿಬಿರ

0

ಪುತ್ತೂರು: ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ ಇದರ ವತಿಯಿಂದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಹಾಗೂ ರೋಟರಿ ಕ್ಯಾಂಪ್ಕೋ ರಕ್ತನಿಧಿ ಪುತ್ತೂರು ಇದರ ಸಹಯೋಗದಲ್ಲಿ ಜಾಗತಿಕ ರಕ್ತದಾನಿಗಳ ದಿನದ ಅಂಗವಾಗಿ ಸಾರ್ವಜನಿಕ ರಕ್ತದಾನ ಶಿಬಿರವು ಜೂ.14ರಂದು ರೋಟರಿ ಕ್ಯಾಂಪ್ಕೋ ರಕ್ತನಿಧಿಯಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಕಕ್ಕಿಂಜೆ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ ಅಬೂಬಕ್ಕರ್ ಸಿದ್ದಿಕ್ ಅಹ್ಮದ್ ಅಲ್ ಜಲಾಲಿ ಹಾಗೂ ಮಾಯಿದೆ ದೇವುಸ್ ಚರ್ಚ್‌ನ ಧರ್ಮಗುರು ಲಾರೆನ್ಸ್ ಮಸ್ಕರೇನಸ್ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು.


ಬಳಿಕ ಮಾತನಾಡಿದ ಕಕ್ಕಿಂಜೆ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ ಅಬೂಬಕ್ಕರ್ ಸಿದ್ದಿಕ್ ಅಹ್ಮದ್ ಅಲ್ ಜಲಾಲಿಯರು, ರಕ್ತದಾನದಿಂದ ಇನ್ನೊಬ್ಬರ ಜೀವ ಉಳಿಸುವ ಮೂಲಕ ಅವರ ಕಣ್ಣೀರು ಒರೆಸಲು ಕಾರಣವಾಗುವಂತಹ ಪುಣ್ಯದ ಕಾರ್ಯವಾಗಿದೆ. ನಮ್ಮಿಂದ ಇನ್ನೊಬ್ಬರಿಗೆ ಅನ್ಯಾಯವಾಗಬಾರದು, ಇನ್ನೊಬ್ಬರ ರಕ್ತ ಚೆಲ್ಲಬಾರದು, ಇನ್ನೊಬ್ಬರಿಗೆ ಜೀವ ಕೊಡುವ ಕೆಲಸವಾಗಬೇಕು. ರಕ್ತದಾನದಲ್ಲಿ ರಾಜಕೀಯ, ಪಕ್ಷ, ಪಂಗಡ ಮರೆತು ರಕ್ತ ಯಾರಿಗೂ ಏನನ್ನೂ ತಿಳಿದಂತೆ ಮಾಡುವ ದಾನವಾಗಿದೆ ಎಂದರು.


ಮಾಯಿದೆ ದೇವುಸ್ ಚರ್ಚ್‌ನ ಧರ್ಮಗುರು ಲಾರೆನ್ಸ್ ಮಸ್ಕರೇನಸ್, ರಕ್ತವು ತುರ್ತು ಸಮಯದಲ್ಲಿ ಇನ್ನೊಬ್ಬರ ಜೀವ ಉಳಿಸಲು ಆವಶ್ಯಕವಾದುದು. ರಕ್ತದಾನದ ಮೂಲಕ ಯುವಕರು ದೇವರು ಮೆಚ್ಚುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಇಂತಹ ಶಿಬಿರದ ಮೂಲಕ ಇನ್ನಷ್ಟು ಜಾಗೃತಿ ಮೂಡಲಿ ಎಂದರು.


ಅಧ್ಯಕ್ಷತೆ ವಹಿಸಿದ್ದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಸಂತೋಷ್ ಶೆಟ್ಟಿ ಮಾತನಾಡಿ, ರಕ್ತಕ್ಕೆ ಪರ್ಯಾಯ ವಸ್ತು ಬೇರೊಂದಿಲ್ಲ. ಇದು ಜಾತಿ, ಪಂಗಡ, ಧರ್ಮ ಇತಿಮಿತಿ ಇಲ್ಲದೆ ಜೀವ ಉಳಿಸುವ ವಸ್ತುವಾಗಿದೆ. ರಕ್ತದಾನದ ಮೂಲಕ ಬ್ಲಡ್ ಹೆಲ್ಪ್‌ಲೈನ್ ಕಳೆದ ಬಾರಿಯೂ ರೆಡ್‌ಕ್ರಾಸ್ ಸಂಸ್ಥೆಯ ಜೊತೆ ಕೈಜೋಡಿಸಿದೆ. ಎಲ್ಲರ ಸಹಕಾರದಿಂದ ರಕ್ತ ಕೊರತೆ ನೀಗಿಸುವಲ್ಲಿ ಸಹಕಾರಿಯಾಗಿದೆ ಎಂದರು.


ಕೆಪಿಸಿಸಿ ಕಾವು ಹೇಮನಾಥ ಶೆಟ್ಟಿ, ಎಸ್.ಡಿ.ಪಿ.ಐ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್ ಮತ್ತು ಮುಸ್ಲಿಂ ಯುವಜನ ಪರಿಷತ್ ಅದ್ಯಕ್ಷ ಅಶ್ರಫ್ ಕಲ್ಲೇಗ ಮಾತನಾಡಿ, ಬ್ಲಡ್ ಹೆಲ್ಪ್‌ಲೈನ್‌ನ ಸಾಧನೆಯನ್ನು ಶ್ಲಾಘಿಸಿದರು.


ದ.ಕ ಜಿಲ್ಲಾ ಇಂಟಕ್ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಎನ್‌ಎಸ್‌ಯುಐನ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಾಯಬೆ, ಸಿ.ಎಚ್ ಕನ್‌ಸ್ಟ್ರಕ್ಷನ್ ಶರೀಫ್ ಸವಣೂರು ಹಾಗೂ ಇಜಾಝ್ ಪರ್ಲಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಗೌರವಾರ್ಪಣೆ:
ಸಂಸ್ಥೆಯ ತುರ್ತು ರಕ್ತದ ಬೇಡಿಕೆಯ ಮನವಿಗೆ ಸ್ಪಂದಿಸಿ ಹಲವಾರು ಬಾರಿ ಸ್ವಯಂ ರಕ್ತದಾನಿಯಾಗಿ ಸಹಕರಿಸಿದ ಅಝೀಝ್ ಕೆಮ್ಮಾಯಿ, ಬಶೀರ್ ಪರ್ಲಡ್ಕ, ಸಮೀರ್ ಕುರಿಯ, ನಝೀರ್ ಸವಣೂರು, ಸಫ್ವಾನ್ ಸಾಬಿತ್, ಅಲೀಫ್ ಟ್ರಾವೆಲ್ಸ್, ಶಾಕಿರ್ ಕ್ಯಾಂಪಸ್, ರಿಯಾಝ್ ಸಾಲ್ಮರ, ಮಹೇಶ್ ಶೆಟ್ಟಿ, ನಿಝಾಂ ಪರ್ಲಡ್ಕ, ಹಸೈನಾರ್, ಶಾಫಿ ಸಂಟ್ಯಾರ್, ಅಮೀನ್ ಪರ್ಲಡ್ಕ, ಶರೀಫ್ ಬಲ್ನಾಡ್, ಒಳಿತು ಮಾಡು ಮನುಷ ಹಾಗೂ ಹಿಂದೂಸ್ಥಾನ್ ಫ್ರೆಂಡ್ಸ್ ಸಂಘಟನೆಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಭಾರತೀಯ ರೆಡ್ ಕ್ರಾಸ್‌ನ ಕಾರ್ಯಕ್ರಮ ಸಂಯೋಜನಾ ಸಮಿತಿ ಮುಖ್ಯಸ್ಥ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಝೀಝ್ ಕೆಮ್ಮಾಯಿ ಸ್ವಾಗತಿಸಿ, ವಂದಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here