ಕರ್ನಾಟಕ ರಾಜ್ಯ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘ ಅಸ್ತಿತ್ವಕ್ಕೆ-ಅರುಣ್ ಕುಮಾರ್ ಪುತ್ತಿಲರಿಂದ ನೊಂದಣಿ ಪ್ರಮಾಣ ಪತ್ರ ಬಿಡುಗಡೆ

0

ಪುತ್ತೂರು: ಜಾತ್ರೆಗಳಲ್ಲಿ ಭಾರಿ ಮೊತ್ತಕ್ಕೆ ಅಂಗಡಿಗಳನ್ನು ಏಲಂ ಮಾಡಿ ಬಡ ವ್ಯಾಪಾರಸ್ಥರಿಗೆ ಹಾಗೂ ಜಾತ್ರೆಗಳಿಗೆ ಆಗಮಿಸುವ ಭಕ್ತಾದಿಗಳಿಗೆ ಆರ್ಥಿಕ ನಷ್ಟ ತಪ್ಪಿಸಲು, ಏಲಂ ಮೊತ್ತವನ್ನು ಕಡಿಮೆ ಮಾಡಿಸಲು ವ್ಯಾಪಾರಿಗಳನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ಹಿಂದು ವ್ಯಾಪಾರಸ್ಥರ ಸಂಘದಿಂದ ಕರ್ನಾಟಕ ರಾಜ್ಯ ಹಿಂದು ಜಾತ್ರಾ ವ್ಯಾಪಾರಸ್ಥರ ಸಂಘ ಬಂಟ್ವಾಳದಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಇದರ ನೊಂದಣಿ ಪತ್ರ ಅರುಣ್ ಕುಮಾರ್ ಪುತ್ತಿಲರ ಕಚೇರಿಯಲ್ಲಿ ಬಿಡುಗಡೆ ಮಾಡಲಾಯಿತು.


ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ‘ಕರ್ನಾಟಕ ರಾಜ್ಯ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘ(ರಿ.) ನೊಂದಾಯಿತವಾಗಿದ್ದು, ನೊಂದಣಿ ಪತ್ರವನ್ನು ಅರುಣ್ ಕುಮಾರ್ ಪುತ್ತಿಲ ಅವರು ಬಿಡುಗಡೆಗೊಳಿಸಿದರು. ಕರ್ನಾಟಕ ರಾಜ್ಯ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಗಣೇಶ್ , ಖಜಾಂಜಿ ಗೋವಿಂದದಾಸ್, ಪ್ರಥ್ವಿರಾಜ್, ಮಹೇಶ್ ಉಪಸ್ಥಿತರಿದ್ದರು.

ವ್ಯಾಪಾರಸ್ಥರ ಸಮಾವೇಶ
ಜಾತ್ರಾ ಸಂದರ್ಭದಲ್ಲಿ ಬಡ ವ್ಯಾಪಾರಸ್ಥರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಂಘಟನೆ ಪ್ರಾರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ವ್ಯಾಪಾರಸ್ಥರ ಬೃಹತ್ ಸಮಾವೇಶ ಏರ್ಪಡಿಸಿ ಸರಕಾರಕ್ಕೆ ಹಕ್ಕೋತ್ತಾಯ ನೀಡಲು ನಿರ್ಣಯಿಸುತ್ತೇವೆ ಎಂದು ಸಂಘದ ಅಧ್ಯಕ್ಷ ಗಣೇಶ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here