ಪುತ್ತೂರು:ದ.ಕ.ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯ 2023-24 ಸಾಲಿನ ನೂತನ ಅಧ್ಯಕ್ಷರಾಗಿ ಅಶೋಕ್ ನಾಯ್ಕ ಕೆದಿಲ, ಸಂಚಾಲಕರಾಗಿ ಶ್ರೀಧರ ನಾಯ್ಕ ಮುಂಡೋವುಮೂಲೆ ಪುನರಾಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ವಿಮಲಾ ನಾಯ್ಕ ದೈತೋಟ ಹಾಗೂ ಕೋಶಾಽಕಾರಿಯಾಗಿ ಗಂಗಾಧರ ನಾಯ್ಕ ಬಂಟ್ವಾಳ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಸಂಘದ ಕಚೇರಿಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಬಾಲಕೃಷ್ಣ ನಾಯ್ಕ ಮಂಗಳೂರು, ಜೊತೆ ಕಾರ್ಯದರ್ಶಿಯಾಗಿ ಶೇಷಪ್ಪ ನಾಯ್ಕ ಅಡ್ಯನಡ್ಕ, ಕುಶಾಲಪ್ಪ ನಾಯ್ಕ ಮಂಗಳೂರು, ಕ್ರಿಡಾ ಸಂಚಾಲಕರಾಗಿ ಯಶವಂತ ಮಂಡೆಕೋಲು, ಜೊತೆ ಕ್ರೀಡಾ ಸಂಚಾಲಕರಾಗಿ ಪ್ರಸನ್ನ ನಾಯ್ಕ ಕೊಕ್ಕಡ, ಸಾಂಸ್ಕೃತಿಕ ಸಂಚಾಲಕರಾಗಿ ಜ್ಯೋತಿ ನಾಯ್ಕ ಕೆದಿಲ ಮರಾಟಿ ಸಂವಾದ ಸಂಚಾಲಕರಾಗಿ ಪುರಂದರ ನಾಯ್ಕ ಪುತ್ತೂರು, ಜೊತೆ ಸಂಚಾಲಕರಾಗಿ ಸುನೀತಾ ಸೂರಂಬೈಲು, ಮರಾಟಿ ನೆರವು ಸಂಚಾಲಕರಾಗಿ ಆನಂದ ನಾಯ್ಕ ಪಣಂಬೂರು, ಜೊತೆ ಸಂಚಾಲಕರಾಗಿ ಸದಾಶಿವ ನಾಯ್ಕ ಪುತ್ತೂರು, ಮರಾಟಿ ರಕ್ತ ನಿಧಿ ಸಂಚಾಲಕರಾಗಿ ದಯಾಕರ ನಾಯ್ಕ ಪುತ್ತೂರು, ಮರಾಟಿ ಉದ್ಯೋಗ ಸಂಚಾಲಕರಾಗಿ ಅಮಿತಾ ಕಡಬ, ಮರಾಟಿ ವಧು ವರರ ಸಂಚಾಲಕರಾಗಿ ಭವಾನಿ ನಾಯ್ಕ ಪಡಿಬಾಗಿಲು, ಪ್ರವಾಸ ಸಂಚಾಲಕರಾಗಿ ಆನಂದ ನಾಯ್ಕ ಪೆರುವಾಯಿ, ಸ್ವಚ್ಛತೆ ಮತ್ತು ಶ್ರಮದಾನ ಸಂಚಾಲಕರಾಗಿ ತಿರುಮಲೇಶ್ ಪೆರುವಾಯಿ, ಜೊತೆ ಸಂಚಾಲಕರಾಗಿ ರೇವತಿ ತಿರುಮಲೇಶ್ ಪೆರುವಾಯಿ, ಆರೋಗ್ಯ ಮತ್ತು ಸಂಚಾಲಕರಾಗಿ ಬಾಲಕೃಷ್ಣ ನಿಡ್ಪಳ್ಳಿ, ಜೊತೆ ಸಂಚಾಲಕರಾಗಿ ವಿನಯ ನಾಯ್ಕ ಆರ್ಯಾಪು, ಶಿಕ್ಷಣ ಸಂಚಾಲಕರಾಗಿ ವೀಣಾಲತ ಮಂಗಳೂರು, ಪ್ರಚಾರ ಮಾಧ್ಯಮ ಸಂಚಾಲಕರಾಗಿ ರತ್ನಾವತಿ ನಾಯ್ಕ ದಾರಂದಕುಕ್ಕು, ಜೊತೆ ಸಂಚಾಲಕರಾಗಿ ನೀಲಮ್ಮ ಪಡೀಲು, ಸಂಘಟನಾ ಕಾರ್ಯದರ್ಶಿಗಳಾಗಿ ಶಿವಪ್ಪ ನಾಯ್ಕ ದೇವಸ್ಯ, ಮಂಜುನಾಥ ನಾಯ್ಕ ಮಂಗಳೂರು, ಬಾಲಕೃಷ್ಣ ಸಾಜ ಮುರುಂಗಿ, ನಾರಾಯಣ ನಾಯ್ಕ ಪೋಳ್ಯ, ಅನೀಲ್ ಅಳಕೆ ಬೆಳ್ತಂಗಡಿ, ಐತ್ತಪ್ಪ ನಾಯ್ಕ ಕೃಷ್ಣನಗರ, ಗೀತಾ ದೇವಸ್ಯ ಪಾಣಾಜೆ, ರತ್ನಾವತಿ ಮುಂಡಾಜೆ ಆಯ್ಕೆಯಾಗಿದ್ದಾರೆ. ಸಮಿತಿ ಸಂಚಾಲಕ ಶ್ರೀಧರ್ ನಾಯ್ಕ ಅಯ್ಕೆ ಪ್ರಕ್ರಿಯೆ ನಡೆಸಿದರು. ಕಾರ್ಯದರ್ಶಿ ಸ್ವಾಗತಿಸಿದರು ಶೇಷಪ್ಪ ನಾಯ್ಕ ವಂದಿಸಿದರು.