ಪುತ್ತೂರು: ಧಾರ್ಮಿಕ ದತ್ತಿ ಸಹಾಯಕ ಆಯುಕ್ತರು/ ಧಾರ್ಮಿಕ ದತ್ತಿ ತಹಶೀಲ್ದಾರ್/ಕಾರ್ಯನಿರ್ವಾಹಕ ಅಧಿಕಾರಿಯವರ ಆಡಳಿತ ವ್ಯಾಪ್ತಿಯಲ್ಲಿ ಬರುವ ಅಧಿಸೂಚಿತ ದೇವಾಲಯಗಳ ಪೈಕಿ ಐತಿಹಾಸಿಕ ಹಿನ್ನೆಲೆಯುಳ್ಳ ಹಾಗೂ ಪುರಾತನ ವಾಸ್ತು ಶಿಲ್ಪ ವೈಭವವನ್ನು ಒಳಗೊಂಡ ದೇವಾಲಯ /ಸ್ಮಾರಕಗಳು ಇದ್ದಲ್ಲಿ ಅವುಗಳ ಛಾಯಾಚಿತ್ರವನ್ನು ದೇವಾಲಯದ ಐತಿಹ್ಯದ ಸಂಕ್ಷಿಪ್ತ ವಿವರವನ್ನು ಮೂರು ದಿನಗಳೊಳಗಾಗಿ ಧಾರ್ಮಿಕ ದತ್ತಿ ಇಲಾಖೆ ಕಛೇರಿಗೆ ಸಲ್ಲಿಸುವಂತೆ ಧಾರ್ಮಿಕ ದತ್ತಿ ಇಲಾಖಾ ಆಯುಕ್ತರು ಸೂಚನೆ ನೀಡಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ವಿಭಾಗವಾರು ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಧಾರ್ಮಿಕ ದತ್ತಿ ಸಹಾಯಕ ಆಯುಕ್ತರು/ ಧಾರ್ಮಿಕ ದತ್ತಿ ತಹಶೀಲ್ದಾರ್/ ಕಾರ್ಯನಿರ್ವಾಹಕ ಅಧಿಕಾರಿಗೆ ತಮ್ಮ ಆಡಳಿತ ವ್ಯಾಪ್ತಿಯಲ್ಲಿ ಬರುವ ಅಧಿಸೂಚಿತ ದೇವಾಲಯಗಳ ಪೈಕಿ ಐತಿಹಾಸಿಕ ಹಿನ್ನಲೆಯುಳ್ಳ ಪುರಾತನ ವಾಸ್ತು ಶಿಲ್ಪ ವೈಭವವನ್ನೊಳಗೊಂಡ ದೇವಾಲಯ /ಸ್ಮಾರಕಗಳಿದ್ದಲ್ಲಿ ಅವುಗಳ ಛಾಯಾಚಿತ್ರವನ್ನು ಒಂದು ವಾರದೊಳಗಾಗಿ ಈ ಕಛೇರಿಗೆ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.