ಬಡಗನ್ನೂರುಃ ಬಡಗನ್ನೂರು ಹಾಲು ಉತ್ಪಾದಕರ ಸೇವಾ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಚುನಾವಣೆಯು ಜೂ 30 ರಂದು ಸಂಘದ ಕಛೇರಿಯಲ್ಲಿ ನಡೆಯಲಿದ್ದು ಆಕಾಂಕ್ಷೆಯುಳ್ಳ ಅಭ್ಯರ್ಥಿಗಳು ಜೂ 18 ರಿಂದ ನಾಮಪತ್ರ ಸಲ್ಲಿಸಬಹುದಾಗಿದೆ.
ಬೆಳಗ್ಗೆ ಗಂ 9 ರಿಂದ 12.30 ರವರೆಗೆ ನಾಮಪತ್ರವನ್ನು ರಿಟರ್ನಿಂಗ್ ಆಫೀಸರ್ ಸಲ್ಲಿಸಬಹುದಾಗಿದೆ.ಜೂ 22 ರಂದು ನಾಮಪತ್ರ ಸಲ್ಲಿಕೆ ಕೊನೆಯ ದಿನವಾಗಿದ್ದು ಜೂ.23 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಅದೇ ದಿನ ಅಭ್ಯರ್ಥಿಗಳ ಪಟ್ಟಿ ಅಂತಿಮ ಪ್ರಕಟಿಸಲಾಗುವುದು. ಜೂ 24 ರಂದು ನಾಮಪತ್ರ ಹಿಂತೆಗೆತಕ್ಕೆ ಅವಕಾಶವಿದ್ದು, ಅದೇ ದಿನ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ ನಡೆಯಲಿದೆ.
ಜೂ 24 ರಂದು ಸಿಂದುತ್ವ ಹೊಂದಿರುವ ಉಮೇದುದಾರರ ಪಟ್ಟಿ ಪ್ರಕಟಿಸಲಾಗುತ್ತದೆ. ಜೂ 30 ರಂದು ಮತದಾನ ನಡೆಯಲಿದ್ದು ಅದೇ ದಿನ ಮತ ಎಣಿಕೆ ನಡೆಯಲಿದೆ ಒಟ್ಟು 13 ಸ್ಥಾನಗಳಿಗೆ ಮತದಾನ ನಡೆಯಲಿದೆ. ಇದರಲ್ಲಿ ಸಾಮಾನ್ಯ, 7, ಪ.ಜಾತಿ ಮೀಸಲು 1, ಪ.ಪಂಗಡ ಮೀಸಲು 1, ಹಿಂ ವರ್ಗ ಎ ಮೀಸಲು 1, ಹಿಂ ವರ್ಗ ಬಿ ಮೀಸಲು 1, ಮಹಿಳಾ ಮೀಸಲು ಸ್ಥಾನ 2 ಇರಲಿದೆ.ಎಂದು ರಿಟರ್ನಿಂಗ್ ಆಫೀಸರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ