ರಾಮಕುಂಜ ಪ.ಪೂ.ಕಾಲೇಜು, ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯಲ್ಲಿ 2022-23ನೇ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳಿಗೆ, ಎನ್‌ಎಂಎಂಎಸ್ ಪರೀಕ್ಷಾ ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ಸಾಧಕ ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಜೂ.15ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.


ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಿ, ಸೌಲಭ್ಯ, ಅನುಕೂಲಗಳು ಇಲ್ಲದ ಸಂದರ್ಭದಲ್ಲೂ ಪರಿಶ್ರಮ ಮಟ್ಟ ಕಲಿತು ಉನ್ನತ ಹುದ್ದೆಯಲ್ಲಿರುವ ಹಿರಿಯ ವಿದ್ಯಾರ್ಥಿಗಳ ಸಾಧನೆ ಈಗಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು. ಕಲಿಯುವ ಛಲ ವಿದ್ಯಾರ್ಥಿಗಳಲ್ಲಿರಬೇಕು. ದುಶ್ಚಟಗಳು ಸನಿಹಕ್ಕೆ ಬರದಂತೆ ಎಚ್ಚರವಹಿಸಬೇಕೆಂದು ನುಡಿದರು. ಅತಿಥಿಯಾಗಿದ್ದ ಪ್ರಗತಿಪರ ಕೃಷಿಕ ಉದಯ ಕಶ್ಯಪ್ ಪೂರಿಂಗ, ಹಿರಿಯ ವಿದ್ಯಾರ್ಥಿ ಮಾಲ್ಡಿವ್ ವೆಲ್‌ನೆಸ್ ಕನ್‌ಸಲ್ಟೆನ್‌ನ ಆಯುರ್ವೇದ ವೈದ್ಯ ಡಾ.ಶೈಲೇಶ್ ಸುಬ್ರಹ್ಮಣ್ಯ, ಸನ್ಮಾನಿತ ಡಾ.ಸುಬ್ರಹ್ಮಣ್ಯ ರಾವ್ ಅವರು ಸಂದರ್ಭೋಚಿತವಾಗಿ ಮಾತನಾಡಿದರು. ಬಂಟವಾಳ ಕಸ್ತೂರಿಬಾಯಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಎಚ್.ವಿ.ರಘು, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸಂಚಾಲಕ ಟಿ.ನಾರಾಯಣ ಭಟ್, ಕೋಶಾಧಿಕಾರಿ ಸೇಸಪ್ಪ ರೈ, ಸದಸ್ಯ ಲಕ್ಷ್ಮೀನಾರಾಯಣ ರಾವ್ ಆತೂರು, ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲ ಗಣರಾಜ್ ಕುಂಬ್ಳೆ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಮಾಧವ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿ ವೇತನ/ಪುಸ್ತಕ ವಿತರಣೆ:
ಬಂಟವಾಳ ಕಸ್ತೂರಿಬಾಯಿ ಚಾರಿಟೇಬಲ್ ಟ್ರಸ್ಟ್‌ನ ವಿದ್ಯಾರ್ಥಿ ವೇತನಕ್ಕೆ ಆಯ್ಕೆಗೊಂಡ ಪ್ರೌಢಶಾಲಾ ವಿಭಾಗದ 10 ಹಾಗೂ ಕಾಲೇಜು ವಿಭಾಗದ 6 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಹಿರಿಯ ವಿದ್ಯಾರ್ಥಿ ಉದಯ ಕಶ್ಯಪ್ ಪೂರಿಂಗ ಅವರು ಸುಮಾರು 30 ಸಾವಿರ ರೂ.ವೆಚ್ಚದಲ್ಲಿ 25 ವಿದ್ಯಾರ್ಥಿಗಳಿಗೆ ನೀಡಿದ ಬರೆಯುವ ಪುಸ್ತಕವನ್ನು ಈ ಸಂದರ್ಭದಲ್ಲಿ ವಿತರಣೆ ಮಾಡಲಾಯಿತು. ಹಿರಿಯ ವಿದ್ಯಾರ್ಥಿ ಗಂಗಾಧರ ಗೌಡ ಎತ್ತಡಪಡ್ಪು ಅವರು ನೀಡಿದ ಸುಮಾರು 7 ಸಾವಿರ ರೂ.ಮೌಲ್ಯದ ಪರಿಕರಗಳನ್ನು ನೀಡಿ ಸಹಕರಿಸಿದ್ದರು. ಶಿಕ್ಷಕ ದಿನೇಶ್‌ಕುಮಾರ್ ವಿದ್ಯಾರ್ಥಿಗಳ ಹೆಸರು ವಾಚಿಸಿದರು.

ಸನ್ಮಾನ:
ಬೆಳಗಾವಿ ವಿಟಿಯುನಿಂದ ಪಿಹೆಚ್‌ಡಿ ಪುರಸ್ಕೃತರಾದ ಡಾ.ಸುಬ್ರಹ್ಮಣ್ಯ ರಾವ್, ಮಂಗಳೂರು ವಿಶ್ವವಿದ್ಯಾಲಯದ ಬಿ.ಕಾಂ. ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ ಪಡೆದ ಆಕಾಂಕ್ಷ ಹೆಚ್., ಮಂಗಳೂರು ವಿಶ್ವವಿದ್ಯಾಲಯದ ಎಂ.ಕಾಂ. ಪರೀಕ್ಷೆಯಲ್ಲಿ 4ನೇ ರ‍್ಯಾಂಕ್ ಪಡೆದ ಶ್ಲಾಘ್ಯ ಆಳ್ವ ಕೆ., 5ನೇ ರ‍್ಯಾಂಕ್ ಪಡೆದ ಚೈತ್ರಾ ಬಿ.,ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.



ಗೌರವಾರ್ಪಣೆ:
ಎನ್‌ಎಂಎಂಎಸ್, 2022-23ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದುಕೊಂಡ ವಿದ್ಯಾರ್ಥಿಗಳನ್ನು ಸ್ವಾಮೀಜಿಯವರು ಗೌರವಿಸಿದರು. ಶಿಕ್ಷಕರಾದ ವೆಂಕಟೇಶ್ ದಾಮ್ಲೆ, ಪ್ರವೀಣ್‌ಕುಮಾರ್, ಪ್ರಾಂಶುಪಾಲ ಚಂದ್ರಶೇಖರ್‌ರವರು ವಿದ್ಯಾರ್ಥಿಗಳ ಹೆಸರು ವಾಚಿಸಿದರು. ಉತ್ತಮ ಫಲಿತಾಂಶಕ್ಕೆ ಕಾರಣರಾದ ಪ್ರಾಂಶುಪಾಲ ಚಂದ್ರಶೇಖರ ಕೆ., ಪ್ರೌಢಶಾಲಾ ಮುಖ್ಯಶಿಕ್ಷಕ ಸತೀಶ್ ಭಟ್, ವೆಂಕಟೇಶ್ ದಾಮ್ಲೆ ಹಾಗೂ ಶಿಕ್ಷಕರನ್ನು ಗೌರವಿಸಲಾಯಿತು.
ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಶಿಕ್ಷಕ ಸತೀಶ್ ಭಟ್ ಸ್ವಾಗತಿಸಿದರು. ಉಪನ್ಯಾಸಕಿ ತನುಜ ವಂದಿಸಿದರು. ಉಪನ್ಯಾಸಕ ಸುಬ್ರಹ್ಮಣ್ಯ ಕಾರಂತ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here