ಈಶ್ವರಮಂಗಲ- ಶ್ರೀ ಗಜಾನನ ಶಿಕ್ಷಣ ಸಂಸ್ಥೆಯಲ್ಲಿ ಸಾರ್ವತ್ರಿಕ ಮಾದರಿಯಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ

0


ಈಶ್ವರಮಂಗಲ : ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ ಈಶ್ವರಮಂಗಲ ಇಲ್ಲಿ ಈ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಚುನಾವಣೆಯನ್ನು ವಿಬಿನ್ನ ಮಾದರಿಯಲ್ಲಿ ನಡೆಸಲಾಗುವುದು. ಕೇವಲ ನಾಯಕ – ಉಪನಾಯಕನ ಸ್ಥಾನಕ್ಕೆ ಮಾತ್ರ ಚುನಾವಣೆ ನಡೆಸದೆ ಎರಡು ಪ್ರಬಲ ಪಕ್ಷಗಳ ಮೂಲಕ ಚುನಾವಣೆ ನಡೆಸಲಾಗುವುದು. 10ನೇ ತರಗತಿಯ ಎರಡು ವಿಭಾಗಗಳಿಂದ2 ಪ್ರಮುಖ ನಾಯಕರು ತಮ್ಮ ಅಭ್ಯರ್ಥಿಗಳನ್ನು 6ರಿಂದ 10ನೇ ತರಗತಿವರೆಗಿನ ವಿಭಾಗವಾರು ತರಗತಿಗಳಲ್ಲಿ ತಲಾ 12 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿರುವರು. ’ಸ್ಟೂಡೆಂಟ್ ವೆಲ್ ಫೇರ್ ಪಾರ್ಟಿ’ ಮತ್ತು ’ಸ್ಟೂಡೆಂಟ್ ಡೆವೆಲಪ್‌ಮೆಂಟ್ ಪಾರ್ಟಿ’ ಎಂಬುದಾಗಿ ಎರಡು ಪ್ರಬಲ ತಂಡಗಳ ಮದ್ಯೆ ಪೈಪೋಟಿ ನಡೆಯಲಿದೆ. ಪಕ್ಷದ ಚಿಹ್ನೆಗಳಾದ ಪೆನ್ನು ಮತ್ತು ಪುಸ್ತಕದ ಮೂಲಕ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ. ಸ್ಟೂಡೆಂಟ್ ವೆಲ್ ಫೇರ್ ಪಾರ್ಟಿಯಿಂದ ಅನುದೀಪ್, ಸ್ಕಂದ ಡಿ ಎಲ್, ವೀಕ್ಷಾ ಪಿ, ಲಕ್ಷ್ಯ ವಿ ಎಸ್, ಶುತಿಕ, ಶಾಸ್ತ, ನಮಿತ್, ಧನುಷ್ ಸಿ ಜಿ, ಗ್ರೀಷ್ಮಾ, ಶರಜ್, ಜ್ಞಾನೇಶ್, ಮೊಹಮ್ಮದ್ ಶಫೀದ್ ಇವರು 12 ಕ್ಷೇತ್ರಗಳ ಅಭ್ಯರ್ಥಿಗಳಾಗಿದ್ದು, ಸ್ಟೂಡೆಂಟ್ ಡೆವೆಲೆಪ್‌ಮೆಂಟ್ ಪಾರ್ಟಿಯಿಂದ ಎಸ್. ಎನ್ ತೇಜಲ್ ರೈ, ಧನುಷ್ ಆರ್, ಶ್ರಾವ್ಯ, ಪ್ರಣವ ಎಂ,ಬಿ, ಸಾನಿಕ, ತನಿಷ, ಶ್ರೀನಿಧಿ, ಸುಧನ್ವ, ಶೌರ್ಯ, ಮೃನಾಲ್ ಬಿ, ವಿಸ್ಮಯ ಎಸ್. ಪಿ ಮತ್ತು ಅಮೃತ್ ಎ ಎಸ್ ಅವರು ಪಕ್ಷದ ಅಧಿಕೃತ ಅಭ್ಯರ್ಥಿಗಳಾಗಿರುತ್ತಾರೆ. ಪಕ್ಷದಿಂದ ಟಿಕೆಟ್ ವಂಚಿತರಾದ ಇಬ್ಬರು ವಿದ್ಯಾರ್ಥಿಗಳಾದ ದಿಗಂತ್ ಪಿ ಡಿ ಮತ್ತು ಕಾರ್ತಿಕ್‌ರವರು ಬಂಡಾಯ ಸ್ವತಂತ್ರ ಅಭ್ಯರ್ಥಿಗಳಾಗಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು ’ಗ್ಲೋಬ್’ ಮತ್ತು ’ಗೀನ್ ಟ್ರಿ’ ಚಿಹ್ನೆಯ ಅಡಿಯಲ್ಲಿ ಸ್ಪರ್ಧಿಸಲಿದ್ದಾರೆ.

ನಾವು ಪತ್ರಗಳನ್ನು ಸಲ್ಲಿಸಿದ ಎಲ್ಲಾ ಆಭ್ಯರ್ಥಿಗಳ ನಾಮಪತ್ರ ಸಿಂಧುವಾಗಿದ್ದು ಎಲ್ಲರೂ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಸಾರ್ವತ್ರಿಕ ಚುನಾವಣೆಗಿಂತ ಒಂದು ವ್ಯತ್ಯಾಸವೆಂದರೆ ಗೆದ್ದಿರುವ ಎಲ್ಲಾ ಅಭ್ಯರ್ಥಿಗಳು ತಮ್ಮ ನಾಯಕನನ್ನು ಆಯ್ಕೆ ಮಾಡಲಿದ್ದು ಆತನು ಆಡಳಿತ ಪಕ್ಷದ ನಾಯಕನಾಗಿರುತ್ತಾರೆ. ಸೋತ ಎಲ್ಲಾ ಅಭ್ಯರ್ಥಿಗಳು ಸೇರಿ ಪ್ರಬಲ ವಿಪಕ್ಷ ರಚಿಸಲಿದ್ದಾರೆ ಮತ್ತು ಆಡಳಿತ ಪಕ್ಷದ ಎಲ್ಲಾ ಚಟುವಟಿಕೆಗಳನ್ನು ಗಮನಿಸಲಿದ್ದಾರೆ. ವರ್ಷದಲ್ಲಿ ಎರಡು ಸಲ ವಿದ್ಯಾರ್ಥಿ ಸರ್ಕಾರದ ಅಧಿವೇಶನ ನಡೆಯಲಿದ್ದು ಅಲ್ಲಿ ಸರ್ಕಾರದ ವೈಫಲ್ಯಗಳನ್ನು ವಿಪಕ್ಷವು ಎತ್ತಿ ಹಿಡಿಯಲಿದೆ. ಎರಡೂ ಪಕ್ಷಗಳು ತಮ್ಮ ತಮ್ಮ ಚುನಾವಣಾ ಪ್ರನಾಳಿಕೆಯನ್ನು ಪ್ರಕಟಿಸಿದಲ್ಲಿ ಪ್ರಮುಖವಾಗಿ ಶಾಲಾ ಮಕ್ಕಳ ಶಿಸ್ತು ಹಾಗೂ ಸಮಯ ಪ್ರಜ್ಞೆಗೆ ಒತ್ತು ನೀಡಿ, ಎಲ್ಲಾ ಚಟುವಟಿಕೆಗಳಿಗೆ ಚುರುಕು ನೀಡುವ ಉದ್ದೇಶವನ್ನು ಹೊಂದಿದೆ. ಆಡಳಿತ ಪಕ್ಷವು ವಿಫಲವಾಗಿ ವಿದ್ಯಾರ್ಥಿ ಸರ್ಕಾರ ಬಿದ್ದಲ್ಲಿ ಸೂಕ್ತ ಬೆಂಬಲದೊಂದಿಗೆ ವಿಪಕ್ಷವೂ ಹೊಸ ಸರ್ಕಾರ ರಚಿಸಿ ನಾಯಕನನ್ನು ಆಯ್ಕೆ ಮಾಡಬಹುದಾಗಿದೆ. ಶಿಕ್ಷಕಿ ಸೌಮ್ಯ ಎ ಇವರು ಮುಖ್ಯ ಚುನಾವಣಾಧಿಕಾರಿಯಾಗಿದ್ದಾರೆ, ರೇಖಾ ಇ, ವಿನುತಾ, ಪ್ರಸೀದ, ಚೈತ್ರಲಕ್ಷ್ಮಿ ಚುನಾವಣಾಧಿಕಾರಿಗಳಾಗಿರುತ್ತಾರೆ. ಈ ವಾರದ ಕೊನೆಯಲ್ಲಿ ಪ್ರಮಾಣ ವಚನ ನಡೆಯಲಿದೆ. ಒಟ್ಟಿನಲ್ಲಿ ಮಕ್ಕಳಲ್ಲಿ ಯೋಗ್ಯವಾದ ರೀತಿಯಲ್ಲಿ ಚುನಾವಣಾ ನಿಯಾಮಾವಳಿಗಳನ್ನು ರೂಪಿಸಿ, ರಾಜಕೀಯ ಶಿಕ್ಷಣದ ಮಹತ್ವವನ್ನು ತಿಳಿಸುವುದು ಉದ್ದೇಶಿತವಾಗಿದೆ ಎಂದು ಶಾಲಾ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here