ನಾಯಕ: ಮನ್ವಿತ್, ನಾಯಕಿ: ಬೃಂದಾ ಕೆ
ಪುತ್ತೂರು: ಎಕ್ಕಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮಂತ್ರಿ ಮಂಡಲವನ್ನು ರಚನೆ ಮಾಡಲಾಯಿತು. ಇವಿಎಂ ಆಪ್ ಬಳಸಿಕೊಂಡು ಚುನಾವಣೆ ನಡೆಸಲಾಯಿತು. ಶಾಲಾ ನಾಯಕನಾಗಿ ಮನ್ವಿತ್, ನಾಯಕಿಯಾಗಿ ಬೃಂದಾ ಕೆ, ವಿರೋಧ ಪಕ್ಷದ ನಾಯಕನಾಗಿ ಮೊಹಮ್ಮದ್ ಮುಝಾಮ್ಮಿಲ್, ಶಿಕ್ಷಣ ಮಂತ್ರಿಯಾಗಿ ಅಬ್ಸಾನಾ, ಮೊಹಮ್ಮದ್ ರಾಫಿಹ, ರಶ್ಮಿತಾ, ತ್ರಿಶಾಂತ್, ಶಿಸ್ತು ಮಂತ್ರಿಗಳಾಗಿ ಆಯಿಷತ್ ಸ್ವಫಾ, ಗೌತಮಿ, ಸಾತ್ವಿಕ್, ಆರೋಗ್ಯ ಮಂತ್ರಿಗಳಾಗಿ ತೀರ್ಥಪ್ರಸಾದ್, ಆಯಿಷತ್ ಸಮ್ನಾ, ಫಾತಿಮತ್ ಜುನೈರಿಯಾ, ಸಮಯ ಪಾಲನಾ ಮಂತ್ರಿಯಾಗಿ ಮಾಹಿತ್ ಸೂಧನ್, ಸ್ವಚ್ಛತಾ ಮಂತ್ರಿಗಳಾಗಿ ವಂಶಿಕಾ, ಜುಮೈಲಾ, ನೀರಾವರಿ ಮಂತ್ರಿಗಳಾಗಿ ಗೌರವ್ ಡಿ, ಆಧ್ಯಾ, ಅಬ್ದುಲ್ ಹಾತಿಮ್, ಸೃಜನ್, ಸುಮಂತ್ರವರುಗಳು ಆಯ್ಕೆಯಾದರು.
ಶಾಲಾ ಮುಖ್ಯಗುರುಗಳು, ಶಿಕ್ಷಕರು ಚುನಾವಣಾ ಅಧಿಕಾರಿಗಳಾಗಿ ಸಹಕರಿಸಿದ್ದರು. ವಿದ್ಯಾರ್ಥಿಗಳು ಇವಿಎಂ ಆಪ್ನಲ್ಲಿ ಮತ ಚಲಾಯಿಸಿ ಅದೇ ಆಪ್ನಲ್ಲಿ ಚುನಾವಣಾ ಫಲಿತಾಂಶ ಪಡೆದುಕೊಂಡರು.