ಹೊಸ ವಿನ್ಯಾಸದೊಂದಿಗೆ ಮತ್ತೆ ಮಾರುಕಟ್ಟೆಗೆ ಬಂದ ಫ್ಯಾಷನ್ ಪ್ಲಸ್ ಮೋಟರ್ ಬೈಕ್-ಕಡಬ ಕೀರ್ತಿ ಮೋಟಾರ್ಸ್‌ನಲ್ಲಿ ಬಿಡುಗಡೆ

0

ಕಡಬ: ಹೊಸ ವಿನ್ಯಾಸದೊಂದಿಗೆ ತಯಾರಾದ ಫ್ಯಾಷನ್ ಪ್ಲಸ್ ಮೋಟಾರ್ ಬೈಕ್‌ನ್ನು ಇಲ್ಲಿನ ಕೀರ್ತಿ ಮೋಟಾರ್ಸ್‌ನಲ್ಲಿ ಜೂ. 17ರಂದು ಬಿಡುಗಡೆಗೊಳಿಸಲಾಯಿತು.
ಕಡಬ ಆರಕ್ಷಕ ಉಪ ನಿರಿಕ್ಷಕ ಆಂಜನೇಯ ರೆಡ್ಡಿ ಅವರು ಬಿಡುಗಡೆಗೊಳಿಸಿ, ಮೊದಲ ಗ್ರಾಹಕ ರಾಜೇಶ್ ನಾಯ್ಕ್ ಅವರಿಗೆ ಕೀ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕ ನರೇಶ್ ಹಾಗೂ ಸಿಬ್ಬಂದಿಗಳು, ಗ್ರಾಹಕರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

ಹೊಸ ವಿನ್ಯಾಸದೊಂದಿಗೆ ಮತ್ತೆ ಮಾರುಕಟ್ಟೆಗೆ ಬಂದಿದೆ ಫ್ಯಾಷನ್ ಪ್ಲಸ್: ಕೆಲವು ವರ್ಷಗಳ ಹಿಂದೆ ಫ್ಯಾಷನ್ ಪ್ಲಸ್ ಮೋಟಾರ್ ಬೈಕ್‌ನ ತಯಾರಿಕೆಯನ್ನು ಕಂಪೆನಿ ಸ್ಥಗಿತಗೊಳಿಸಿತ್ತು. ಇದೀಗ ಮತ್ತೆ ಗ್ರಾಹಕರ ಅಪೇಕ್ಷೆ ಮೇರೆಗೆ ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಬಂದಿದೆ. ಉತ್ತಮ ಮೈಲೇಜ್ ಹಾಗೂ ಉತ್ತಮ ಶಕ್ತಿಯನ್ನು ಹೊಂದಿರುವ ಈ ಬೈಕ್ ಉತ್ತಮ ದರದಲ್ಲಿ ಕಡಬ ಕೀರ್ತಿ ಮೋಟಾರ್ಸ್ ನಲ್ಲಿ ಮಾರಾಟ ಮಾಡಲಾಗುತ್ತಿದೆ. ಕಳೆದ 17 ವರ್ಷಗಳಿಂದ ಕಡಬದಲ್ಲಿ ಕಾರ್ಯಾಚರಿಸುತ್ತಿರುವ, ಹೀರೋ ಕಂಪೆನಿಯ ಮೋಟಾರ್ ಬೈಕ್ ಮಾರಾಟ ಮಳಿಗೆ ಕೀರ್ತಿ ಮೋಟಾರ್ಸ್ ಕಡಬದಲ್ಲಿ ಅಲ್ಲದೆ ಪಂಜ, ಸುಬ್ರಹ್ಮಣ್ಯ, ನೆಲ್ಯಾಡಿಯಲ್ಲಿ ಶಾಖೆಯನ್ನು ಹೊಂದಿದೆ. ಕೀರ್ತಿ ಮೋಟಾರ್ಸ್‌ನಲ್ಲಿ ಮೊದಲ ದಿನವೇ ಫ್ಯಾಷನ್ ಪ್ಲಸ್‌ಗೆ ಉತ್ತಮ ಬೇಡಿಕೆ ಬಂದಿದೆ ಎಂದು ಮಾಲಕ ನರೇಶ್ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here