ಪುತ್ತೂರು: ಅನಿವಾಸಿ ಸಮೀತಿ ಗಲ್ಫ್ ಯೂಥ್ ಕಬಕ ಜಮಾಅತ್ ಇದರ 23-24 ನೇ ಸಾಲಿನ ನೂತನ ಅಧ್ಯಕ್ಷರಾಗಿ ಇಕ್ಬಾಲ್ ಶೇಖ್ ಕಬಕ ,ಪ್ರಧಾನ ಕಾರ್ಯದರ್ಶಿಯಾಗಿ ಶರೀಫ್ ಕಬಕ ಕತಾರ್ ಮತ್ತು ಲೆಕ್ಕ ಪರಿಶೋಧಕರಾಗಿ ಆಶಿಕ್ ಕಬಕ ಕತಾರ್ ಮರು ಆಯ್ಕೆ ನಡೆಸಲಾಯಿತು.ಗೌರವಾಧ್ಯಕ್ಷರಾಗಿ ಸುಲೈಮಾನ್ ಕಬಕಕಾರ್ಸ್, ಮುಹಮ್ಮದ್ ಬೊಳ್ವಾರು ,ಜೊತೆ ಕಾರ್ಯದರ್ಶಿಯಾಗಿ ಸಲೀಂ ಪಡೀಲ್ KSA ನೇಮಿಸಲಾಗಿದೆ.
ಕೋಶಾಧಿಕಾರಿಯಾಗಿ ಸಿರಾಜ್ ಬಗ್ಗುಮೂಲೆ, ಜೊತೆ ಕೋಶಾಧಿಕಾರಿಯಾಗಿ ಅಶ್ರಫ್ ದುಬೈ ಆಯ್ಕೆಯಾದರೆ,ಉಪಾಧ್ಯಕ್ಷರಾಗಿ ನೌಷದ್ ಪೋಳ್ಯ, ಸಲಹಾ ಸಮಿತಿ ಮುಖ್ಯಸ್ಥರಾಗಿ ಇಸ್ಮಾಯಿಲ್ ಬಗ್ಗುಮೂಲೆ, ಮುಹಮ್ಮದ್ ಸಿತಾರ್, ರಫೀಕ್ ಬ್ರೈಟ್ ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿಯ ನೂತನ ಸದಸ್ಯರಗಳಾಗಿ ಅಶ್ರಫ್ ಕಬಕ ದುಬೈ, ಪೈಝಲ್ ದುಬೈ, ಸರ್ವಾನ್ ಅಬುಧಾಬಿ, ರಿಯಾಝ್ ಕರ್ನಾಟಕ, ಸಿದ್ದೀಕ್ ಸುಲ್ತಾನ್ ನಗರ ದುಬೈ ಸಲೀಂ ಪಡೀಲ್ KSA , ಮುಹಮ್ಮದ್ ಕುಂಬ್ರ, ಶರೀಫ್ ಜಿಸ್ತಿ, ಶಾಕೀರ್ ದುಬೈ, ಬದ್ರುದ್ದೀನ್ ದುಬೈ ಕ್ಯಾಬಿನೆಟ್ಗೆ ಸೇರಿಸಿಕೊಳ್ಳಲಾಯಿತು. ಆಸೀಫ್ ಬಗ್ಗುಮೂಲೆ,ಅಸ್ಲಮ್ ಸಿತಾರ್, ಸುಲೈಮಾನ್ ಓಜಲ ಕತಾರ್,ಶಾಕೀರ್ ರಾಜಧಾನಿ ಮುಂದುವರೆಸಲಾಯಿತು.ಹೊಸ ಊರಿನ ಪ್ರತಿ ನಿಧಿಗಳಾಗಿ ನೌಫಲ್ ಕಬಕಕಾರ್ಸ್, ಹಾರೀಸ್ ದಿಲ್, ರಫೀಕ್ ಕಸ್ತೂರಿ ಆಯ್ಕೆ ಮಾಡಲಾಯಿತು.
ಸಂಚಾಲಕರಾಗಿ ಅಮ್ಜದ್ ಖಾನ್ ಪೋಲ್ಯ , ಬಶೀರ್ ಹಾಜಿ ಮತ್ತು ರವೂಫ್ ಮಾಸ್ಟರ್ ಹಾಗೂ ಅಡ್ಮಿನ್ ಗಳಾಗಿ ಅಶ್ರಫ್ ಯುನೈನ್ ಮತ್ತು ಸಮೀರ್ ಕರ್ನಾಟಕ ಮರು ಆಯ್ಕೆ ಮಾಡಲಾಯಿತು.
ಸಂಸ್ಥೆಯ ಔಪಚಾರಿಕ ವಾಟ್ಸಪ್ಪ್ ಗ್ರೂಪ್ “ಗಲ್ಫ್ ಯೂಥ್ ಕಬಕ ಜಮಾಅತ್” ನಲ್ಲಿ ಸಮೀತಿ ಪುನರ್ರಚನೆ ಕಾರ್ಯಕ್ರಮವನ್ನು ನಡೆಸಲಾಯಿತು, ಮಹಮ್ಮದ್ ಕುಂಬ್ರ ದುಆದ ಮೂಲಕ ಆರಂಭಿಸಿದರು .
ನಿರ್ಗಮನ ಅಧ್ಯಕ್ಷ ಅಸಿಫ್ ಬಗ್ಗುಮೂಲೆ ಸ್ವಾಗತಿಸಿ,ಕಳೆದೊಂದು ವರ್ಷ ಸಹಕರಿಸಿದ ಸದಸ್ಯರಿಗೆ ಧನ್ಯವಾದ ಹೇಳಿದರು, ಮತ್ತು ಕಾರ್ಯದರ್ಶಿ ಶರೀಫ್ ಕತಾರ್ ಲೆಕ್ಕ ಪತ್ರ ಮಂಡಿಸಿ ಸಹಕರಿಸಿದ ಪ್ರತಿಯೊಬ್ಬರನ್ನು ಶ್ಲಾಘಿಸಿದರು.
ಇತ್ತೀಚೆಗೆ ಅಗಲಿದ ಸಮೀತಿ ಮಾಜಿ ಗೌರವಧ್ಯಕ್ಷ, ಪ್ರಮುಖ ಸಲಹೆಗಾರ ಆಗಿದ್ದ ಮರ್ಹೂಂ ಮೌಲಾನಾ ರಝಕ್ ಹಾಜಿ ಮಲೇಷ್ಯರನ್ನು ನೆನೆಸಿ ಅವರ ಪರಲೋಕ ಜೀವನದ ಶಾಂತಿಗೆ ಪ್ರಾರ್ಥಿಸಲಾಯಿತು.
ಸಮೀತಿ ಸಂಚಾಲಕ ಅಮ್ಜದ್ ಖಾನ್, ರವೂಫ್ ಮತ್ತು ಬಶೀರ್ ಹಾಜಿ ಸಮೀತಿ ರಚನಾ ಕಾರ್ಯಕ್ರಮವನ್ನು ನೆರೆವೇರಿಸಿಕೊಟ್ಟರು..
ಸಮೀತಿಯೂ ಕಬಕ ಜಮಾತಿಗೊಳಪಟ್ಟ ಬಡನಿರ್ಗತಿಕರ ಸೇವೆ ಮತ್ತು ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವ ಉದ್ದೇಶದಿಂದ ಆರಂಭಗೊಂಡಿದ್ದು ಕಳೆದ 8 ವರ್ಷಗಳಿಂದ “ನಾವು ಬಡ ನಿರ್ಗತಿಕರ ಪರ “ಎಂಬ ಟ್ಯಾಗ್ ಲೈನ್ ನೊಂದಿಗೆ ಕಾರ್ಯನಿರ್ವಹಿಸುತ್ತಿದೆ.