ಕಾಣಿಯೂರು ಅನಾರೋಗ್ಯದಲ್ಲಿರುವ ಮಠತ್ತಾರು ಗುರುವರವರ ಕುಟುಂಬಕ್ಕೆ ಮನೆ ನಿರ್ಮಾಣಕ್ಕೆ ಮುಂದಾದ ಶ್ರೀ.ಕ್ಷೇ.ಧ.ಗ್ರಾ.ಯೋಜನೆ..; “ವಾತ್ಸಲ್ಯ” ಯೋಜನೆಯಲ್ಲಿ ನೂತನ ಮನೆ ನಿರ್ಮಾಣಕ್ಕೆ ಶಿಲಾನ್ಯಾಸ

0

ಕಾಣಿಯೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೆ ಯೋಜನೆಯ ಅನುದಾನ ತಲುಪುವಲ್ಲಿ ಖಾವಂದರ ವಾತ್ಸಲ್ಯ ಯೋಜನೆಯು ಸಹಕಾರಿಯಾಗಿದೆ. ಎಲ್ಲಾ ಮೂಲಭೂತ ಸೌಕರ್ಯಗಳು ಸಿಕ್ಕಾಗ ಮಾತ್ರ ಆತನ ಜೀವನ ಪಾವನವಾಗುತ್ತದೆ. ಈ ನಿಟ್ಟಿನಲ್ಲಿ ಗುರುವ ಅವರ ಕುಟುಂಬಕ್ಕೆ ಮನೆ ನಿರ್ಮಾಣಗೊಂಡು ಶೀಘ್ರದಲ್ಲಿ ಗೃಹಪ್ರವೇಶ ನಡೆಯುವಂತಾಗಲೀ ಎಂದು ಕಡಬ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ, ನ್ಯಾಯವಾದಿ ಮಹೇಶ್ ಕೆ ಸವಣೂರು ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವಾತ್ಸಲ್ಯ ಯೋಜನೆಯಡಿಯಲ್ಲಿ ಕಾಣಿಯೂರು ಗ್ರಾಮದ ಮಠತ್ತಾರು ಗುರುವ ಎಂಬವರಿಗೆ ಮಂಜೂರುಗೊಂಡ ನೂತನ ಮನೆ ನಿರ್ಮಾಣಕ್ಕೆ ಜೂ.19ರಂದು ನಡೆದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾಣಿಯೂರು ಗ್ರಾ.ಪಂ.ಉಪಾಧ್ಯಕ್ಷ ಗಣೇಶ್ ಉದನಡ್ಕ ಮಾತನಾಡಿ, ಪೂಜ್ಯ ಖಾವಂದರ ಕಲ್ಪನೆಯಂತೆ ವಾತ್ಸಲ್ಯ ಯೋಜನೆಯಲ್ಲಿ ಗುರುವರವರಿಗೆ ಮನೆ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ವಿಚಾರ. ದೇವರ ಅನುಗ್ರಹದಿಂದ, ಯಶಸ್ವಿಯಾಗಿ ಮನೆ ನಿರ್ಮಾಣಗೊಂಡು ಗುರುವ ಅವರ ಕುಟುಂಬ ಸಂತಸದ ಜೀವನ ನಡೆಸುವಂತಾಗಲಿ ಎಂದರು.

ಕಾಣಿಯೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲ ಮಾತನಾಡಿ, ಗುರುವ ಮತ್ತು ಅವರ ಪುತ್ರಿ ಜಾನಕಿ ಕಡು ಬಡತನದಿಂದ ಜೀವನ ಸಾಗಿಸುತ್ತಿದ್ದರು. ಕಷ್ಟದ ಜೀವನ ನಡೆಸುತ್ತಿದ್ದ ಬಡ ಕುಟುಂಬವು ಸ್ವಂತ ಮನೆಯಲ್ಲಿ ಜೀವನ ಸಾಗಿಸಲು ಶ್ರೀ.ಕ್ಷೇ.ಧ.ಗ್ರಾ.ಯೋಜನೆ ಸಹಕಾರಿಯಾಗಿದೆ. ಅನಾರೋಗ್ಯದಲ್ಲಿರುವ ಅವರ ಕುಟುಂಬಕ್ಕೆ ಪ್ರಾರಂಭದಲ್ಲಿ ಚಿಕಿತ್ಸೆಕೊಡಿಸುವ ಕೆಲಸವೂ ಊರಿನವರಿಂದ ಆಗಿದೆ. ಮನೆ ನಿರ್ಮಾಣವಾದ ಬಳಿಕವೂ ಅವರ ಆರೋಗ್ಯವನ್ನು ಸರಿಪಡಿಸುವಲ್ಲಿ ಎಲ್ಲರೂ ಸಹಕಾರ ನೀಡಬೇಕು ಎಂದರು.

ಕಾಣಿಯೂರು ಗ್ರಾ.ಪಂ.ಅಧ್ಯಕ್ಷೆ ಲಲಿತಾ ದರ್ಖಾಸು, ಗ್ರಾ.ಪಂ.ಸದಸ್ಯರಾದ ರಾಮಣ್ಣ ಗೌಡ ಮುಗರಂಜ, ವಸಂತ ಪೆರ್ಲೋಡಿ, ಬೆಳಂದೂರು ಗ್ರಾ.ಪಂ.ಸದಸ್ಯ ಜಯಂತ ಅಬೀರ, ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಕಾಣಿಯೂರು ಬಿ ಒಕ್ಕೂಟದ ಅಧ್ಯಕ್ಷ ಕುಸುಮಾಧರ ಅನಿಲ, ಯೋಜನೆಯ ವಲಯಾಧ್ಯಕ್ಷ ರಾಮಚಂದ್ರ ಇಡ್ಯಡ್ಕ, ಕಾಣಿಯೂರು ಸ.ಹಿ.ಪ್ರಾ.ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಪರಮೇಶ್ವರ ಗೌಡ ಅನಿಲ, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಅಧ್ಯಕ್ಷ ವಾಸುದೇವ ನಾಯ್ಕ್ ತೋಟ, ಏಲಡ್ಕ ಶ್ರೀ ಶಿರಾಡಿ ರಾಜನ್ ದೈವಸ್ಥಾನದ ಮೊಕ್ತೇಸರರಾದ ರೋಹಿತ್ ಅನಿಲ, ವಸಂತ ಗೌಡ ಕಂಪ, ಆಡಳಿತ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಎಳುವೆ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಮುರಳೀಧರ ಪುಣ್ಚತ್ತಾರು, ನಿರ್ದೇಶಕರಾದ ಪುಟ್ಟಣ್ಣ ಗೌಡ ಮುಗರಂಜ, ರಮೇಶ್ ಉಪ್ಪಡ್ಕ, ಗ್ರಾ.ಪಂ.ಮಾಜಿ ಅಧ್ಯಕ್ಷ ಶಿವಾನಂದ ಪುಣ್ಚತ್ತಾರು, ಮಾಜಿ ಸದಸ್ಯ ಸುರೇಶ್ ಓಡಬಾಯಿ, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಮೀಜೆ, ಕಾಣಿಯೂರು ಜಾತ್ರೋತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ಓಡಬಾಯಿ, ಕಾಣಿಯೂರು ವಲಯ ವಿಪತ್ತು ನಿರ್ವಹಣಾ ಶೌರ್ಯ ತಂಡದ ಅಧ್ಯಕ್ಷ ಹರೀಶ್ ಪೈಕ, ಪುಣ್ಚತ್ತಾರು ಶ್ರೀ ಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್‌ನ ಕಾರ್ಯದರ್ಶಿ ಮೋನಪ್ಪ ಬಂಡಾಜೆ, ಸದಾನಂದ ಆಚಾರ್ಯ, ರಚನ್ ಬರಮೇಲು, ರಾಘವೇಂದ್ರ ಗುಂಡಿಗದ್ದೆ, ದಿವಾಕರ್ ಬೆದ್ರಾಜೆ, ಸುಲಕ್ಷಣ ರೈ ಪೈಕ, ಕೇಶವ ಕಾಣಿಯೂರು, ಪುನೀತ್ ಕಲ್ಪಡ, ಗುತ್ತಿಗೆದಾರ ಚೇತನ್ ಕಟ್ಟತ್ತಾರು, ಯೋಜನೆಯ ಮೇಲ್ವಿಚಾರಕಿ ಹರ್ಷಾ, ಸೇವಾಪ್ರತಿನಿಧಿಗಳಾದ ಕಾವ್ಯ, ಮನೋರಮಾ ಮತ್ತಿತರರು ಉಪಸ್ಥಿತರಿದ್ದರು. ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ನಾವೂರು ಸ್ವಾಗತಿಸಿ, ಮೇಲ್ವಿಚಾರಕಿ ಚೇತನಾ ವಂದಿಸಿದರು.

ಶೌರ್ಯ ವಿಪತ್ತು ತಂಡದಿಂದ ಅಡಿಪಾಯ ಕೆಲಸ ಆರಂಭ

ಕಾಣಿಯೂರು ವಲಯ ವಿಪತ್ತು ನಿರ್ವಹಣಾ ‘ಶೌರ್ಯ’ ತಂಡವು ಗುರುವ ಅವರ ಮನೆ ನಿರ್ಮಾಣಕ್ಕೆ ಶಿಲಾನ್ಯಾಸ ನಡೆದ ಬಳಿಕ ಅದರ ಅಡಿಪಾಯದ ಕೆಲಸ ಪ್ರಾರಂಭಿಸಿದರು. ಕಾಣಿಯೂರು ವಲಯ ವಿಪತ್ತು ನಿರ್ವಹಣಾ ಶೌರ್ಯ ತಂಡದ ಅಧ್ಯಕ್ಷ ಹರೀಶ್ ಪೈಕ, ಕಾರ್ಯದರ್ಶಿ ಸದಾನಂದ ಆಚಾರ್ಯ, ಸದಸ್ಯರಾದ ರವೀಂದ್ರ ಮಾಳ, ಮೋನಪ್ಪ ಬಂಡಾಜೆ, ಮಹೇಶ್ ಪೈಕ, ಪ್ರಶಾಂತ್ ಬಾರೆತ್ತಡಿ, ರಮೇಶ ಉಪ್ಪಡ್ಕ, ಸುಗಂಧ ಬಿರ್ನೇಲು, ಪ್ರಕಾಶ ಬೆದ್ರಂಗಳ, ಸುಲಕ್ಷಣ ರೈ ಪೈಕ, ಜಯಂತ ಅಬೀರ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here