ಆಲಂಕಾರು ದುರ್ಗಾಂಬಾ ಲಯನ್ಸ್ ಕ್ಲಬ್ ನ ಅಧ್ಯಕ್ಷರಾಗಿ ಪ್ರಶಾಂತ ರೈ ಮನವಳಿಕೆ,ಕಾರ್ಯದರ್ಶಿಯಾಗಿ ಶ್ರೀಪತಿ ರಾವ್ ,ಕೋಶಾಧಿಕಾರಿಯಾಗಿ ಆರುವಾರ ಸುಭಾಸ್ ಕುಮಾರ್ ಶೆಟ್ಟಿ ಆಯ್ಕೆ

0


ಪದಗ್ರಹಣ ಸಮಾರಂಭದ ಅಮಂತ್ರಣ ಪತ್ರಿಕೆ ಬಿಡುಗಡೆ


ಆಲಂಕಾರು: ಆಲಂಕಾರು ದುರ್ಗಾಂಬಾ ಲಯನ್ಸ್ ಕ್ಲಬ್ ನ ನೂತನ ಅಧ್ಯಕ್ಷರಾಗಿ ಪ್ರಶಾಂತ ರೈ ಮನವಳಿಕೆ,ಕಾರ್ಯದರ್ಶಿಯಾಗಿ ಶ್ರೀಪತಿರಾವ್,ಕೋಶಾಧಿಕಾರಿ ಯಾಗಿ ಸುಭಾಸ್ ಕುಮಾರ್ ಶೆಟ್ಟಿಯವರು ಆಯ್ಕೆಯಾಗಿದ್ದಾರೆ. ಆಲಂಕಾರು ದುರ್ಗಾಂಬಾ ಲಯನ್ಸ್ ಕ್ಲಬ್ ನ ಅಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು ಅಧ್ಯಕ್ಷತೆಯಲ್ಲಿ ಮೇ 31ರಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಮಾಡಲಾಯಿತು.

ಜೂ. 24 ರಂದು ಲಯನ್ಸ್ ಕ್ಲಬ್ ಆಲಂಕಾರು ದುರ್ಗಾಂಬಾ ಇದರ 2023- 2024 ರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಆಲಂಕಾರು ದುರ್ಗಾಂಬಾ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಜೂ.20ರಂದು ಆಲಂಕಾರು ದುರ್ಗಾಂಬಾ ಲಯನ್ಸ್ ಕ್ಲಬ್ ಅಧ್ಯಕ್ಷರಾದ ದಯಾನಂದ ರೈ ಮನವಳಿಕೆ ಗುತ್ತುರವರ ಅಧ್ಯಕ್ಷತೆಯಲ್ಲಿ 2023- 2024 ರ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.


ಸಭೆಯಲ್ಲಿ ಕ್ಲಬ್ ನ ವಿಸ್ತರಣಾಧಿಕಾರಿ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ ಕ್ಲಬ್ ಗೈಡಿಂಗ್ ಲಯನ್ ರವಿಪ್ರಸಾದ್ ಶೆಟ್ಟಿ, ಕ್ಲಬ್ ನ ಸದಸ್ಯರಾದ ವಿಜಯ ಕುಮಾರ್ ರೈ, ಸುಭಾಸ್ ಕುಮಾರ್ ಶೆಟ್ಟಿ ಆರುವಾರ, ಇಂದು ಶೇಖರ್ ಶೆಟ್ಟಿ, ಹೇಮಂತ್ ರೈ ಮನವಳಿಕೆ, ಪದ್ಮಪ್ಪ ಗೌಡ ಕೆ, ಸುಧಾಕರ್ ರೈ ಉಪಸ್ಥಿತರಿದ್ದರು.ಆಲಂಕಾರು ದುರ್ಗಾಂಬಾ ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.


ನೂತನ ಪದಾಧಿಕಾರಿಗಳಾದ ಪ್ರಶಾಂತ ರೈಮನವಳಿಕೆಯವರು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಸೇವಾ ನಿವೃತ್ತ ರಾಗಿದ್ದು ಪ್ರಸಕ್ತ ಆಲಂಕಾರು ವಲಯ ಬಂಟರ ಸಂಘದ ಕಾರ್ಯದರ್ಶಿಯಾಗಿ ,ಮನವಳಿಕೆಗುತ್ತು ದೈವದೇವರ ಟ್ರಸ್ಟ್‌ನ ಕಾರ್ಯದರ್ಶಿಯಾಗಿ, ಸುರುಳಿ ಬಾಲಸುಬ್ರಹ್ಮಣ್ಯ ದೇವಸ್ಥಾನ ದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ , ಆಲಂಕಾರು ನವರಂಗ್ ಎಂಟರ್ ಪ್ರೈಸಸ್ ಪಾಲುದಾರರಿಗೆ ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಕಾರ್ಯದರ್ಶಿಯಾಗಿ ಆಯ್ಕೆಯಾದ ಶ್ರೀಪತಿರಾವ್ ರವರು ಆಲಂಕಾರು ಶ್ರೀ ದುರ್ಗಾಂಬಾ ಪ್ರೌಢಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೋಶಾಧಿಕಾರಿಯಾದ ಸುಭಾಸ್ ಕುಮಾರ್ ಶೆಟ್ಟಿ ಆರುವಾರ ಪ್ರಗತಿಪರ ಕೃಷಿಕರಾಗಿದ್ದು ,ಪುತ್ತೂರು ತಾಲೂಕು ಬಂಟರ ಸಂಘದ ನಿರ್ದೇಶಕರಾಗಿದ್ದಾರೆ.

LEAVE A REPLY

Please enter your comment!
Please enter your name here