ವೀರಮಂಗಲ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

0

ಪುತ್ತೂರು : ಪ್ರತಿ ಮನೆಯಂಗಳದಲ್ಲಿ ಯೋಗ ಎಂಬ ಘೋಷವಾಕ್ಯದೊಂದಿಗೆ ಇಂದು ವಿಶ್ವ ಯೋಗ ದಿನಾಚರಣೆಯನ್ನು ವೀರಮಂಗಲ ಶಾಲೆಯಲ್ಲಿ ಆಚರಿಸಲಾಯಿತು. ಶಾಲೆಯ ಯೋಗ ಪಟುಗಳು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇಲಾಖೆಯ ಸುತ್ತೋಲೆಯಂತೆ ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾದ ಯೋಗ ಅಭ್ಯಾಸವನ್ನು ದೈಹಿಕ ಶಿಕ್ಷಣ ಶಿಕ್ಷಕಿ ಹೇಮಾವತಿ ಇವರ ನಿರ್ದೇಶನದಲ್ಲಿ ನಡೆಸಲಾಯಿತು.

ದೇಹ ಸಡಿಲಗೊಳಿಸುವ ವ್ಯಾಯಾಮಗಳು ಮೊದಲು ಮಾಡಿಸಲಾಯಿತು. ಬಳಿಕ ನಿಂತು ಮಾಡುವ ಆಸನಗಳಾದ ತಾಡಾಸನ, ವೃಕ್ಷಾಸನ ಪಾದ ಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋನಾಸನ ಮಾಡಲಾಯಿತು. ಕುಳಿತು ಮಾಡುವ ಆಸನಗಳಲ್ಲಿ ಭದ್ರಾಸನ, ವಜ್ರಾಸನ, ಅರ್ಧ ಉಷ್ಟ್ರಾಸನ, ಉಷ್ಟ್ರಾಸನ, ಶಶಾಂಕಾಸನ, ಉತ್ತಿತ ಮಂಡೂಕಾಸನ, ವಕ್ರಾಸನ ಮಾಡಲಾಯಿತು. ಹೊಟ್ಟೆಯ ಸಹಾಯದಲ್ಲಿ ಮಾಡುವ ಆಸನಗಳಾದ ಮಕರಾಸನ, ಭುಜಂಗಾಸನ, ಶಲಬಾಸನ, ಬೆನ್ನಿನ ಸಹಾಯದಲ್ಲಿ ಮಾಡುವ ಆಸನಗಳಾದ ಉತ್ತಾನಪಾದಾಸನ ಅರ್ಧ ಹಲಾಸನ ಪವನಮುಕ್ತಾಸನ, ಸೇತುಬಂಧಾಸನ ಹಾಗೆ ಕಪಾಲಬಾತಿ ಕ್ರೀಯೆ, ಪ್ರಾಣಾಯಾಮಗಳಾದ ಅನುಲೋಮ ವಿಲೋಮ ನಾಡಿಶೋದನ, ಶಿತ್ಕಾರಿ ಬ್ರಾಹ್ಮರಿ ಈ ಯೋಗಗಳನ್ನ ಮಾಡಿಸಲಾಯಿತು. ಸ್ವಸ್ತಿ ಮಂತ್ರದೊಂದಿಗೆ ಕಾರ್ಯಕ್ರಮವನ್ನು ಸಂಪನ್ನಗೊಳಿಸಲಾಯಿತು. ಎಸ್‌ಡಿಎಂಸಿ ಸದಸ್ಯರಾದ ಹಮೀದ್ ಪೋಷಕರಾದ ಗೋಪಾಲಕೃಷ್ಣ, ಗಣೇಶ್ ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ಸ್ವಾಗತಿಸಿ ಕಾರ್ಯಕ್ರಮದ ಆಯೋಜನೆ ಮಾಡಿದರು. ಶಿಕ್ಷಕಿಯರಾದ ಹರಿಣಾಕ್ಷಿ, ಶೋಭಾ ಶ್ರೀಲತಾ, ಕವಿತಾ, ಶರಣ್ಯ,ನಳಿನಿ, ಚಂದ್ರಾವತಿ ಸಹಕರಿಸಿದರು.

LEAVE A REPLY

Please enter your comment!
Please enter your name here