ಮಾಯಿದೆ ದೇವುಸ್ ಹಿರಿಯ ಪ್ರಾಥಮಿಕ ಶಾಲಾ ಮಂತ್ರಿಮಂಡಲ ರಚನೆ

0

ಪುತ್ತೂರು: ಮಾಯಿದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2023-24ನೇ ಸಾಲಿನ ಶಾಲಾ ಮಂತ್ರಿಮಂಡಲದ ಪದಗ್ರಹಣ ಸಮಾರಂಭ ಕಾರ್ಯಕ್ರಮವು ಜು.21ರಂದು ಜರಗಿತು.

ಕಾರ್ಯಕ್ರಮವನ್ನು ಶಾಲಾ ಮಕ್ಕಳು ದೇವರ ಪ್ರಾರ್ಥನೆಯೊಂದಿಗೆ ನೆರವೇರಿಸಿದರು.ಶಾಲಾ ಮುಖ್ಯಮಂತ್ರಿ ರೆನಿಷ ಡಿ ಸೋಜ ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಾಯಿದೆ ದೇವುಸ್ ಶಾಲೆಯ ಸಂಚಾಲಕ ಅತಿ ಲಾರೆನ್ಸ್ ಜೆರೊಮ್ ಮಸ್ಕರೇನ್ಹಸ್ ದೀಪ ಬೆಳಗಿಸಿ ಶುಭ ಹಾರೈಸುವ ಮೂಲಕ ಉದ್ಘಾಸಿದರು.


ಕಾರ್ಯಕ್ರಮದಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಸಂಹಿತಾ, ಶಾಲಾ ಮುಖ್ಯ ಶಿಕ್ಷಕಿ ಜಾನೆಟ್ ಸೋಜ ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಪ್ರಮಾಣ ವಚನ ಬೋಧಿಸಿದರು. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯಾಗಿ ಆಯ್ಕೆಗೊಂಡ ರೆನಿಷ ಡಿ ಸೋಜ ಹಾಗೂ ಕ್ರಿಸ್ ರಿಯೋನ್, ಲಸ್ರಾದೊ, ಸಭಾಪತಿ ಪೃಥ್ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಮಾಣ ವಚನ ಸ್ವೀಕರಿಸಿದ ಎಲ್ಲಾ ಮಂತ್ರಿ ಮಂಡಲದ ಸದಸ್ಯರು, ವಿರೋಧ ಪಕ್ಷದ ಸದಸ್ಯರು ವೇದಿಕೆಯ ಮುಂಭಾಗದಲ್ಲಿ ಉಪಸ್ಥಿತರಿದ್ದರು.


ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಸಂಹಿತಾ, ಶಾಲಾ ಮುಖ್ಯಶಿಕ್ಷಕಿ ಜಾನೆಟ್ ಡಿ ಸೋಜ ಮಕ್ಕಳಿಗೆ ಸೂಕ್ತ ಸಲಹೆಗಳನ್ನು ಹಾಗೂ ಉತ್ತಮ ರೀತಿಯ ಹಿತನುಡಿಗಳನ್ನು ನುಡಿದರು ಹಾಗೂ ಮಂತ್ರಿಮಂಡಲದ ಸದಸ್ಯರಿಗೆ ಶುಭ ಹಾರೈಸಿದರು. ಉಪನಾಯಕ ಕ್ರಿಸ್ ರಿಯೋನ್ ಲಸ್ರಾದೊ ಧನ್ಯವಾದ ನೀಡಿದರು, ಸ್ವಸ್ತಿ ಕಾರ್‍ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here