ಅಂಬಿಕಾ ವಿದ್ಯಾಲಯದಲ್ಲಿ ಯಕ್ಷಗಾನ ನಾಟ್ಯ ತರಬೇತಿಯ ಆರಂಭೋತ್ಸವ

0

ಪುತ್ತೂರು : ನಗರದ ಬಪ್ಪಳಿಗೆ ಅಂಬಿಕಾ ವಿದ್ಯಾಲಯ ಸಿಬಿಎಸ್ ಇ ಯಲ್ಲಿ ಶೈಕ್ಷಣಿಕ ವರ್ಷ 2023-24ರ ಯಕ್ಷಗಾನ ನಾಟ್ಯ ತರಬೇತಿ ಜೂನ್ 19 ರಂದು ಆರಂಭೋತ್ಸವವು ನಡೆಯಿತು.

ಸಮಾರಂಭದಲ್ಲಿ ನಾಟ್ಯ ಗುರು ಬಾಲಕೃಷ್ಣ ಪೂಜಾರಿ ಉಡ್ಡಂಗಳ ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು.

ವಿದ್ಯಾಲಯದ ಪ್ರಾoಶುಪಾಲೆ ಮಾಲತಿ ಭಟ್ ಮಾತನಾಡಿ ಯಕ್ಷಗಾನ ಕಲೆ ನಮ್ಮ ನಾಡಿನ ಗಂಡುಕಲೆ, ನಮ್ಮ ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಶ್ರೇಷ್ಠ ಕಲೆಯಾಗಿದೆ. ನಾಟ್ಯ, ಅಭಿನಯ, ಮಾತುಗಾರಿಕೆ ಹಾಗೂ ವೇಷ ಭೂಷಣಗಳೊಂದಿಗೆ ಪುರಾಣ ಕಥೆಗಳನ್ನು ಜನರ ಮನಸ್ಸಿಗೆ ಮುಟ್ಟುವಂತೆ ರಂಗದಲ್ಲಿ ತಿಳಿಸುವುದಾಗಿದೆ. ಪ್ರತಿಯೊಬ್ಬರಲ್ಲೂ ಪ್ರತಿಭೆ ಇದೆ. ಅದು ಒಂದೊಂದು ರೀತಿಯಲ್ಲಿದೆ. ಅದನ್ನು ಹೊರತೆಗೆದು ರಂಗದಲ್ಲಿ ಪ್ರದರ್ಶಿಸುವoತೆ ಗುರುಗಳು ಮಾರ್ಗದರ್ಶನ ನೀಡುತ್ತಾರೆ. ಹಾಗಾಗಿ ಇಂತಹಾ ಕಲೆಯನ್ನು ಉತ್ತಮವಾದ ರೀತಿಯಲ್ಲಿ ಕರಗತ ಮಾಡಿಕೊಳ್ಳಿ ಎಂದರು.

ಯಕ್ಷಗಾನ ಸಂಯೋಜಕ ಶಿಕ್ಷಕ ಹಾಗೂ ಭಾಗವತ ಸತೀಶ್ ಇರ್ದೆ ಪ್ರಾಸ್ತಾವಿಕ ಮಾತನಾಡಿ ಅಂಬಿಕಾ ವಿದ್ಯಾಲಯದಲ್ಲಿ ಕಳೆದ 7 ವರ್ಷಗಳಿಂದ ಯಕ್ಷಗಾನ ನಾಟ್ಯಭ್ಯಾಸ ನಡೆಯುತ್ತಿದ್ದು ಒಂದು ಉತ್ತಮವಾದ ತಂಡ ನಮ್ಮೊoದಿಗಿದೆ. ವಿದ್ಯಾರ್ಥಿಗಳು ನಿರಂತರವಾಗಿ ಕಲಿಯುತ್ತ ಹೋದಲ್ಲಿ ರಾಮಾಯಣ, ಮಹಾಭಾರತದ ಕತೆಗಳ ಬಗ್ಗೆ ಪರಿಚಯವಾಗುತ್ತದೆ. ಯಕ್ಷಗಾನ ಕಲೆಯು ನಮ್ಮ ಭಾಷಾ ಶುದ್ಧಿಗೆ ಸಹಕರಿಸುತ್ತದೆ. ನಿರರ್ಗಳವಾಗಿ ಮಾತನಾಡಲು ಅಭ್ಯಾಸವಾಗುತ್ತದೆ.ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚು ಪ್ರಸಿದ್ದಿಯನ್ನು ಪಡೆದದ್ದು ಮಾತ್ರವಲ್ಲದೆ ಇದೀಗ ಅಂತಾರಾಷ್ಟಿಯ ಅಂದರೆ ಹೊರದೇಶಗಳಲ್ಲಿಯೂ ಪ್ರದರ್ಶನ ಗೈದು ಭೇಷ್ ಅನಿಸಿದೆ. ನಿಮ್ಮಲ್ಲಿಯೂ ಉತ್ತಮ ಸಂಸ್ಕಾರದ ಜೊತೆಗೆ ಜೀವನದಲ್ಲಿ ಯಶಸ್ಸನ್ನು ಗಳಿಸುವಂತಾಗಲಿ ಎಂದರು.

LEAVE A REPLY

Please enter your comment!
Please enter your name here