ಕಲಿತ ಪ್ರತಿಭಾನ್ವಿತ ಕುಡಿಗಳು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು: ಕ್ಯಾಪ್ಟನ್ ಗಣೇಶ್ ಕಾರ್ಣಿಕ್
ಪುತ್ತೂರು: ಉತ್ತಮ ಅಂಕಗಳನ್ನು ಮತ್ತು ರ್‍ಯಾಂಕ್‌ಗಳನ್ನು ಗಳಿಸುವುದು ವಿದ್ಯಾರ್ಥಿಗಳು ಮಾಡಿದಂತಹ ಸತತ ಪರಿಶ್ರಮದಿಂದಾಗಿದೆ. ವಿದ್ಯಾರ್ಥಿಗಳು ತಮ್ಮಲ್ಲಿನ ಪ್ರತಿಭೆಯನ್ನು ಗೌರವಿಸಿ, ಸಮಾಜಕ್ಕೆ ತೋರ್ಪಡಿಸುವಂತಾಗಬೇಕು. ಉತ್ತಮ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜವು ಗುರುತಿಸುವಂತಹ ಕಾರ್ಯಗಳನ್ನು ಕೈಗೊಂಡು ಕಾಲೇಜಿನಲ್ಲಿ ಕಲಿತ ಪ್ರತಿಭಾನ್ವಿತ ಕುಡಿಗಳು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ 2022-23 ನೇ ಶೈಕ್ಷಣಿಕ ವರ್ಷದ ಸಾಧಕ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭ ಪ್ರತಿಭಾ ಪ್ರದೀಪ್ತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಮನುಷ್ಯನ ಮನಸ್ಸಿನಲ್ಲಿ ನಾವು ಪರಿಪೂರ್ಣವೆನ್ನುವ ಭಾವನೆ ಇರಬೇಕು. ವಿದ್ಯಾರ್ಥಿಗಳು ತಮ್ಮ ಗುರಿಯನ್ನು ತಲುಪುವ ಮುಖಾಂತರ ಸಾಧನೆಗೈಯ್ಯಬೇಕಾಗಿದೆ. ನಾನು ಈ ಸಾಧನೆ ಮಾಡಬಲ್ಲೆನೇ ಎನ್ನುವ ಅನುಮಾನವನ್ನು ಹೊರಹಾಕಿ ನಾನು ಸಾಧಿಸಿ ತೋರಿಸುತ್ತೇನೆ ಎನ್ನುವ ಆತ್ಮವಿಶ್ವಾಸ ಹುಟ್ಟಬೇಕು. ಜೀವನದಲ್ಲಿ ಬಹು ಎತ್ತರದಲ್ಲಿ ಬೆಳೆಯಬೇಕೆಂಬ ಹಂಬ ಎಷ್ಟೋ ವಿದ್ಯಾರ್ಥಿಗಳಲ್ಲಿದೆ, ಇದಕ್ಕೆ ಪೂರಕವಾಗಿ ಪೋಷಕರು ನಿರಂತರವಾಗಿ ಸಹಕರಿಸುತ್ತಿರುತ್ತಾರೆ. ಬಲೂನ್‌ನ ಬಣ್ಣಗಳಿಗೆ ಮರುಳಾಗದೆ,ಅದರಲ್ಲಿ ತುಂಬಿದ ಗಾಳಿಯನ್ನು ಯೋಚಿಸಬೇಕೆಂಬ ಮಾದರಿಯಂತೆ ವಿದ್ಯಾರ್ಥಿಯೂ ಜೀವನದಲ್ಲಿ ಎತ್ತರಕ್ಕೇರಬೇಕಾದರೆ ನಮ್ಮಲ್ಲಿ ನಾವು ಏನ್ನನ್ನು ಅಳವಡಿಸಿಕೊಳ್ಳುತ್ತೇವೆ ಎನ್ನುವುದು ಮುಖ್ಯವಾಗಿರುತ್ತದೆ. ಜೀವನದಲ್ಲಿ ಗುರಿಯನ್ನು ಮುಟ್ಟುವ ಕನಸು ಕಾಣುತ್ತಾ , ಬದುಕಿನ ಪಯಣವನ್ನು ಖುಷಿಪಡುವುದರ ಮೂಲಕ ಎಲ್ಲಾ ಸನ್ನಿವೇಶಗಳನ್ನು ಕಲಿತು ಮುನ್ನಡೆಯಬೇಕು ಎಂದು ದಿಕ್ಸೂಚಿ ಭಾಷಣ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ ಮಾತನಾಡಿ ವಿವೇಕಾನಂದ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಮುಂದೊಂದು ದಿನ ಉನ್ನತ ಸ್ಥಾನಕ್ಕೇರುತ್ತಾರೆ. ಈ ಮೂಲಕ ವಿವೇಕಾನಂದ ಸಂಸ್ಥೆಯ ಹೆಸರನ್ನು ಎಲ್ಲೆಡೆಯೂ ಪಸರಿಸುತ್ತಾರೆ.ಸಾಧನೆ ಮಾಡಲು ಸಾಕಷ್ಟು ಅವಕಾಶಗಳಿವೆ. ಸಿಕ್ಕಿದ ವೇದಿಕೆಯನ್ನು ಸದುಪಯೋಗಪಡಿಸಿಕೊಂಡು ಸಾಧನೆಗೈಯುತ್ತಾ ನಮ್ಮ ದೇಶಕ್ಕೆ ಉತ್ತಮ ಕೊಡುಗೆಯನ್ನು ನೀಡಬೇಕು. ಪ್ರತಿಭಾನ್ವಿತರಾಗಲು ನಿತ್ಯ ನಿರಂತರ ಸಾಧನೆ ಅತ್ಯಗತ್ಯ. ಪ್ರತಿಭೆಗಳು ಸಮಾಜದ ಬೇರೆ ಬೇರೆ ಕ್ಷೇತ್ರದಲ್ಲಿ ರೂಪುಗೊಂಡು ದೇಶದ ಪರಮ ವೈಭವವನ್ನು ತೋರಿಸುವ ಕೆಲಸವನ್ನು ಕೈಗೊಳ್ಳಬೇಕು.ಭಾರತ ಮಾತೆಗೆ ಸಮಸ್ಯೆ ಬಂದಾಗ ನಮ್ಮ ಪಾತ್ರ ಏನು ಎಂದು ನಮಗೆ ತಿಳಿಯಬೇಕು. ಈ ಮೂಲಕ ಪ್ರತಿಭಾನ್ವಿತರು ಉತ್ತಮ ಸಮಾಜದ ನಿರ್ಮಾಣದ ಕಡೆಗೆ ಗಮನ ಹರಿಸಬೇಕೆಂದು ನುಡಿದರು.
ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಹರಿಕಿರಣ್ ಕೆ ಮಾತನಾಡಿ, ಇಡೀ ರಾಜ್ಯವೇ ವಿವೇಕಾನಂದ ಸಂಸ್ಥೆಯನ್ನು ಗುರುತಿಸುವಷ್ಟು ಬೆಳೆದಿದೆ ಎಂಬುವುದು ಸಂತೋಷದ ವಿಷಯ. ಜೀವನದಲ್ಲಿ ಎದುರಾಗುವ ಎಲ್ಲಾ ಸವಾಲುಗಳನ್ನು ಧೃತಿಗೆಡದೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಎದುರಿಸಬೇಕೆಂದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ವಿಶೇಷ ಸನ್ಮಾನ:
ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗಗಳು ಸೇರಿದಂತೆ 2022-23 ನೇ ಶೈಕ್ಷಣಿಕ ವರ್ಷದಲ್ಲಿ ವಿಶೇಷ ಶ್ರೇಣಿಯಲ್ಲಿ ಸಾಧನೆಗೈದ ೩೪೨ ವಿದ್ಯಾರ್ಥಿಗಳನ್ನು ಹಾಗೂ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ವಾಣಿಜ್ಯ ವಿಭಾಗದಲ್ಲಿ 595 ಅಂಕಗಳನ್ನು ಪಡೆಯುವುದರ ಮೂಲಕ ರಾಜ್ಯಕ್ಕೆ 3ನೇ ಸ್ಥಾನ ಪಡೆದಆದಿತ್ಯನಾರಾಯಣ ಪಿ. ಎಸ್. ವಿಜ್ಞಾನ ವಿಭಾಗದಲ್ಲಿ 592 ಅಂಕ ಗಳಿಸುವುದರ ಮೂಲಕ ರಾಜ್ಯಕ್ಕೆ 5ನೇ ಸ್ಥಾನ ಹಾಗೂ ಇಂಜಿನಿಯರಿAಗ್ ನಲ್ಲಿ 2739ನೇ ರ್‍ಯಾಂಕ್ ಗಳಿಸಿದ ದೀಪ್ತಿಲಕ್ಷ್ಮೀ ಕೆ, ವಿಜ್ಞಾನ ವಿಭಾಗದಲ್ಲಿ 592 ಅಂಕಗಳನ್ನು ಗಳಿಸುವುದರ ಮೂಲಕ ರಾಜ್ಯಕ್ಕೆ 5ನೇ ಸ್ಥಾನ ಹಾಗೂ ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 2539ನೇ ರ್‍ಯಾಂಕ್, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 3480 ನೇ ರ್‍ಯಾಂಕ್ ಗಳಿಸಿದ ಆಶ್ರಯ ಪಿ., ಕಲಾ ವಿಭಾಗದಲ್ಲಿ 591 ಅಂಕಗಳನ್ನು ಪಡೆಯುವುದರ ಮೂಲಕ ರಾಜ್ಯಕ್ಕೆ 3ನೇ ಸ್ಥಾನವನ್ನು ಪಡೆದ ಮಂಜುಶ್ರೀ, ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 39 ನೇ ರ್‍ಯಾಂಕ್, ಇಂಜಿನಿಯರಿಂಗ್ ನಲ್ಲಿ 130ನೇ ರ್‍ಯಾಂಕ್,ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 116 ನೇ ರ್‍ಯಾಂಕ್ ಗಳಿಸಿದ ವರ್ಷಿತ್ ಜೆ, ಇಂಜಿನಿಯರಿಂಗ್ ನಲ್ಲಿ 366ನೇ ರ್‍ಯಾಂಕ್ ಗಳಿಸಿದ ವಿಪುಲ್ ಎಸ್, ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 409 ನೇ ರ್‍ಯಾಂಕ್ ಮತ್ತು ಇಂಜಿನಿಯರಿಂಗ್ ನಲ್ಲಿ 599ನೇ ರ್‍ಯಾಂಕ್ ಗಳಿಸಿದ ರಾಜ್‌ಕಿರಣ್ ಟಿ. ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 507 ನೇ ರ್‍ಯಾಂಕ್ ಮತ್ತು ಇಂಜಿನಿಯರಿಂಗ್ ನಲ್ಲಿ 1659ನೇ ರ್‍ಯಾಂಕ್ ಗಳಿಸಿದ ವೇದಾಕ್ಷ ಎಂ, ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 1331 ನೇ ರ್‍ಯಾಂಕ್ ಹಾಗೂ ಇಂಜಿನಿಯರಿಂಗ್ ನಲ್ಲಿ 3265ನೇ ರ್‍ಯಾಂಕ್ ಗಳಿಸಿದ ಗೌತಮಿ ಪೈ ಎ, ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 536 ನೇ ರ್‍ಯಾಂಕ್ ಹಾಗೂ ಇಂಜಿನಿಯರಿಂಗ್ ನಲ್ಲಿ 1103ನೇ ರ್‍ಯಾಂಕ್ ಗಳಿಸಿದ ಮನಸ್ವಿ ಭಟ್, ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 361 ನೇ ರ್‍ಯಾಂಕ್ ಹಾಗೂ ಇಂಜಿನಿಯರಿಂಗ್ ನಲ್ಲಿ 855ನೇ ರ್‍ಯಾಂಕ್ ಗಳಿಸಿದ ಶ್ರೀರಾಮ್ ಭಟ್, ಎಗ್ರಿಕಲ್ಚರ್ ಬಿಯಸ್ಸಿಯಲ್ಲಿ 924 ನೇ ರ್‍ಯಾಂಕ್ ಹಾಗೂ ಇಂಜಿನಿಯರಿಂಗ್ ನಲ್ಲಿ 2268ನೇ ರ್‍ಯಾಂಕ್ ಗಳಿಸಿದ ಸ್ತುತಿಶೀಲ, ಜೆ.ಇ.ಇ. ಎಡ್ವಾನ್ಸ್ಡ್ ಪರೀಕ್ಷೆಯಲ್ಲಿ ಯಸ್.ಟಿ. ವಿಭಾಗದಲ್ಲಿ 1561 ರ್‍ಯಾಂಕ್ ಗಳಿಸಿದ ಅಮೋಘ್ ಎ.ಪಿ, ಸಿ ಎ ಪರೀಕ್ಷೆಯಲ್ಲಿ ಸಾಧನೆಗೈದ ದೀಪ್ನಾ ಮತ್ತು ಪೂರ್ವಿಕ್ ಇವರನ್ನು ಶಾಲು ಹೊದಿಸಿ ವಿಶೇಷವಾಗಿ ಸನ್ಮಾನಿಸಲಾಯಿತು.
ನಂತರ ವಿದ್ಯಾರ್ಥಿಗಳಾದ ಮಂಜುಶ್ರೀ,ಆಶ್ರಯ ಪಿ,ಚಿತ್ತಾರ ಪಟೇಲ್,ದೀಪ್ತಿಲಕ್ಷೀ, ವರ್ಷಿತ್ ಕಾಲೇಜಿನ ಅನುಭವಗಳನ್ನು ಹಂಚಿಕೊಂಡರು.
ಕಾಲೇಜಿನ ಉಪನ್ಯಾಸಕ ಶ್ರೀಧರ ಶೆಟ್ಟಿಗಾರ್ ಮಾತನಾಡಿ ಪ್ರತಿಭಾ ಪ್ರದೀಪ್ತಿ ಕಾರ್ಯಕ್ರಮ ಎಂಬ ಹೆಸರು ಕೇವಲ ಅಂಕಕ್ಕೆ ಸೀಮಿತವಾಗದೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಗುರುತಿಸುವುದು ಎಂದರ್ಥ. ಸಾಧಕ ವಿದ್ಯಾರ್ಥಿಗಳಿಗೆ ಮಾಡುವ ಸನ್ಮಾನಗಳು ಎಲ್ಲರ ಪಾಲಿಗೆ ಆಶೀರ್ವಾದವಾಗಿ ಪರಿಣಮಿಸಿ ಮತ್ತಷ್ಟು ಸಾಧನೆ ಮಾಡಲು ಪ್ರೇರಣೆಯಾಗಲಿ. ವಿದ್ಯಾರ್ಥಿಗಳು ಸಮಾಜಮುಖಿಯಾಗಿ ಸಮಾಜದ ಕೀರ್ತಿಯನ್ನು ಎತ್ತಿಹಿಡಿಯುವಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳಯಬೇಕು. ಎಲ್ಲಾ ವಿದ್ಯಾರ್ಥಿಗಳ ಭವಿಷ್ಯ ಸುಂದರವಾಗಿರಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಎಂ. ಗೋಪಾಲಕೃಷ್ಣ ಭಟ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್, ವಿವೇಕಾನಂದ ಪ್ಯಾರಾಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಗುರುರಾಜ ಎಂ. ಪಿಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಮಹೇಶ ನಿಟಿಲಾಪುರ ಸ್ವಾಗತಿಸಿ ಉಪನ್ಯಾಸಕ ಪರಮೇಶ್ವರ ಶರ್ಮ ವಂದಿಸಿದರು. ಉಪನ್ಯಾಸಕಿ ದಯಾಮಣಿ ಕಾರ್ಯಕ್ರಮವನ್ನು ನಿರೂಪಿಸಿದರು