ಬೆಳಂದೂರಿನಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ

0

ಪುತ್ತೂರು: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ತಾಲೂಕು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ಸವಣೂರು ವಲಯ,
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸವಣೂರು ವಲಯ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಬೆಳಂದೂರು (ಬಿ) ಇದರ ಪ್ರಾಯೋಜಕತ್ವದಲ್ಲಿ
New VISION Generation programme ಕಾರ್ಯಕ್ರಮದಡಿಯಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರವು ಜೂ.25 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಳಂದೂರಿನಲ್ಲಿ ಜರಗಿತು.

ಶಿಬಿರದ ಉದ್ಘಾಟನೆಯನ್ನು ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯ ಶಿವಪ್ರಸಾದ್ ರೈ ಮೈಲೇರಿರವರು ನೆರವೇರಿಸಿ ಮಾತನಾಡಿ, ಮನುಷ್ಯನಿಗೆ ಇತರ ಅಂಗಗಳೊಂದಿಗೆ ಕಣ್ಣು ಸಹ ಪ್ರಮುಖವಾದದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಣ್ಣಿನ ಬಗ್ಗೆ ಕಾಳಜಿವಹಿಸಬೇಕಾಗಿದೆ. ಆದುದರಿಂದ ಇಂತಹ ಕಣ್ಣಿನ ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನವನ್ನು ಪಡಕೊಳ್ಳಬೇಕೆಂದು ಹೇಳಿದರು. ಮುಖ್ಯ ಅಥಿತಿಗಳಾಗಿರುವ ಡಾ.ಹೇಮಂತ್ ಕುಮಾರ್ ಮಾತನಾಡಿ, ಜನರು ಇಂತಹ ಉಚಿತ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಕಣ್ಣಿನ ತೊಂದರೆಯ ಬಗ್ಗೆ ಪ್ರಾಥಮಿಕವಾಗಿ ತಿಳಿದುಕೊಂಡರೆ ಉತ್ತಮ ಜೊತೆಗೆ, ಅದರ ಕಾಳಜಿ ವಹಿಸಬೇಕೆಂದರು.

ಅಧ್ಯಕ್ಷತೆ ವಹಿಸಿದ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಶ್ ಕೆ ಸವಣೂರು ಮಾತನಾಡಿ, ಯೋಜನೆಯು ಅದೆಷ್ಟೋ ಮನೆಯನ್ನು ಉಳಿಸುವ ಹಾಗೂ ಬೆಳೆಸುವ ಕಾರ್ಯವನ್ನು ಮಾಡುತ್ತಿದೆ. ದುಶ್ಚಟಕ್ಕೆ ಒಳಗಾದ ಅದೆಷ್ಟೋ ವ್ಯಕ್ತಿಗಳಿಗೆ ಮರು ಜೀವನವನ್ನು ನೀಡುವ ಕೆಲಸವನ್ನು ಮಾಡುತ್ತಿದೆ. ಆ ಸೇವೆಯಲ್ಲಿ ನಾವು ಸಹ ತೊಡಗಿಸಿಕೊಳ್ಳಬೇಕು ಎಂದರು. ವೇದಿಕೆಯಲ್ಲಿ ಮಂಗಳೂರಿನ ಹಾಫ್ ಕಾಮ್ಸ್ ನಿರ್ದೇಶಕ ಸಚಿನ್ ಕುಮಾರ್ ಜೈನ್ ಬೆಳಂದೂರು, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಜಾನಕಿ, ಬೆಳಂದೂರು ಗ್ರಾಮಪಂಚಾಯತ್ ಸದಸ್ಯ ಜಯರಾಮ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸವಣೂರು ಜನಜಾಗೃತಿ ವೇದಿಕೆಯ ಸದಸ್ಯ ಲೋಕನಾಥ ವಜ್ರಗಿರಿ, ಸೇವಾ ಪ್ರತಿನಿಧಿ ರಿತೇಶ್, ನಿವೃತ್ತ ಮುಖ್ಯಗುರು ಸೋಮಪ್ಪರವರುಗಳು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಲಯ ಮೇಲ್ವಿಚಾರಕಿ ಹರ್ಷಕುಮಾರಿ ಸ್ವಾಗತಿಸಿ, ವಲಯ ಸದಸ್ಯ ವೇಣುಗೋಪಾಲ ಕಳುವಾಜೆ ವಂದಿಸಿದರು. ಸೇವಾಪ್ರತಿನಿಧಿ ಕಾವ್ಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here