ವಿಶೇಷಚೇತನರ ಬಾಳಿಗೆ ಬೆಳಕಾದ ಮಜ್ಜಾರಡ್ಕ ಯುವಶಕ್ತಿ ಬಳಗ ಸಂಘಟನೆಯಿಂದ ಮನೆಗೆ ಶ್ರಮದಾನದ ಮೂಲಕ ಪೈಟಿಂಗ್ ಕಾರ್ಯ

0

ಪುತ್ತೂರು: ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶ್ರೀ ವಿಷ್ಣು ಯುವಶಕ್ತಿ ಬಳಗ ಮಜ್ಜಾರಡ್ಕ ಇದರ ಮುತುವರ್ಜಿಯಲ್ಲಿ ವಿಶೇಷಚೇತನ ಮೋಹನ್ ದರ್ಬೆತಡ್ಕ ಇವರ ಅರ್ಧದಲ್ಲಿ ಬಾಕಿಯಾಗಿದ್ದ ಮನೆಯನ್ನು ಪೂರ್ಣಗೊಳಿಸುವ ಕೆಲಸವನ್ನು ಮಾಡುತ್ತಿದ್ದು, ಇದೀಗ ಮನೆಯು ಹಂತದಲ್ಲಿದ್ದು ಸಂಘನೆಯ ವತಿಯಿಂದ ಪೈಟಿಂಗ್ ಕೆಲಸವನ್ನು ಶ್ರಮದಾನದ ಮೂಲಕ ಮಾಡಿಕೊಡಲಾಯಿತು.


ಸಂಘಟನೆಯ ಸಂಘಟನಾ ಕಾರ್ಯದರ್ಶಿ, ಸಂಗೊಳ್ಳಿ ರಾಯಣ್ಣ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ರಾಜೇಶ್ ಕೆ ಮಯೂರ, ಪ್ರದಾನ ಕಾರ್ಯದರ್ಶಿ ಯತೀಶ್ ನಾಯ್ಕ ಕಠಾರ, ಬೆಳ್ಳಿಪ್ಪಾಡಿ. ಸದಸ್ಯರುಗಳಾದ ಚೇತನ್ ಕುಮಾರ್ ಕೊಡಿಮರ, ಹೇಮಚಂದ್ರ ಕೋಡಿಯಡ್ಕ, ಸುಭಾಸ್ ಕೊಲ್ಲಾಜೆ, ಸುನಿಲ್ ವಾಣಿನಗರ ಪೆರ್ಲ ಇವರುಗಳು ಒಂದು ದಿನವನ್ನು ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡರು. ಗೋಡೆಗೆ ಬಣ್ಣವನ್ನು ಸೇವಾ ರೂಪದಲ್ಲಿ ಸರ್ಫ್ ಕೋಟ್ಸ್ ಪೈಂಟ್ ಕಂಪೆನಿಯವರು ನೀಡಿದ್ದರು. ಶೀಘ್ರದಲ್ಲಿ ಮನೆಯ ಹಸ್ತ೦ತರ ಕಾರ್ಯಕ್ರಮ ನಡೆಯಲಿದ್ದು ಸಂಘಟನೆಯ ವತಿಯಿಂದ ಇದು ಮನೆ ಬೆಳಕು ಯೋಜನೆಯಡಿಯಲ್ಲಿ ನಿರ್ಮಾಣ ಮಾಡಿ ಕೊಡುತಿರುವ ೨ ನೇ ಮನೆಯಾಗಿದೆ ಎಂದು ಸಂಘಟಕ ರಾಜೇಶ್ ಕೆ ಮಯೂರ ತಿಳಿಸಿದರು.ಮೋಹನ್ ದರ್ಬೆತ್ತಡ್ಕ ವಂದಿಸಿದರು.

LEAVE A REPLY

Please enter your comment!
Please enter your name here